ಗೋಪೂಜೆ, ಪ್ರಕೃತಿ ಆರಾಧನೆ, ದೇಶಿಯ ಆಟ, ಸಂಗೀತ ಸುಧೆ...

ಬೆ೦ಗಳೂರು, ಡಿಸೆಂಬರ್, 12: ಬೆಂಗಳೂರಿನಲ್ಲಿ ಹಿಂದೂ ಸೇವಾ ಸಮಾವೇಶ ಸಾಂಗವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಪ್ರಕೃತಿ ಪೂಜೆ ನೆರವೇರಿಸಿದರೆ, ಮಹಿಳೆಯರು ಗೋ ಪೂಜೆ ನೆರವೇರಿಸಿ ಧನ್ಯರಾದರು.

ಆಹಾರ ಸ೦ಸ್ಕೃತಿ ಹೆಸರಿನಲ್ಲಿ ನಡೆಯುತ್ತಿರುವ ಗೋವಧೆ ನಿಲ್ಲಬೇಕು ಎಂಬ ಆಗ್ರಹ ಕೇಳಿಬಂತು. ಗ೦ಗಾ ಮಾತೆಯನ್ನು ಪೂಜಿಸಲಾಯಿತು. ದೇಸಿ ಗೋವಿನ ತಳಿಗಳನ್ನು ಸಂರಕ್ಷಣೆ ಮಾಡುತ್ತೇವೆ ಎಂದು ನೆರೆದಿದ್ದ ಸಾವಿರಾರು ಜನ ಶಪಥ ಮಾಡಿದರು.

ಭಾರತೀಯ ಸಂಸ್ಕೃತಿ ಪರಿಸರವನ್ನು ದೇವರೆಂದು ಪೂಜೆ ಮಾಡಿಕೊಂಡು ಬಂದಿದೆ. ಪರಿಸರ ಸಂರಕ್ಷಣೆ ಜಾಗೃತಿ ಪುರಾತನ ಕಾಲದಿಂದಲೂ ಇದೆ. ಅದನ್ನು ಸಮಾಜದಲ್ಲಿ ಮತ್ತೆ ನೆಲೆಗೊಳಿಸಬೇಕಾಗಿದೆ ಎಂದು ಮಹಿಳೆಯರು ಒಕ್ಕೊರಲ ಅಭಿಪ್ರಾಯ ಹೊರಹಾಕಿದರು.[ಬದುಕಿದ್ದಾಗ ಬೇಡದ ಹಿಂದೂ ಧರ್ಮ ಸತ್ತ ಮೇಲೆ ಬೇಕೆ?]

ವಿಶ್ವದ ಗೋತಳಿಗಳ ಪ್ಯೆಕಿ 39 ಭಾರತದಲ್ಲಿವೆ. ಒಟ್ಟು ಪಶುಸ೦ಪತ್ತಿನ ಶೇ.12 ಭಾರತದಲ್ಲಿದೆ. ಇಲ್ಲಿನ ತಳಿ ಸಾಮಾನ್ಯ ಹುಲ್ಲನ್ನಷ್ಟೇ ತಿನ್ನುತ್ತ ಅತ್ಯುತ್ತಮ ಗುಣಮಟ್ಟದ ಹಾಲು ನೀಡುತ್ತವೆ. ಆದರೆ ವಿದೇಶಿ ಹಸುವಿನ ತಳಿಗಳು ಮನುಷ್ಯರು ಬಳಸುವ ಬೇಳೆಕಾಳುಗಳನ್ನು ಆಹಾರವಾಗಿ ಬಯಸುತ್ತವೆ. ಈ ಬಗೆಯ ವಿದೇಶಿ ವ್ಯಾಮೋಹದಿಂದಲೂ ಹೊರಬರಬೇಕಿದೆ ಎಂಬ ಮಾತು ಕೇಳಿ ಬಂತು.[ಚಿತ್ರ ಕೃಪೆ]

ಗೋಪುಜೆಗೆ ಮುನ್ನುಡಿ

ಗೋಪುಜೆಗೆ ಮುನ್ನುಡಿ

ಭಾರತೀಯ ಪರಂಪರೆಯನ್ನು ಸಾರುವ ಗೋಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷಣ.

ಮಹಿಳೆಯರಿಂದ ಶಪಥ

ಮಹಿಳೆಯರಿಂದ ಶಪಥ

ದೇಶಿಯ ಪರಂಪರೆ ಮತ್ತು ಸಂಸ್ಕೃತಿಯ ಉಳಿವಿಗೆ ಮಹಿಳೆಯರು ಶಪಥ ಮಾಡಿದರು. ಪರಿಸರ ಪೂಜೆಯನ್ನು ಕೈಗೊಂಡಿದ್ದು ವಿಶೇಷ.

ಗೋಮಾತೆ ನಿನಗೆ ವಂದನೆ

ಗೋಮಾತೆ ನಿನಗೆ ವಂದನೆ

ಗೋವಿನ ಮೂರ್ತಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ತದೇಕಚಿತ್ತದಿಂದ ನೋಡುತ್ತಿರುವ ಯುವತಿ ಮನಸ್ಸಿನಲ್ಲಿಯೇ ವಂದಿಸಿದರು.

ಅಂಬಾ...ಅಂಬಾ

ಅಂಬಾ...ಅಂಬಾ

ಗೋವುಗಳಿಗೆ ಪೂಜೆ ಮಾಡಿಸಿಕೊಳ್ಳುವ ಸಂಭ್ರಮ. ಮಗುವೊಂದು ತಾನು ಪೂಜೆ ಮಾಡುತ್ತೇನೆ ಎಂದು ದುಂಬಾಲು ಬಿದ್ದಿದ್ದು ಹೀಗೆ.

ಭಾರತಕ್ಕೆ ನಮ್ಮ ಶಕ್ತಿ

ಭಾರತಕ್ಕೆ ನಮ್ಮ ಶಕ್ತಿ

ವಿದ್ಯಾರ್ಥಿನಿಯರು ನಡೆಸಿಕೊಟ್ಟ ದೇಶಭಕ್ತಿ ರೂಪಕಗಳು ನೆರೆದಿದ್ದ ಎಲ್ಲರಲ್ಲೂ ಪುಳಕ ಉಂಟುಮಾಡಿತು.

ಸಂಗೀತ ಸುಧೆ

ಸಂಗೀತ ಸುಧೆ

ಖ್ಯಾತ ಗಾಯಗಿ ಸಂಗೀತಾ ಕಟ್ಟಿ ಮತ್ತು ಸಂಗಡಿಗರು ದೇಶಭಕ್ತಿ ಗೀತ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ಪರಂಪರೆಯ ಸಂಭ್ರಮ

ಸನಾತನ ಧರ್ಮದ ಪರಂಪರೆಯನ್ನು ಬಿಂಬಿಸುವಂತ ಪ್ರದರ್ಶಶಿಕೆಗಳು ಎಲ್ಲೆಲ್ಲೂ ಮನೆ ಮಾಡಿದ್ದವು. ವಿದ್ಯಾರ್ಥಿನಿಯರು ಸಡಗರದಿಂದ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+