Bengaluru 2nd Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸ್ಥಳದ ಬಗ್ಗೆ ಬಿಗ್ ಅಪ್ಡೇಟ್
Bengaluru 2nd International Airport: ಈಗಾಗಲೇ ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್‌ಗಳನ್ನು ಹೊಂದಿದ್ದು, ಈ ಪೈಕಿ ಟರ್ಮಿನಲ್ 2 ವಿಶ್ವದಲ್ಲೇ ಅತೀ ಸುಂದರವಾಗಿದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟು ದೊಡ್ಡ ಏರ್‌ಪೋರ್ಟ್ ಇದ್ದರೂ ಸಹ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ನಗರದ ಸಮೀಪ ಮತ್ತೊಂದು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಇದೀಗ ಇದಕ್ಕೆ ಕೆಲ ಸವಾಲುಗಳು ಎದುರಾಗಿವೆ. ಹಾಗಾದ್ರೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಆದತೆ ಸ್ಥಳ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈಗಾಗಲೇ ಕೆಲವೆಡೆ ಸ್ಥಳಗಳನ್ನು ಗುರುತಿಸಲಾಗಿದ್ದರೂ, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾದ ಹಿನ್ನೆಲೆ ಈ ಯೋಜನೆಯನ್ನೂ ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಮೊದಲು ನೆಲಮಂಗಳ ಬಳಿ ನಿರ್ಮಾಣ ಮಾಡಬೇಕೆಂದು ಸರ್ಕಾರ ಪ್ಲಾನ್ ಹಾಕಿಕೊಂಡಿತ್ತು.

ಆದರೆ, ಅಲ್ಲಿನ ರೈತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ, ನಾವು ಕೃಷಿ ಭೂಮಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ಯಪಡಿಸಿದ್ದರು. ಇದು ಪ್ರತಿಭಟನೆವರೆಗೂ ಕೂಡ ಹೋಗಿತ್ತು. ಬಳಿಕ ಗೃಹ ಸಚಿವ ಪರಮೇಶ್ವರ್ ತುಮಕೂರಿನ ಬಳಿ ನಿರ್ಮಾಣ ಮಾಡಿ. ಇದರಿಂದ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಕ್ಕೆ ತುಂಬಾ ಅನುಕೂಲ ಆಗಲಿದೆ ಎಂದು ಹೇಳಿದ್ದರು. ಇವರ ಮಾತಿಗೆ ಸರ್ಕಾರ ಕ್ಯಾರೆ ಅನ್ನದೇ ಬೇರೆ ಕಡೆ ಸ್ಥಳ ಹುಡುಕಾಟ ಮುಂದುವರೆಸಿದಂತಿದೆ.
ಈ ನಡುವೆಯೇ ವಿಮಾನ ನಿಲ್ದಾಣ ನಿಲ್ದಾಣ ಸ್ಥಳಗಳ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ವರದಿಯೊಂದನ್ನು ನೀಡಿದೆ. ಹೌದು.. ಕರ್ನಾಟಕ ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಮುಂದಾಗಿರುವ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳ ಅಧ್ಯಯನ ವರದಿ ನೀಡಿದೆ. ಹಲವು ಕಠಿಣ ಸವಾಲುಗಳನ್ನು ಸರ್ಕಾರದ ಮುಂದೆ ಇಟ್ಟಿದೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಪ್ರಸ್ತಾಪನೆ ಮಾಡಲಾಗಿದ್ದ ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯ 4,800 ಹೆಕ್ಟೇರ್ ಪ್ರದೇಶ ಮತ್ತು 5,000 ಹೆಕ್ಟೇರ್ ಪ್ರದೇಶ ಹಾಗೂ ನೆಲಮಂಗಲ ಸಮೀಪದ ಕುಣಿಗಲ್ ರಸ್ತೆಯಲ್ಲಿರುವ 5,200 ಹೆಕ್ಟೇರ್ ಪ್ರದೇಶದಲ್ಲಿ ಎಎಐ ಅಧ್ಯಯನ ನಡೆಸಿತ್ತು.
