ಹೈಟೆಕ್ ವೇಶ್ಯಾವಾಟಿಕೆ; ಸಿಸಿಬಿಯಿಂದ 6 ಹುಡುಗಿಯರ ರಕ್ಷಣೆ
ಬೆಂಗಳೂರು, ಫೆಬ್ರವರಿ 19; ಸಲೂನ್ ಮತ್ತು ಸ್ಪಾ ಹೆಸರು ಹೇಳಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೋರಮಂಗಲದ ಕಟ್ಟಡವೊಂದರ ಮೇಲೆ ಬುಧವಾರ ದಾಳಿ ಮಾಡಿ ಬೆಂಗಳೂರು ಸಿಸಿಬಿ ಪೊಲೀಸ್ ಒಬ್ಬನನ್ನು ಬಂಧಿಸಿದ್ದಾರೆ.
ಕೋರಮಂಗಲದ ಕೆಬಿಎಚ್ ಕಾಲೋನಿಯ ಜಾಕ್ ಸಲೂನ್ ಮತ್ತು ವೆಲ್‌ನೆಸ್ ಸ್ಪಾ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ.
ಪ್ರಕರಣದಲ್ಲಿ ಮೋನಾಲಿ ಘೋಷ್ (32) ಎಂಬವನನ್ನು ಬಂಧಿಸಲಾಗಿದ್ದು, ಸಿದ್ದಾರ್ಥ ಎಂಬುವ ನಾಪತ್ತೆಯಾಗಿದ್ದಾನೆ. ಬಂಧಿತನಿಂದ ಒಂದು ಒಪ್ಪೋ ಮೊಬೈಲ್ ಹಾಗೂ ಐದು ಸಾವಿರ ರುಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಕೆಲಸದ ಆಮೀಷ ಒಡ್ಡಿ ಉತ್ತರ ಭಾರದತ ಯುವತಿಯರನ್ನು ಕರೆ ತಂದು ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇಂಟರನೆಟ್, ಮೊಬೈಲ್ ಆಪ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ, ಹಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications