ಬೆಂಗಳೂರು: ಜಾಹೀರಾತು ಕಾಣಿಸುವುದಿಲ್ಲ ಎಂದು ಮರಗಳಿಗೆ ವಿಷವಿಟ್ಟರು
ಜಾಹೀರಾತು ಸ್ಪಷ್ಟವಾಗಿ ಕಾಣಿಸಬೇಕು ಎಂಬ ಒಂದೇ ಕಾರಣಕ್ಕೆ ಜಾಹೀರಾತು ಏಜೆನ್ಸಿಯೊಂದು 17 ಮರಗಳಿಗೆ ವಿಷವಿಟ್ಟಿದೆ. 13 ಮರಗಳ ರೆಂಬೆಗಳನ್ನು ಕತ್ತರಿಸಿ ಪೂರ್ತಿ ಬೋಳು ಮಾಡಿದೆ.
ಬೆಂಗಳೂರು, ಮಾರ್ಚ್ 10: ಜಾಹೀರಾತು ಸ್ಪಷ್ಟವಾಗಿ ಕಾಣಿಸಬೇಕು ಎಂಬ ಒಂದೇ ಕಾರಣಕ್ಕೆ ಜಾಹೀರಾತು ಏಜೆನ್ಸಿಯೊಂದು 17 ಮರಗಳಿಗೆ ವಿಷವಿಟ್ಟಿದೆ. 13 ಮರಗಳ ರೆಂಬೆಗಳನ್ನು ಕತ್ತರಿಸಿ ಪೂರ್ತಿ ಬೋಳು ಮಾಡಿದೆ.
ರಿಂಗ್ ರಸ್ತೆಯ ಮಾರತಹಳ್ಳಿ ಜಂಕ್ಷನಿನಲ್ಲಿ ಮೊಬೈಲ್ ಕಂಪೆನಿ ಹಾಗೂ ಜ್ಯುವೆಲ್ಲರಿ ಸಂಸ್ಥೆಯೊಂದರ ಜಾಹೀರಾತು ಸರಿಯಾಗಿ ಕಾಣಿಸಲು ಇಷ್ಟು ಪ್ರಮಾಣದ ಮರಗಳಿಗೆ ಕೊಳ್ಳಿ ಇಡಲಾಗಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳೂ ಖಚಿತಪಡಿಸಿದ್ದಾರೆ. 17 ಮರಗಳ ಸುತ್ತಾ ಟೆಸ್ಪೆಸಿಯಾ ಪಪುಲೇನಿಯಾ ಎಂಬ ವಿಷ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಬೆಂಗಳೂರು: 112 ಮರ ಉಳಿಸಲು ನಾಳೆ (ಫೆ. 11) ಬೃಹತ್ ಮಾನವ ಸರಪಳಿ]
17 trees poisoned and 13 pruned in Bangalore to make way for better visibility for bill-boards. FIR lodged against Ad Agency.
— Nagarjun Dwarakanath (@nagarjund) March 10, 2017
ಮರಗಳ ಸಂರಕ್ಷಕ ವಿಜಯ್ ನಿಶಾಂತ್ ಮೊದಲಿಗೆ ಮರಗಳಿಗೆ ವಿಷವಿಕ್ಕಿದ್ದನ್ನು ಪತ್ತೆ ಹಚ್ಚಿದ್ದಾರೆ. ಹೋರ್ಡಿಂಗ್ ಪಕ್ಕ ಮರಗಳ ಕರಟಿ ಹೋಗುತ್ತಿರುವದನ್ನು ಗಮನಿಸಿದ್ದಾರೆ. ಮರಗಳ ಈ ವರ್ತನೆ ನೋಡಿ ಅವರು ಅನುಮಾನದಲ್ಲಿ ಪರಿಶೀಲಿಸಿದಾಗ ಈ ವಿಚಾರಗಳು ಬೆಳಕಿಗೆ ಬಂದಿವೆ. ನಂತರ ಅವರು ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಂತರ ಅಧಿಕಾರಿಗಳು ಮತ್ತು ವಿಜಯ್ ನಿಶಾಂತ್ ಕಾರ್ಯೋನ್ಮುಖರಾಗಿದ್ದು ಮೂರು ಮರಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ 14 ಮರಗಳು ಸತ್ತಿವೆ.[ಒಂದು ಗಿಡ ಬಿದ್ದರೇನಾಯಿತು? ಎರಡು ಸಸಿ ನೆಡೋಣ]

ಇದೀಗ ಬಿಬಿಎಂಪಿ ಅರಣ್ಯ ವಿಭಾಗ ಸ್ಥಳದಲ್ಲಿ ಜಾಹೀರಾತು ಹಾಕಿದ್ದ ಸಂಸ್ಥೆಯ ವಿರುದ್ಧ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಒಂದೊಮ್ಮೆ ಇದು ನಿಜವೇ ಆದರೆ ಅಪರಾಧಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ಹಾಕುವ ಸಾದ್ಯತೆ ಇದೆ.
ಈಗಾಗಲೇ ನೈಲ್ ಎಂಟರ್ ಪ್ರೈಸಸ್ ಮತ್ತು ಹೋರ್ಡಿಂಗ್ ಇರುವ ಆರ್ಚ್ ಬಿಷಪ್ ಮನೆಗೆ ನೊಟೀಸ್ ನೀಡಲಾಗಿದೆ. ಇದೀಗ ಇವರೆಲ್ಲಾ ಮೂರು ದಿನದೊಳಗೆ ನೊಟೀಸ್ ಗೆ ಉತ್ತರ ನೀಡಬೇಕಾಗಿದೆ.
ಆದರೆ ಇದು ಹೋರ್ಡಿಂಗೇ ಕಾನೂನು ಬಾಹಿರ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಪ್ಪು ರಾವ್ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಈ ಕಾರಣಕ್ಕೆ ಈ ರೀತಿ ಮರಗಳನ್ನು ಕೊಲ್ಲುವುದು ಬಿಬಿಎಂಪಿಯಲ್ಲಿ ಸಮಾನ್ಯವಾಗಿದೆ.












Click it and Unblock the Notifications