12 ವರ್ಷದ ನಂತರ ನ್ಯೂಯಾರ್ಕ್‌ನಿಂದ ಬೆಂಗಳೂರಿಗೆ ಬಂದೆ; ಈ ನಗರದಲ್ಲಿರುವುದು ಅಲ್ಲಿಲ್ಲ ಎಂದ ಟೆಕ್ಕಿ!

ಸುದೀರ್ಘ 12 ವರ್ಷಗಳ ನಂತರ ಅಮೆರಿಕದ ನ್ಯೂಯಾರ್ಕ್‌ನಿಂದ ಬೆಂಗಳೂರಿಗೆ ಮರಳಿರುವ ಉದ್ಯಮಿಯೊಬ್ಬರು ಬೆಂಗಳೂರು ಅತ್ಯುತ್ತಮವಾಗಿದೆ ಎಂದು ಮೆಚ್ಚಿಕೊಂಡಿದ್ದಾರೆ. ಬೆಂಗಳೂರು ನಗರದ ಬಗ್ಗೆ ಅವರು ಲಿಂಕ್ಡ್‌ಇನ್‌ನಲ್ಲಿ ಮಾಡಿರುವ ಪೋಸ್ಟ್‌ ಇದೀಗ ವೈರಲ್ ಆಗುತ್ತಿದೆ. ಗೌತಮ್ ನರಸಿಂಹನ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಬರಹವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೆರಿಕದಲ್ಲಿ 12 ವರ್ಷ ಕಳೆದು ಇತ್ತೀಚೆಗೆ ಬೆಂಗಳೂರಿಗೆ ಮರಳಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ನ್ಯೂಯಾರ್ಕ್‌ಗೆ ಹೋಲಿಸಿದರೆ ಬೆಂಗಳೂರಿನ ಜೀವನಶೈಲಿ ತುಂಬಾ ವಿಭಿನ್ನವಾಗಿದೆ. ಆದರೆ ತಮ್ಮ ವೃತ್ತಿಜೀವನದಲ್ಲಿ ಮಾತ್ರ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಬದಲಾವಣೆಯಾಗಿದೆ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

12

12 ವರ್ಷಗಳ ನಂತರ ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ. ಆದರೆ ಇಂದಿಗೂ ಬೆಂಗಳೂರು ಅದೇ ರೀತಿ ಇದೆ. ಗೌತಮ್ ನರಸಿಂಹನ್ ಅವರು ನ್ಯೂಯಾರ್ಕ್‌ನಲ್ಲಿ 12 ವರ್ಷಗಳ ಅಲ್ಲೆ ನೆಲೆಸಿದ್ದಾಗಿ ಹೇಳಿಕೊಂಡಿದ್ದಾರೆ. ನರಸಿಂಹ ಅವರು ಯುನಿಸೆಫ್‌ನಲ್ಲಿ ಏಳು ವರ್ಷಕ್ಕೂ ಹೆಚ್ಚು ಕಾಲ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 2026ರ ಜನವರಿಯಲ್ಲಿ ಅವರು Verdera ಎನ್ನುವ ಸ್ವಂತ ಸ್ಟಾರ್ಟ್‌ಅಪ್ ಪ್ರಾರಂಭಿಸಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳಿಗೆ ಹೊಂದಿಕೊಳ್ಳುವುದಕ್ಕೆ ನೆರವಾಗುವ ತಂತ್ರಜ್ಞಾನ ವ್ಯವಸ್ಥೆಯನ್ನು ಈ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಬಗ್ಗೆ ಅವರು ಹೇಳಿದ್ದೇನು ಎನ್ನುವ ವಿವರ ಮುಂದೆ ನೋಡೋಣ.

ಕುಟುಂಬ, ವೈಯಕ್ತಿಕ ಹಾಗೂ ಕೆಲಸ ಸೇರಿದಂತೆ ಹಲವು ಕಾರಣಗಳಿಗಾಗಿ ನಾನು 12 ವರ್ಷಗಳ ಕಾಲ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಸಬೇಕಾಯಿತು. ನಾವು ಕಳೆದ ತಿಂಗಳು ಭಾರತದ ಬೆಂಗಳೂರಿಗೆ ಹಿಂತಿರುಗಿದೆವು. ಇಲ್ಲಿಯವರೆಗೆ, ಎಲ್ಲವೂ ಚೆನ್ನಾಗಿತ್ತು. ಒಂದೆಡೆ, ಇದು ಸಂಪೂರ್ಣವಾಗಿ ವಿಭಿನ್ನವಾದ ಜಗತ್ತು. ಮತ್ತೊಂದೆಡೆ ಬೇರೆ ವಿಶೇಷವಾಗಿ ಕೆಲಸ, ಗಮನಾರ್ಹವಾಗಿ ಒಂದೇ ಆಗಿವೆ: ಯುಎಸ್, ಆಫ್ರಿಕಾ ಮತ್ತು ಏಷ್ಯಾದಲ್ಲಿ ಕೆಲಸ ನೀಡಲು ಯುರೋಪಿನ ತಂಡದ ಸದಸ್ಯರೊಂದಿಗೆ ಕೆಲಸ ಮಾಡುವುದು. ನನ್ನ ಕೆಲಸವನ್ನು ಎಲ್ಲಿಂದ ಬೇಕಾದರೂ ಮಾಡಬಹುದಾಗಿದೆ. ಈಗ ಬದಲಾಗಿರುವ ಪ್ರಮುಖ ವಿಷಯವೆಂದರೆ, ಕೆಲವು ಮೀಟಿಂಗ್‌ಗಳನ್ನು ಬೆಳಗ್ಗೆಯೇ ನಡೆಸಬೇಕು, ಇನ್ನು ಕೆಲವು ಸಭೆಗಳನ್ನು ಸಂಜೆ ತಡವಾಗಿ ನಡೆಸಬೇಕಾಗಿದೆ.

ಮುಂದುವರಿದು ನಾನು ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಮತ್ತು ಅದರ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಜನರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಆದರೆ ಪ್ರವಾಹ, ಚಂಡಮಾರುತ ಮತ್ತು ಶಾಖದ ಅಲೆಗಳು ಹೆಚ್ಚು ಅನಿರೀಕ್ಷಿತವಾಗಿ ಹಾಗೂ ತೀವ್ರವಾಗಿ ಸಂಭವಿಸುತ್ತಿರುವ ಸಂದರ್ಭದಲ್ಲಿ, ಸಂಸ್ಥೆಗಳು ತಮ್ಮ ಕಾರ್ಯಗಳನ್ನು ಮುಂದುವರಿಸಲು ಹೇಗೆ ಸಿದ್ಧರಾಗಬೇಕು ಎಂಬುದರ ಬಗ್ಗೆ ಮಾತನಾಡಿದಾಗ, ಬಹುತೇಕ ಪ್ರತಿಯೊಬ್ಬರೂ ತಮ್ಮದೇ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಬಗ್ಗೆ ಮೆಚ್ಚುಗೆ ಮಾತು

ಇನ್ನು ಬೆಂಗಳೂರಿನ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬೆಂಗಳೂರು ಈ ವಿಷಯದಲ್ಲಿ ನನಗೆ ಉತ್ತಮ ಪಾಠ ಕಲಿಸುತ್ತಿದೆ. ಮುಂಗಾರು ಮಳೆ ಆರಂಭವಾಗಿದೆ. ಆದರೆ ಈ ವರ್ಷ ಮಳೆಯ ಸ್ವರೂಪವೂ ಸ್ವಲ್ಪ ವಿಚಿತ್ರವಾಗಿದೆ. ಇದರ ಬಗ್ಗೆ ಮುಂದೆ ಮತ್ತಷ್ಟು ಬರೆಯುತ್ತೇನೆ.

ಮಳೆ ಈಗಾಗಲೇ ಭೀಕರವಾಗಿರುವ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮತ್ತಷ್ಟು ನಿಧಾನಗೊಳಿಸುತ್ತಿದೆ. ಈ ಪರಿಸ್ಥಿತಿಯನ್ನು ಎದುರಿಸಲು ನಾವು ಏನು ಮಾಡಬೇಕು ಎಂಬ ಚರ್ಚೆಗಳಿಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಒಟ್ಟಾರೆ ನಾನು ಬೆಂಗಳೂರಿಗೆ ಮರಳಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದ ಎಂದೂ ಅವರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+