Bengaluru: ಮಧ್ಯವರ್ತಿಗಳ ಕಾಟವಿಲ್ಲದೇ ಕೋಟಿ ಕೋಟಿ ಹಣ ಗಳಿಕೆ: ಆಟೋ ಚಾಲಕರು ಫುಲ್ ಖುಷ್
ಮಧ್ಯವರ್ತಿಗಳ ಹಾವಳಿ ಇಲ್ಲದೇ ಮೊಬೈಲ್ ಅಪ್ಲಿಕೇಷನ್ ಒಂದರ ಸಹಾಯದಿಂದ ಕೆಲವೇ ತಿಂಗಳಲ್ಲಿ ಬೆಂಗಳೂರು ನಗರ ಆಟೋ ಚಾಲಕರು ಕೋಟಿ ಕೋಟಿ ಹಣ ಗಳಿಸಿದ್ದಾರೆ. ಈ ಬಗ್ಗೆ ಪೂರ್ಣ ಮಾಹಿತಿಗೆ ಮುಂದೆ ಓದಿ.
ಬೆಂಗಳೂರು, ಮಾರ್ಚ್ 07: ಮಧ್ಯವರ್ತಿಗಳ ಹಾವಳಿ ಇಲ್ಲದೇ ಕೋಟಿಗಟ್ಟಲೇ ಹಣ ಸಂಪಾದಿಸಬಹುದು ಎಂಬ ಮಾತಿಗೆ ಬೆಂಗಳೂರು ನಗರದ ಆಟೋ ಚಾಲಕರು ಸಾಕ್ಷಿಯಾಗಿದ್ದಾರೆ.
ಹೌದು, ಯಾವುದೇ ಮಧ್ಯವರ್ತಿಗಳು ಕಾಟವಿಲ್ಲದೇ ಕೋಟಿ ಕೋಟಿ ಹಣ ಸಂಪಾದಿಸಬಹುದು ಎಂದರೆ ನೀವು ನಂಬಲೇಬೇಕು. ಕಾರಣ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘ ಕಂಡುಕೊಂಡ ಮಾರ್ಗದಿಂದ ಇಷ್ಟು ಪ್ರಮಾಣದಲ್ಲಿ ಹಣ ಗಳಿಕೆ ಸಾಧ್ಯವಾಗಿದೆ.
ಕಳೆದ ವರ್ಷ 2022ರ ನವೆಂಬರ್ ನಲ್ಲಿ ಆಟೋ ಚಾಲಕರ ಸಂಘವು 'ನಮ್ಮ ಯಾತ್ರಿ' ಮೊಬೈಲ್ ಅಪ್ಲಿಕೇಷನ್ ಒಂದನ್ನು ತಯಾರಿಸಿಕೊಂಡಿತ್ತು. ಅದರಿಂದಾಗಿ ಆಟೋ ಚಾಲಕರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗಿದೆ. ಕೆಲವೇ ಕೆಲವು ತಿಂಗಳಲ್ಲಿ ಬೆಂಗಳೂರಿನ ಆಟೋ ಚಾಲಕರು ಈ ಅಪ್ಲಿಕೇಷನ್ ಅಡಿ ಒಟ್ಟು ಸುಮಾರು 5.6 ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾರೆ.
ಈ ಮೊಬೈಲ್ ಆ್ಯಪ್ ಮೂಲಕ ನಗರದ ಪ್ರಯಾಣಿಕರು ಆಟೋ ರಿಕ್ಷಾ ಅನ್ನು ಬುಕ್ ಮಾಡಿಕೊಂಡು ಪ್ರಯಾಣಿಸಬಹುದಾಗಿದೆ. ಇದರಿಂದ ನವೆಂಬರ್ ನಿಂದ ಮಾರ್ಚ್ ವೇಳೆಗೆ ಬೆಂಗಳೂರು ನಗರ ಆಟೋರಿಕ್ಷಾ ಚಾಲಕರು ಸರಿಸುಮಾರು 5.6 ಕೋಟಿ ರೂಪಾಯಿ ಹಣ ಗಳಿಸಿದ್ದಾರೆ ಎಂದು ಆ್ಯಪ್ ನಿಂದ ಮಾಹಿತಿ ಲಭ್ಯವಾಗಿದೆ.
