ಬೆಂಗ್ಳೂರಲ್ಲಿ ಎಸಿಬಿಗೆ ಸಿಕ್ಕಿದ್ದು ಕೇಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ದುಡ್ಡು
ಬೆಂಗಳೂರು, ಅಕ್ಟೋಬರ್ 5: ಗಳಿಕೆಗೆ ಮೀರಿ ಆಸ್ತಿ ಸಂಪಾದನೆ ಆರೋಪದಲ್ಲಿ ಶುಕ್ರವಾರ ಬೆಂಗಳೂರು ನಗರ ವಿಭಾಗದ ಭ್ರಷ್ಟಾಚಾರ ನಿಗ್ರಹ ದಳದವರು ಮತ್ತು ಇತರ ತಂಡಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಏನೇನೆಲ್ಲ ಸಿಕ್ಕಿವೆ, ದಾಳಿ ನಡೆಸಿದ ಅಧಿಕಾರಿಗಳು ಯಾರು ಎಂಬುದರ ವಿವರ ಹೀಗಿದೆ.
ಅಧಿಕಾರಿಗಳಿಗೆ ಸಂಬಂಧಿಸಿದ 8 ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದೆ. ಶೋಧನಾ ಕಾರ್ಯ ಮುಂದುವರಿದಿದೆ. ಈ ವರೆಗೆ ಶೋಧನೆ ನಡಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಈ ಸರಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳಿವು.

ಎನ್.ಜಿ ಗೌಡಯ್ಯ, ಇಂಜಿನಿಯರ್ ಆಫೀಸರ್-5, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ
8 ನಿವೇಶನ
14 ಅರ್ಪಾರ್ಟ್ ಮೆಂಟ್
3 ಕೆ.ಜಿ. ಚಿನ್ನ
10 ಕೆ.ಜಿ. ಬೆಳ್ಳಿ
3 ಕಾರು
3 ದ್ವಿಚಕ್ರ ವಾಹನ
₹ 75 ಲಕ್ಷ ನಗದು
₹ 30 ಲಕ್ಷ ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ
ಮಾವನವರ ಮನೆಯಲ್ಲಿ 4.5 ಕೆ.ಜಿ. ಚಿನ್ನಾಭರಣ
ಟಿ.ಆರ್.ಸ್ವಾಮಿ, ಮುಖ್ಯ ಅಭಿವೃದ್ಧಿ ಅಧಿಕಾರಿ, ಕೆಐಎಡಿಬಿ
ತಮ್ಮ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ
10 ನಿವೇಶನಗಳು
ವಿವಿಧೆಡೆ 10 ಎಕರೆ ಕೃಷಿ ಜಮೀನು
1.6 ಕೆಜಿ ಚಿನ್ನ
3 ಕಾರು
₹ 4 ಕೋಟಿ 52 ಲಕ್ಷ ನಗದು











Click it and Unblock the Notifications