ಬೆಂಗಳೂರಿನಲ್ಲಿ ಒಂದೇ ದಿನ 2146 ಕಂಟೈನ್‌ಮೆಂಟ್‌ ಜೋನ್ ಪತ್ತೆ

ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಏರುತ್ತಲೆ ಇದೆ. ಜುಲೈ 15ರಂದು ಬೆಂಗಳೂರಿನಲ್ಲಿ 2146 ಹೊಸ ಕಂಟೈನ್‌ಮೆಂಟ್ ಜೋನ್ ಪತ್ತೆಯಾಗಿದೆ.

Recommended Video

      Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

      ಬೆಂಗಳೂರು ಮಹಾನಗರ ಪಾಲಿಕೆಯ ವರದಿಯಂತೆ ಬೆಂಗಳೂರಿನಲ್ಲಿ ಪ್ರಸ್ತುತ 5598 ಕಂಟೈನ್‌ಮೆಂಟ್‌ ಜೋನ್‌ಗಳು ಸಕ್ರಿಯವಾಗಿದೆ. 196 ವಾರ್ಡ್‌ಗಳಲ್ಲಿ 50ಕ್ಕಿಂತ ಹೆಚ್ಚು ಕೊವಿಡ್ ಸೋಂಕಿತರು ದಾಖಲಾಗಿದ್ದಾರೆ. ಕೇವಲ ಎರಡು ವಾರ್ಡ್‌ಗಳಲ್ಲಿ ಮಾತ್ರ 50ಕ್ಕಿಂತ ಕಡಿಮೆ ಕೇಸ್ ವರದಿಯಾಗಿದೆ.

      ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಒಟ್ಟು 7053 ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಅದರಲ್ಲಿ 1455 ಕಂಟೈನ್‌ಮೆಂಟ್ ಪ್ರದೇಶವನ್ನು ಮರಳಿ ಸಾಮಾನ್ಯ ಸ್ಥಿತಿಗೆ ಬಂದಿದೆ. ಅಂದ್ಹಾಗೆ, ಜುಲೈ 14 ರಂದು ಬಿಬಿಎಂಪಿ ಕಡೆಯಿಂದ ಕಂಟೈನ್‌ಮೆಂಟ್ ಪ್ರದೇಶ ಗುರುತು ಮಾಡಿರುವ ಅಂಕಿ ಅಂಶ ಇಲ್ಲ. ಹಾಗಾಗಿ, ಜುಲೈ 15ರ ವರದಿಯಲ್ಲಿ ಸಂಖ್ಯೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

      Bengaluru added 2146 new containment zones in Single Day

      ಬಿಬಿಎಂಪಿ ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಧಾರಕ ವಲಯ ಹೊಂದಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ಕಂಟೈನ್‌ಮೆಂಟ್ ಜೋನ್ ಇದೆ.

      ಇದುವರೆಗೂ 621 ಅಪಾರ್ಟ್ಮೆಂಟ್‌ಗಳನ್ನು ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಲಾಗಿದೆ, 25 ಸ್ಲಂ ಪ್ರದೇಶಗಳು ಮತ್ತು ಒಂದು ಹೋಟೆಲ್ ಜೊತೆಗೆ ಬೆಂಗಳೂರಿನಲ್ಲಿ ಒಟ್ಟು 6,371 ಬೀದಿಗಳನ್ನು ಧಾರಕ ವಲಯಗಳಾಗಿ ಗುರುತಿಸಲಾಗಿದೆ.

      ಬುಧವಾರದ ಬೆಂಗಳೂರಿನಲ್ಲಿ 1,975 ಹೊಸ ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ನಗರದ ಒಟ್ಟು ಸೋಂಕಿತರ ಸಂಖ್ಯೆ 22,942ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 17,051ಕ್ಕೆ ಜಿಗಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+