ಲಭ್ಯ ಮಾಹಿತಿ ಪ್ರಕಾರ, 41,112 ರಿಕ್ಷಾ ಚಾಲಕರು ಮತ್ತು 3.35,653 ಬಳಕೆದಾರರು ಆ್ಯಪ್ನಲ್ಲಿ ತಮ್ಮ ಹೆಸರು ನೊಂದಾವಣೆ ಮಾಡಿಕೊಂಡಿದ್ದಾರೆ. ಮಾರ್ಚ್ 6 ಸೋಮವಾರದವರೆಗೆ ಆಟೋ ಚಾಲಕರು ಬರೋಬ್ಬರಿ 3,37 ಲಕ್ಷ ಟ್ರೀಪ್ ಪೂರ್ಣಗೊಳಿಸಿದ್ದಾರೆ. ಈ 'ನಮ್ಮ ಯಾತ್ರಿ' ಅಪ್ಲಿಕೇಷನ್ ಮೂಲಕ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯಿಂದ ಕೂಡಿದೆ. ಆ್ಯಪ್ನಲ್ಲಿ ಸಮಯ, ಚಾಲಕರ ಲಭ್ಯತೆ, ಟ್ರಿಪ್ ಮಾಹಿತಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ. ಇದು ನೈಜ ಮಾಹಿತಿ ಪ್ರದರ್ಶಿಸುತ್ತದೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ ಮುಖ್ಯಸ್ಥರು ಮಾಹಿತಿ ನಿಡಿದ್ದಾರೆ.

ನಗರದ ಈ ಭಾಗದಲ್ಲಿ ಹೆಚ್ಚು ಬುಕ್ಕಿಂಗ್
ನಗರದಲ್ಲಿ ಸಂಜೆ ನಂತರ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮಹದೇವಪುರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ಪ್ರದೇಶಗಳಲ್ಲಿ ಜನರು ಆ್ಯಪ್ ಹೆಚ್ಚು ಬಳಸಿದ್ದಾರೆ. ನಿತ್ಯ 9,000 ಟ್ರಿಪ್ ಬುಕ್ಕಿಂಗ್ ಆಗಿವೆ.

ಸರ್ಕಾರದ ನಿಯಮಗಳ ಪ್ರಕಾರ, ಮೊದಲ 2ಕಿಲೋ ಮೀಟರ್‌ಗೆ ರೂ. 30 ಮತ್ತು ನಂತರದ ಪ್ರತಿ ಕಿಮೀಗಳಿಗೆ ರೂ. 15 ಶುಲ್ಕ ನಿಗದಿ ಮಾಡಿದೆ. ಈ ಅಪ್ಲಿಕೇಶನ್ ಮುಲಕ ಪ್ರತಿ ಬುಕಿಂಗ್‌ಗೆ ರೂ. 10 ಪಿಕಪ್ ದರ ಬೀಳುತ್ತದೆ. ಇಲ್ಲಿ 3 ಕಿಮೀಗೆ 55ರೂಪಾಯಿ ತಗುಲತ್ತದೆ. ಇನ್ನು 2 ಕಿಮೀ ಒಳಗೇ ಈ ಅಪ್ಲಿಕೇಷನ್ ನಡಿ ಸಂಚರಿಸಿದ ಪ್ರಯಾಣಿಕರಿಗೆ ಕೇವಲ 40 ರೂಪಾಯಿ ಪಾವತಿಸುವಂತೆ ಯೋಜನೆ ರೂಪಿಸಲಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications