Bengaluru Train: ಬೆಂಗಳೂರು-ಬೀದರ್ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ಅಕ್ಟೋಬರ್ 02: ದಸರಾ ಹಬ್ಬಕ್ಕೆ ಇಂದು ಕೊನೆಯ ದಿನವಾಗಿದೆ. ಹಬ್ಬಕ್ಕೆ ತೆರಳಿದ ಪ್ರಯಾಣಿಕರು ಊರುಗಳಿಂದ ವಾಪಾಸ್ ಬರುವವರಿಗೂ ಅನುಕೂಲವಾಗುವಂತೆ ನೈಋತ್ಯ ರೈಲ್ವೆ (South Western Railway) ಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಮಾಡುತ್ತಿದೆ. ಪ್ರಯಾಣಿಕರ ಸೌಲಭ್ಯಕ್ಕಾಗಿ ಬೀದರ್-ಬೆಂಗಳೂರು ಕ್ಯಾಂಟೋನ್ಮೆಂಟ್ ಮಾರ್ಗದಲ್ಲಿ ಎರಡು ವಿಶೇಷ ರೈಲುಗಳನ್ನು ಸೇವೆ ನೀಡಿದೆ. ಈ ರೈಲು ಅಕ್ಟೋಬರ್ 4ರವರೆಗೆ ವಿಶೇಷ ರೈಲು ಸೇವೆ ಸಿಗಲಿದೆ.
ದಸರಾ ವಿಶೇಷ ಎಕ್ಸ್‌ಪ್ರೆಸ್ ಬೀದರ್‌ನಿಂದ ಬೆಂಗಳೂರು ಕ್ಯಾಂಟೋನ್ಮೆಂಟ್ ರೈಲು (07063) 2025 ಅಕ್ಟೋಬರ್ 4 (ಶನಿವಾರ) ರಂದು ಸಂಚರಿಸಲಿದೆ. ಮಧ್ಯಾಹ್ನ 2.40 ಕ್ಕೆ ಬೀದರ್‌ನಿಂದ ಹೊರಟು, ಮುಂದಿನ ದಿನ ಬೆಳಗ್ಗೆ 5.00 ಗಂಟೆಗೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ.

ಇದೇ ಮಾರ್ಗದಲ್ಲಿ ಬೀದರ್-ಬೆಂಗಳೂರು ವಿಶೇಷ ರೈಲು (07064) ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣದಿಂದ 2025 ಅಕ್ಟೋಬರ್ 5 (ಭಾನುವಾರ) ರಂದು ಪ್ರಯಾಣ ಆರಂಭಿಸಲಿದೆ. ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ರಾತ್ರಿ 10.30 ಗಂಟೆಗೆ ಹೊರಟು, ಮುಂದಿನ ದಿನ ಮಧ್ಯಾಹ್ನ 2.40 ಕ್ಕೆ ಬೀದರ್ ನಿಲ್ದಾಣಕ್ಕೆ ಬಂದು ಸೇರಲಿದೆ.
ಈ ಮಾರ್ಗಗಳ ಎರಡು ಸಂಚಾರ ಮಾರ್ಗಗದ ಮಧ್ಯೆ ಈ ವಿಶೇಷ ರೈಲುಗಳು ಯಲಹಂಕ, ಧಾರವಾಡ, ಅನಂತಪುರ, ಗುಂಟಕಲ್, ಮಂತ್ರಾಲಯಂ ರಸ್ತೆ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ ಹಾಗೂ ಹುಮನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ. ಎರಡೂ ದಿಕ್ಕಿನ ಸಂಚಾರದಲ್ಲಿ ನಿಲುಗಡೆ ನೀಡಲಿವೆ.
ದಸರಾ ಹಬ್ಬದ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಈ ವಿಶೇಷ ರೈಲುಗಳನ್ನು ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ. ಹಬ್ಬದ ಸಂಭ್ರಮವನ್ನು ಅನುಭವಿಸಲು ಪ್ರಯಾಣಿಕರಿಗೆ ಇದು ಸೌಲಭ್ಯಕರವಾಗಲಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ಕರ್ನಾಟಕ ರಾಜ್ಯದೊಳಗೆ ಹಾಗೂ ಹೊರ ರಾಜ್ಯಗಳವರೆಗೂ ವಿಶೇಷ ರೈಲುಗಳ ಸೇವೆ ಆರಂಭಿಸಿದೆ. ದಸರಾ, ದೀಪಾವಳಿ ಪ್ರಯುಕ್ತ ಈ ಸೇವೆ ನೀಡುತ್ತಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ಬೆಳಗಾವಿ, ಬೆಂಗಳೂರು-ಎರ್ನಾಕುಲಂ, ಬೆಂಗಳೂರಿನಿಂದ ಮಧ್ಯ ಭಾರತದ ಇತರ ರಾಜ್ಯಗಳಿಗೂ ವಿಶೇಷ ರೈಲು ಸೇವೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯ ಹೊರ ರಾಜ್ಯಕ್ಕೆ ಹಬ್ಬಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
ಬೆಂಗಳೂರು ಕೆಎಸ್‌ಆರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಯಶವಂತಪುರ, ಕಂಟೋನ್ಮೆಂಟ್ ನಿಲ್ದಾಣಗಳಿಂದ ಬೇರೆ ಬೇರೆ ಮಾರ್ಗಗಳಲ್ಲಿ ರೈಲುಗಳು ಸಂಚಾರ ಸೇವೆ ನೀಡುತ್ತಿವೆ.












Click it and Unblock the Notifications