ವಿವಾಹೇತರ ಸಂಬಂಧದ ರಾಜಧಾನಿ ಬೆಂಗಳೂರು!
ಬೆಂಗಳೂರು,ಮೇ6: ವಿವಾಹೇತರ ದೈಹಿಕ ಸಂಬಂಧ ಇರಿಸಿಕೊಳ್ಳುವವರಲ್ಲಿ ಸಿಲಿಕಾನ್ ನಗರಿ ದೇಶದಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿದೆ.
ವೆಬ್‌ಸೈಟ್ ಒಂದರಲ್ಲಿ ದೊರೆತ ಮಾಹಿತಿ ಪ್ರಕಾರ 1 ಲಕ್ಷ 35 ಸಾವಿರ ಬೆಂಗಳೂರಿಗರು ವಿವಾಹೇತರ ಸಂಬಂಧ ಹೊಂದಿದ್ದಾರೆ. ಅವರಲ್ಲಿ 43,200 ಮಹಿಳೆಯರಿದ್ದಾರೆ. ಗ್ಲೀಡನ್ ಎನ್ನುವ ಸಂಸ್ಥೆಯು ಮಾಹಿತಿ ನೀಡಿದ್ದು, ಆ ಕಂಪನಿಯ ವೆಬ್‌ಸೈಟ್‌ನಲ್ಲಿ ಬೆಂಗಳೂರಿಗರೇ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಹೀಗಾಗಿ ಬೆಂಗಳೂರಿನ ಅವಿಶ್ವಾಸದ ರಾಜಧಾನಿ ಎನ್ನಬಹುದಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಈ ಅಂಕಿ ಸಂಖ್ಯೆ ಹಾಗೂ ಬೆಳವಣಿಗೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

1.2 ಕೋಟಿ ಜನರಿರುವ ನಗರದಲ್ಲಿ 1.35 ಲಕ್ಷ ಜನ ವಿವಾಹೇತರ ಸಂಬಂಧವಿರಿಸಿಕೊಂಡಿರುವುದು ದೊಡ್ಡ ವಿಚಾರವೇನಲ್ಲ, ಆದರೆ ಈ ವೆಬ್‌ಸೈಟ್‌ನಲ್ಲಿ ದಾಖಲಾಗಿರುವ ಅಂಕಿ ಸಂಖ್ಯೆಗಳು ಪ್ರಶ್ನಾರ್ಹವಾಗಿವೆ. ಹೀಗಾಗಿ ಇದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ವಿವಾಹೇತರ ಸಂಬಂಧ ಎನ್ನುವುದು ಸರ್ವೇ ಸಾಮಾನ್ಯ, ಎಷ್ಟೋ ಜನರಿಗೆ ಅಂತಹ ಡೇಟಿಂಗ್ ವೆಬ್‌ಸೈಟ್‌ಗಳು ಲಭ್ಯವಿರದೆ ಮಾಹಿತಿ ಹೊರಬಂದಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯ ಪ್ರಮುಖಾಂಶಗಳು
-ಸಲಿಂಗಕಾಮ ಅಪರಾಧವಲ್ಲ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮದುವೆಯಾದವರಲ್ಲಿ ಸಲಿಂಗಕಾಮ ಶೇ.45ರಷ್ಟು ಹೆಚ್ಚಳ.
-ಶೇ.77ರಷ್ಟು ಭಾರತೀಯ ಮಹಿಳೆಯರು ವಿವಾಹೇತರ ಸಂಬಂಧ ಹೊಂದಿದ್ದಾರೆ
-ಶೇ.72ರಷ್ಟು ಭಾರತೀಯರು ವಿವಾಹೇತರ ಸಂಬಂಧವನ್ನು ಹೊಂದಿರುವುದನ್ನು ತಮ್ಮ ಜೊತೆಗಾರರಿಗೆ ತಿಳಿಸುವುದಿಲ್ಲ.
-ವಿವಾಹೇತರ ಸಂಬಂಧ ನಿರ್ವಹಿಸಲು ಶೇ.17ರಷ್ಟು ಪುರುಷರು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿರುತ್ತಾರೆ.












Click it and Unblock the Notifications