ಕೆಂಪೇಗೌಡ ಏರ್ಪೋರ್ಟ್ಗೆ ರೈಲು, ವೇಳಾಪಟ್ಟಿ ಬದಲಾವಣೆ
ಬೆಂಗಳೂರು, ಜನವರಿ 07: ಜನವರಿ 4ರಿಂದ ಮೂರು ಜೋಡಿ ರೈಲುಗಳು ಬೆಂಗಳೂರು ರೈಲು ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚಾರ ಆರಂಭಿಸಿವೆ.
ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗೆ ಸಂಚರಿಸುತ್ತಿದ್ದರೆ, ಮತ್ತೊಂದು ಯಲಹಂಕದಿಂದ ದೇವನಹಳ್ಳಿಯವರೆಗೂ ಸಂಚರಿಸುತ್ತಿದೆ. ಜನವರಿ 8 ರಿಂದ ಜಾರಿಯಾಗುವಂತೆ ಒಟ್ಟು ಐದು ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.
ಮೊದಲು ರೈಲು ಬೆಳಗ್ಗೆ 4.45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ಹೊರಡಲಿದ್ದು, ಬೆಳಗ್ಗೆ 5.50ಕ್ಕೆ ಏರ್ ಪೋರ್ಟ್ ತಲುಪಲಿದೆ. ಒಂದು ಕಡೆಯಿಂದ ಸಂಚರಿಸಲು 10ರಿಂದ 15 ರೂ.ಶುಲ್ಕವಿರಲಿದೆ. ಇದರಿಂದಾಗಿ ಏರ್ ಪೋರ್ಟ್ ಗೆ ತಲುಪಲು ಟ್ಸಾಕ್ಸಿ(ಸುಮಾರು 700 ರಿಂದ 1000ರು) ಮತ್ತು ವಾಯು ವಜ್ರ ಬಸ್ಸುಗಳಿಗಾಗಿ ದುಬಾರಿ ಮೊತ್ತ (250 ರಿಂದ 300ರು) ಪಾವತಿಸುತ್ತಿದ್ದ ಪ್ರಯಾಣಿಕರಿಗೆ ನೆಮ್ಮದಿ ದೊರೆತಂತಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ತಿಳಿಸಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್ಗೆ ರೈಲು, ವೇಳಾಪಟ್ಟಿ
| ಕೆಐಎಎಲ್ ಕಡೆಗೆ ರೈಲು | ||||
| ರೈಲು ಸಂಖ್ಯೆ | ರೈಲು ಹೆಸರು | ಯಾವ ನಿಲ್ದಾಣದಿಂದ | ಹೊರಡುವ ಸಮಯ | ತಲುಪುವ ಸಮಯ |
| 06285 | SBC-DHL DEMU | ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಗರ(KSR City) | 4:45 a.m. | 5:50 a.m. |
| 06287 | YNK-DHL DEMU | ಯಲಹಂಕ | 7 a.m. | 7:20 a.m |
| 06279 | YPR-BWT DEMU | ಯಶವಂತಪುರ | 8:30 a.m. | 9:16 a.m. |
| 06269 | BNC-BWT DEMU | ಕಂಟೋನ್ಮೆಂಟ್ | 5:55 p.m. | 6:50 p.m. |
| 06283 | SBC-DHL DEMU | KSR City | 9 p.m. | 10:05 p.m. |
*****
| ಕೆಐಎಎಲ್ನಿಂದ ರೈಲು | ||||
| ರೈಲು ಸಂಖ್ಯೆ | ರೈಲು ಹೆಸರು | ಹೊರಡುವ ಸಮಯ | ಯಾವ ನಿಲ್ದಾಣಕ್ಕೆ | ತಲುಪುವ ಸಮಯ |
| 06288 | DHL-YNK DEMU | 6:23 a.m. | ಯಲಹಂಕ | 6:50 a.m. |
| 06284 | DHL-BNC DEMU | 7:52 a.m. | ಕಂಟೋನ್ಮೆಂಟ್ | 8:50 a.m. |
| 06270 | BWT-YPR DEMU | 8:22 a.m. | ಯಶವಂತಪುರ | 9:25 a.m. |
| 06280 | BWT-SBC DEMU | 6:00 p.m. | KSR City | 8:20 p.m. |
| 06286 | DHL-SBC DEMU | 10:38 p.m. | KSR City | 11:55 p.m. |
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications