ಪಾನಮತ್ತ ಊಬರ್ ಚಾಲಕ: ಕ್ಯಾಬ್ ಓಡಿಸಿದ ಪ್ರಯಾಣಿಕ
ಬೆಂಗಳೂರು, ಸೆಪ್ಟೆಂಬರ್ 15: ಊಬರ್ ಚಾಲಕನೊಬ್ಬ ಪಾನಮತ್ತನಾಗಿ ಕ್ಯಾಬ್ ಚಲಾಯಿಸಲು ಸಾಧ್ಯವಾಗದೆ ಪ್ರಯಾಣಿಕರೇ ಕ್ಯಾಬ್ ಓಡಿಸಿಕೊಂಡು ಮನೆ ತಲುಪಿದ ಘಟನೆ ಬೆಂಗಳೂರಲ್ಲಿ ನಿಡೆದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಊಬರ್ ಅಪ್ಲಿಕೇಷನ್ ಮೂಲಕ ಸೂರ್ಯ ಒರುಗಂಟಿ ಎಂಬುವವರು ಕ್ಯಾಬ್ ಬುಕ್ ಮಾಡಿದಾಗ ಅಪ್ಲಿಕೇಷನ್ ನಲ್ಲಿದ್ದ ಚಾಲಕನಿಗೂ ಬಂದಿರುವ ಚಾಲಕನಿಗೂ ಸಾಮ್ಯತೆ ಇರಲಿಲ್ಲ. ಆದರೂ ಸೂರ್ಯ ಕ್ಯಾಬ್ ನಲ್ಲಿ ಹತ್ತಿ ಕುಳಿತಾಗ ಕ್ಯಾಬ್ ಚಾಲಕ ವಾಹನ ಓಡಿಸುವ ಸ್ಥಿತಿಯಲ್ಲಿರಲಿಲ್ಲ.
Here's a video of the driver who was drunk enough to not know he was being recorded. He was not the driver claimed by the app either. pic.twitter.com/IPnwBkTZ7R
— Surya Oruganti (@suryaoruganti) September 9, 2018
ಆಗ ಪಾನಮತ್ತನಾಗಿ ಓಲಾಡುತ್ತಿರುವುದನ್ನು ಕಂಡ ಪ್ರಯಾಣಿಕ ಸೂರ್ಯ ಆತನನ್ನು ಪಕ್ಕದ ಸೀಟಿನಲ್ಲಿ ಕೂರಿಸಿ ತಾವೇ ಕಾರ್ ಚಲಾಯಿಸಿಕೊಂಡು ಮನೆ ತಲುಪಿದ್ದಾರೆ, ಈ ಎಲ್ಲಾ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿರುವ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸಂಪೂರ್ಣ ವಿವರಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಇದಕ್ಕೆ ಟ್ವಿಟ್ಟರ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಊಬರ್ ಸಂಸ್ಥೆಯು ಪ್ರಕರಣ ಕುರಿತಂತೆ ತಮ್ಮ ಭದ್ರತಾ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಊಬರ್ ಹಾಗೂ ಓಲಾದಂತಹ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆಗಳ ಚಾಲಕರ ವಿರುದ್ಧ ನಾನಾ ರೀತಿಯ ದೂರುಗಳು ಬರುತ್ತಿದ್ದು, ವಿಶೇಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದವು.












Click it and Unblock the Notifications