ಇದೀಗ ವರದಿ ನೀಡಿರುವ ವಿಮಾನ ನಿಲ್ದಾಣ ಪ್ರಾಧಿಕಾರ 3 ಸ್ಥಳಗಳಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಇರುವ ಪ್ರಮುಖ ಸವಾಲುಗಳುಗಳನ್ನು ತೆರೆದಿಟ್ಟಿದೆ. ಆ ಸ್ಥಳೀಯ ಸಾಧ್ಯತಾ ಅಧ್ಯಯನದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಎಎಐ ಸಲ್ಲಿಸಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಆಗಿದ್ದ 3 ಸ್ಥಳಗಳ ಸವಾಲುಗಳನ್ನು ಬಿಚ್ಚಿಟ್ಟಿದೆ. ಆ ಸವಾಲುಗಳೇ ಬನ್ನೇರುಘಟ್ಟ ಅರಣ್ಯ ಪ್ರದೇಶ, ಎಚ್‌ಎಎಲ್‌ನ ಏರ್‌ಸ್ಪೇಸ್, ಕಲ್ಲು-ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶಗಳಾಗಿವೆ.
ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಅವರು ಮಾತಾನಾಡಿದ್ದು, ಎಎಐ ಸಲ್ಲಿಸಿರುವ ವರದಿಯು ಯಾವುದೇ ಸ್ಥಳವನ್ನು ಅನುಮೋದನೆ ಮಾಡಿಲ್ಲ. ಹಾಗೂ ರಿಜೆಕ್ಟ್ ಕೂಡ ಮಾಡಿಲ್ಲ. ಕೇವಲ ಪ್ರತಿ ಸ್ಥಳದಲ್ಲಿರುವ ಸವಾಲುಗಳನ್ನು ಮಾತ್ರ ಪಟ್ಟಿ ಮಾಡಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳು ಇದೆವೆ. ಈಗ ನಮ್ಮ ತಂಡವು ಈ ವರದಿಯನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸಾಧ್ಯತಾ ಮತ್ತು ಕಾರ್ಯಸಾಧ್ಯತಾ ಅಧ್ಯಯನಗಳನ್ನು ನಡೆಸಲಿದೆ. ನಾವು ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನೂ ಪರಿಶೀಲನೆ ಮಾಡಲಿದ್ದೇವೆ ಎಂದು ಹೇಳಿದರು.
ಪಟ್ಟು ಮಾಡಲಾಗಿರುವ ಮೂರು ಸ್ಥಳಗಳಿಗೂ ಬನ್ನೇರುಘಟ್ಟ ಗುಡ್ಡ ಸಮೀಪ ಇರುವುದೇ ದೊಡ್ಡ ಸವಾಲಾಗಿದೆ. ವಿಮಾನಗಳು ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ಆಗುವಾಗ ಬನ್ನೇರುಘಟ್ಟ ಪೀಕ್ ಗಂಭೀರ ಕಳವಳವನ್ನು ಉಂಟು ಮಾಡುತ್ತದೆ. ಲ್ಯಾಂಡಿಂಗ್ ಅಥವಾ ಟೇಕ್-ಆಫ್‌ನ ವಿವಿಧ ಸನ್ನಿವೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸ್ಥಳಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕಾಗುತ್ತದೆ ಎಂದು ಎಎಐನ ಹಿರಿಯ ಅಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ.
ಎರಡನೇ ಸವಾಲು ಅಂದ್ರೆ, ಮೂರು ಸ್ಥಳಗಳ ಭೂಮಿ ಬಹುತೇಕ ಒಂದೇ ರೀತಿಯಲ್ಲಿದೆ. ಆದರೆ, ನೆಲಮಂಗಲ-ಕುಣಿಗಲ್ ಭಾಗವು ಸ್ವಲ್ಪ ಹೆಚ್ಚು ಗುಡ್ಡಗಾಡು ಪ್ರದೇಶ ಆಗಿದೆ. ಇಲ್ಲಿ ಹೆಚ್ಚು ಕಲ್ಲುಗಳು ಮತ್ತು ಬಂಡೆಗಳಿವೆ. ಆದರೂ, ಇವುಗಳನ್ನು ಒಡೆದು ಭೂಮಿಯನ್ನು ಸಮತಟ್ಟುಗೊಳಿಸಬಹುದು. ಆದರೆ, ಇದು ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಹೆಚ್