SWR: ಬೆಂಗಳೂರಿನಿಂದ ಇಲ್ಲಿಗೆ ಒಂದು ಟ್ರಿಪ್ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಅಕ್ಟೋಬರ್ 23: ದೀಪಾವಳಿ ಹಾಗೂ ಛತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ (South Western Railway) ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಅಕ್ಟೋಬರ್ 24ರವರೆಗೆ ಒಂದು ಟ್ರಿಪ್ ರೈಲು ಸೇವೆ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗದವರಿಗೆ ಸಿಗಲಿದೆ.
ಪ್ರಯಾಣಿಕರ ದಟ್ಟಣೆ ಸಂಬಂಧ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಕಲಬುರಗಿ ಮರಳಿ ನಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಮಾರ್ಗದಲ್ಲಿ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಸೇವೆ ಲಭ್ಯವಾಗಲಿದೆ. ಬೆಂಗಳೂರು ಕಂಟೋನ್ಮೆಂಟ್‌ನಿಂದ ಕಲಬುರಗಿಗೆ ಅಕ್ಟೋಬರ್ 23ರ ರಾತ್ರಿ 7.40 ಕ್ಕೆ (ಗುರುವಾರ) ಮೊದಲ ರೈಲು (06557) ಹೊರಡಲಿದೆ. ಮರುದಿನ ಬೆಳಗ್ಗೆ 7.30 ಕ್ಕೆ (ಶುಕ್ರವಾರ) ತಲುಪಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಲಬುರಗಿಯಿಂದ ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (06558) ಅಕ್ಟೋಬರ್ 24 ಬೆಳಗ್ಗೆ 9.30 ಕ್ಕೆ ಶುಕ್ರವಾರ ಹೊರಡಲಿದೆ. ಅದೇ ದಿನ ರಾತ್ರಿ 8.30 ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ. ಈ ರೈಲುಗಳು ಪ್ರಯಾಣಿಕರಿಗೆ ಹಬ್ಬದ ಸಮಯದಲ್ಲಿ ಅನುಕೂಲವಾಗುವಂತೆ ಕೇವಲ ಒಂದು ಟ್ರಿಪ್‌ನ ವಿಶೇಷ ಎಕ್ಸ್‌ಪ್ರೆಸ್ ರೈಲುಗಳಾಗಿ ಓಡಿಸಲಾಗುತ್ತಿದೆ. ಈ ರೈಲು ಸೇವೆ ಅಕ್ಟೋಬರ್ 20 ರಂದು ಕೋಚಿಂಗ್ ಸಂಯೋಜನೆ ಇದೆ.
ಪ್ರಯಾಣಿಕರು ರೈಲುಗಳ ವೇಳಾಪಟ್ಟಿ ಹಾಗೂ ಆಸನ ಲಭ್ಯತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ http://www.enquiry.indianrail.gov.in ಅಥವಾ NTES ಆಪ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಈ ವಿಶೇಷ ರೈಲುಗಳು ಹಬ್ಬದ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಇದೇ ದೀಪಾವಳಿ ಪ್ರಯುಕ್ತ ಬೆಂಗಳೂರು ಕಂಟ್ರೋನ್ಮೆಂಟ್-ಕಲಬುರಗಿಗೆ ವಿಶೇಷ ರೈಲುಗಳನ್ನು ಬಿಡಲಾಗಿತ್ತು. ಅಕ್ಟೋಬರ್ 18ರಿಂದ 22 ರವರೆಗೆ ಕೆಲವು ರೈಲುಗಳನ್ನು ಓಡಿಸಿತ್ತು. ಇದರ ಬೆನ್ನಲ್ಲೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಮತ್ತೊಂದು ಸೆಟ್ ರೈಲನ್ನು ಕಾರ್ಯಾಚರಣೆಗೆ ಇಳಿಸಿದೆ.












Click it and Unblock the Notifications