Bengaluru Airport: ಸಮಯ ಪರಿಪಾಲನೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯದ ವಿಮಾನ ನಿಲ್ದಾಣವಾಗಿ ಅಗ್ರಸ್ಥಾನದಲ್ಲಿದೆ ಎಂದು ಸಿರಿಯಮ್‌ನ 'ದಿ ಆನ್-ಟೈಮ್ ಪರ್ಮೆನ್ಸ್ ಮಾಸಿಕ ವರದಿ' ತಿಳಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸರಿಯಾಗಿ ನಿರ್ಗಮಿಸುವ ಅನುಭವವನ್ನು ಉಳಿಸಿಕೊಂಡಿದೆ, ಜುಲೈ ತಿಂಗಳಿನಲ್ಲಿ 87.51 ರಷ್ಟು ಸಮಯಪಾಲನೆ, ಆಗಸ್ಟ್‌ನಲ್ಲಿ 89.66 ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡಾ 88.51 ಸಮಯ ಪರಿಪಾಲನೆ ಮಾಡಿದೆ ಎಂದು ಬಿಐಎಎಲ್ ಮಂಗಳವಾರ ತಿಳಿಸಿದೆ.

ವರದಿಯ ಪ್ರಕಾರ, ಆನ್-ಟೈಮ್ ನಿರ್ಗಮನ ಶ್ರೇಯಾಂಕವು ನಿಗದಿತ ಸಮಯದ 15 ನಿಮಿಷಗಳ ಒಳಗೆ ನಿರ್ಗಮಿಸಿದ ವಿಮಾನಗಳು ಶೇಕಡಾವಾರು ಸಂಖ್ಯೆಯನ್ನು ಅಳೆಯುತ್ತದೆ. ಸಿರಿಯಮ್‌ನ ಮೌಲ್ಯಮಾಪನ ಪ್ರಕ್ರಿಯೆಯು ವಿಶ್ವಾದ್ಯಂತ ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಡೇಟಾದ ಸಂಪೂರ್ಣ ಪರಿಶೀಲನೆ ನೀಡಲಿದೆ ಎಂದು ವರದಿ ಹೇಳಿದೆ.
3.1 ಕೋಟಿ ಪ್ರಯಾಣಿಕರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 88 ಮಾರ್ಗಗಳನ್ನು ಒಳಗೊಂಡಿರುವ ನೆಟ್‌ವರ್ಕ್ ಮತ್ತು 35 ಏರ್‌ಲೈನ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. 2022-23ರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ 31.91 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮೂಲಕ ಭಾರತದ ಮೂರನ ಅತ್ಯಂತ ಹೆಚ್ಚು ಪ್ರಯಾಣಿಕರನ್ನು ಹೊಂದಿದ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಇಷ್ಟು ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿದ್ದರೂ ಸಮಯ ಪಾಲನೆಯಲ್ಲಿ ನಿಖರವಾಗಿದೆ.
ಅಗ್ರ ಐದು ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ವಿಮಾನ ನಿಲ್ದಾಣಗಳೆಂದರೆ ಉತಾಹ್‌ನ ಸಾಲ್ಟ್ ಲೇಕ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಯುಎಸ್‌ಎ), ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೋಲಿಸ್-ಸೇಂಟ್ ಪೌಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲ್ ಡೊರಾಡೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಸಮಯ ಪರಿಪಾಲನೆಯಲ್ಲಿ ಅಗ್ರ 15 ಸ್ಥಾನ ಪಡೆದ ವಿಮಾನ ನಿಲ್ದಾಣಗಳು
1) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು, ಭಾರತ
2) ಸಾಲ್ಟ್ ಲೇಕ್ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಉತಾಹ್, ಯುಎಸ್‌ಎ
3) ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್, ಭಾರತ
4) ಮಿನ್ನಿಯಾಪೋಲಿಸ್-ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನೇಸೋಟ, ಯುಎಸ್‌ಎ
5) ಎಲ್ ಡೊರಾಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೊಗೋಟಾ, ಕೊಲಂಬಿಯಾ
6) ಓಸ್ಲೋ ವಿಮಾನ ನಿಲ್ದಾಣ ಗಾರ್ಡರ್ಮೋನ್, ನಾರ್ವೆ
7) ಡೆಟ್ರಾಯಿಟ್ ಮೆಟ್ರೋಪಾಲಿಟನ್ ವೇಯ್ನ್ ಕೌಂಟಿ ವಿಮಾನ ನಿಲ್ದಾಣ, ಯುಎಸ್‌ಎ
8) ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
9) ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೋಹಾ, ಕತಾರ್
10) ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
11) ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
12) ಸ್ಯಾನ್ ಡಿಯಾಗೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
13) ಷಾರ್ಲೆಟ್ ಡೌಗ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
14) ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ
15) ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯುಎಸ್‌ಎ












Click it and Unblock the Notifications