Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
ಬಹುನಿರೀಕ್ಷಿತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಯಾನ ಕಾರ್ಯಾಚರಣೆ ಆರಂಭವಾಗಲಿದೆ. ಇಲ್ಲಿಂದ ಮೊದಲು ಯಾವ ವಿಮಾನಯಾನ ಸಂಸ್ಥೆ ಸೇವೆ ನೀಡಲಿದೆ? ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 05: ಬಹುನಿರೀಕ್ಷಿತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಯಾನ ಕಾರ್ಯಾಚರಣೆ ಆರಂಭವಾಗಲಿದೆ. ಈ ಸಂಬಂಧ ಏರ್ ಏಷ್ಯಾ ಘೋಷಣೆ ಮಾಡಿದೆ.
ಹೌದು, ಸಾಕಷ್ಟು ವಿಶೇಷತೆಗಳನ್ನು, ಅತೀ ವಿಶಾಲವಾದ ಮತ್ತು ಅತ್ಯಧಿಕ ಪ್ರಯಾಣಿಕರನ್ನು ಹಿಡಿಯುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಟರ್ಮಿನಲ್ 2 ಕೆಲವು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿತ್ತು. ಇದೀಗ ಆ ಟರ್ಮಿನಲ್ಲಿ ಇದೇ ಫೆಬ್ರುವರಿ 15 ರಿಂದ ತನ್ನ ವಿಮಾನಯಾನ ಕಾರ್ಯಾರಂಭಗೊಳಿಸುವುದಾಗಿ ಏರ್ ಏಷ್ಯಾ ವಿಮಾನ ಸಂಸ್ಥೆ ತಿಳಿಸಿದೆ.
ಬೆಂಗಳೂರಲ್ಲಿ ಪ್ರಧಾನ ಕಚೇರಿ ಹೊಂದಿರುವ ಏರ್ ಏಷ್ಯಾ ವಿಮಾನ ಸಂಸ್ಥೆ ಭಾನುವಾರ ಇಂತದ್ದೊಂದು ಘೋಷಿಸಿ ಅದನ್ನು ಟ್ವೀಟ್ ಮಾಡಿದೆ. ಇದರ ಬೆನಲ್ಲೇ ಇನ್ನಿತರ ವಿಮಾನಯಾನ ಸಂಸ್ಥೆಗಳು ಬೆಂಗಳೂರು ಏರ್‌ಪೋರ್ಟ್‌ನ ಟಮಿನಲ್ 2 ನಿಂದಲೇ ದೇಶ, ವಿದೇಶಗಳಿಗೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತವಾಗಿ ಅವುಗಳ ತಿಳಿಸಬೇಕಿದೆ.

ಬೆಂಗಳೂರು ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರನ್ನು ತನ್ನ ಸೆಳೆಯುತ್ತಿರುವ ಟರ್ಮಿನಲ್ 2 ವಿಮಾನ ಸೇವೆ, ಕಾರ್ಯಚಟವಟಿಕೆಗೆ ಸಜ್ಜಾಗುತ್ತಿದೆ. ಏಕೆಂದರೆ ಅನೇಕ ವಿಮಾನಯಾನ ಸಂಸ್ಥೆಗಳು ಇದನ್ನು ದೇಶೀಯ ನಿರ್ಗಮನ ಮತ್ತು ಆಗಮನಕ್ಕಾಗಿ ಬಳಸುತ್ತವೆ. ಪ್ರಸ್ತುತ ಸ್ಟಾರ್ ಏರ್ವೇಸ್ ನಿಂದ ಸೇವೆ ನೀಡುತ್ತಿರುವ ಏರ್ ಏಷ್ಯಾ ಸಂಸ್ಥೆಯವರು ಫೆಬ್ರವರಿ 15 ರಿಂದ ಟರ್ಮಿನಲ್ 2 ಗೆ ಕಾರ್ಯಾಚರಣೆಯನ್ನು ಬದಲಾಯಿಸುವುದಾಗಿ ನಿರ್ಧಾರ ಪ್ರಕಟಿಸಿದ್ದಾರೆ.
ಟ್ವೀಟ್‌ನಲ್ಲಿ, 'ಏರ್ ಏಷ್ಯಾ ವಿಮಾನಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಮನೆಗೆ, ಹೊಸ ಹಾರಾಟದ ಅನುಭವ ಹೊಂದಲು ಕಾತರಾಗಿದ್ದೇವೆ. ಈಗಿರುವ ಟರ್ಮಿನಲ್ ಬದಲಿಸಲಿದ್ದೇವೆ. ಫೆಬ್ರುವರಿ 15ರಿಂದ ಎಲ್ಲಾ i5 ದೇಶೀಯ ಕಾರ್ಯಾಚರಣೆಗಳನ್ನು ನೂತನ ಟರ್ಮಿನಲ್ 2ಗೆ ಸ್ಥಳಾಂತರಿಸಲಿದ್ದೇವೆ. ಅಲ್ಲಿ ನಿಮ್ಮನ್ನು(ಪ್ರಯಾಣಿಕರನ್ನು) ಭೇಟಿ ಮಾಡುವುದಾಗಿ' ತಿಳಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸುಮಾರು 1,700 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬ್ಬಂದಿ ನಿಯೋಜನೆಗೆ ಅನುಮತಿ ನೀಡಿತ್ತು. ಜನವರಿ 15 ರಂದು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಟಾರ್ ಏರ್‌ವೇಸ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಇತ್ತೀಚಿನ ಟರ್ಮಿನಲ್‌ನಲ್ಲಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಸುಗಮ ವಾಹನ ಆಗಮನ ಮತ್ತು ನಿರ್ಗಮನಕ್ಕಾಗಿ ಐದು ಪಥದ ಮಾರ್ಗ ನಿರ್ಮಿಸಲಾಗಿದೆ, ಅದು ಏಪ್ರಿಲ್‌ನಲ್ಲಿ ಟರ್ಮಿನಲ್ 2 ರಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.












Click it and Unblock the Notifications