ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು 5 ವರ್ಷ ಬೇಕಂತೆ!
ಬೆಂಗಳೂರು, ನವೆಂಬರ್, 17: ರಾಸಾಯನಿಕ ನೊರೆಯಿಂದ ಬೆಂಗಳೂರು ನಾಗರಿಕರನ್ನು ಭಯಭೀತರಾಗಿ ಮಾಡಿರುವ ಬೆಳ್ಳಂದೂರು ಕೆರೆ ಯನ್ನು ಸಂಪೂರ್ಣ ಸ್ವಚ್ಛ ಮಾಡಲು 5 ವರ್ಷ ತಗಲುತ್ತದೆ ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಬೆಳ್ಳಂದೂರು ಮತ್ತು ವರ್ತೂರು ಕೆರೆಯನ್ನು ಸ್ವಚ್ಛ ಮಾಡಲು ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸುಮಾರು 800 ಮಿಲಿಯನ್ ಲೀಟರ್ ಗಿಂತ ಅಧಿಕ ಕೊಳಚೆ ಕೆರೆಯನ್ನು ಸೇರಿಕೊಂಡಿದೆ. ಮೊದಲು ಅದು ಬರು ಮೂಲವನ್ನು ಬಂದ್ ಮಾಡಬೇಕಾಗಿದೆ. ಇದೆಲ್ಲ ಸಮಸ್ಯೆಗಳನ್ನು ಒಂದೊಂದಾಗಿ ನಿವಾರಣೆ ಮಾಡುತ್ತ ಕೆರೆಯನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ಮಾಡಲು 5 ವರ್ಷ ಬೇಕಾಗುವುದು ಎಂದು ಭಾಸ್ಕರ್ ಹೇಳಿದ್ದಾರೆ.[ಬೆಳ್ಳಂದೂರು ಕೆರೆ ಶುದ್ಧ ಮಾಡಲು ನೀವು ಸಹಿ ಹಾಕಿ]

ಕೆರೆಗೆ ಸೂಕ್ತ ತಡೆಗೋಡೆ, ನೊರೆ ಬಾರದಂತೆ ರಾಸಾಯನಿಕ ಬೇರ್ಪಡಿಸುವಿಕೆ, ನೀರು ಸರಾಗವಾಗಿ ಹರಿದು ಕೆರೆಗೆ ಸೇರಲು ಮಾರ್ಗ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]
ಕೆರೆಯ ಪ್ರದೇಶದಲ್ಲಿರುವ ಕಾರ್ಖಾನೆಗಳ ಮೇಲೆ ನಿಗಾ ಇಡಲಾಗುವುದು. ಅಲ್ಲದೇ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕೆರೆ ಶುಚಿತ್ವದ ಬಗ್ಗೆ ಕ್ರಮ ತೆಗದೆಕುಕೊಳ್ಳು ವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications