ಬೆಂಗಳೂರು, ದೆಹಲಿ ನಗರ ಹೀಟ್‌ ಐಲ್ಯಾಂಡ್‌ಗಳಾಗುತ್ತಿವೆ: ವರದಿ

ಬೆಂಗಳೂರು, ಅಕ್ಟೋಬರ್ 8: ದೆಹಲಿಯಂತೆ ಬೆಂಗಳೂರು ಕೂಡ ಬಿಸಿಲ ಬೇಗೆಯಲ್ಲಿ ಬೇಯುತ್ತಿದೆ ಎನ್ನುವ ಐಪಿಸಿಸಿ ತಜ್ಞರ ಅಭಿಪ್ರಾಯ ಉಲ್ಲೇಖಿಸಿ, ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಪ್ರಮಾಣದ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯಸಬಾ ಸದಸ್ಯ ರಾಜೀವ್ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಜಾಗತಿಕ ತಾಪಮಾನದ ಗರಿಷ್ಠ 1.5 ಡಿಗ್ರಿ ಉಷ್ಣಾಂಶ ಇರಬೇಕು. ಆದರೆ ಇದೀಗ 2 ಡಿಗ್ರಿ ಸೆಲ್ಸಿಯಸ್ ಗೆ ಬಂದು ತಲುಪಿದ್ದು, ಇದರಿಂದ ಎಷ್ಟು ಅನನುಕೂಲ ಉಂಟಾಗಲಿದೆ ಎಂದು ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ ನ ವಿಜ್ಞಾನಿಗಳು ತಿಳಿಸಿದ್ದಾರೆ.

ವರದಿ ಪ್ರಕಾರ 1.5 ಡಿಗ್ರಿ ಉಷ್ಣಾಂಶ ಹೆಚ್ಚಳ ತುಂಬಾ ಅಪಾಯಕಾರಿಯಾದದ್ದು, ಇಲ್ಲಿರುವ ಮನುಷ್ಯ, ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾಯಕಾರಿಯಾದದ್ದು ಅದರಲ್ಲೂ ಇದೀಗ ಅರ್ಧ ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಿದ್ದರೂ ಕೂಡ ಇದರಿಂದ ಸಾಕಷ್ಟು ದುಷ್ಪರಿಣಾಮ ಉಂಟಾಗಲಿದೆ.

Bengaluru becoming urban heat island because of Corrupt BBMP:Rajeev

ಈಗಿನ ಮಾಹಿತಿ ಪ್ರಕಾರ 2030 ಹಾಗೂ 2052ನಲ್ಲಿ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವೇ ಮುಂದುವರೆಯಲಿದೆ. ಈಗಾಗಲೇ ಭಾರತವು ನಿತ್ಯ ಹವಾಮಾನ ಬದಲಾವಣೆಗಳನ್ನು ವೀಕ್ಷಿಸುತ್ತಿದೆ. ಇದರಿಂದ ಕೇದಾರನಾಥ, ಚೆನ್ನೈ ಹಾಗೂ ಕೇರಳದಲ್ಲಿ ಆಗಿರುವ ಪ್ರವಾಹವನ್ನು ಜನರು ಮರೆತಿಲ್ಲ.

ಬೆಂಗಳೂರು ಕೂಡ ಇದೇ ರೀತಿ ತೊಂದರೆಯನ್ನು ಅನುಭವಿಸದಂತೆ ಮಾಡಲು ಬಿಬಿಎಂಪಿ ಈಗಲೇ ಎಚ್ಚರಿಕೆವಹಿಸಿದ್ದರೆ ಮುಂದೊಂದು ದಿನ ದೊಡ್ಡ ಅನಾಹುತ ಕಾದಿದೆ. ಹೆಚ್ಚೆಚ್ಚು ಗಿಡಗಳನ್ನು ನೆಡಬೇಕು, ಬೆಂಗಳೂರನ್ನು ತಂಪಾಗಿರಲಸಲು ಸಾಧ್ಯವಾದ ಕೆಲಸವನ್ನು ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+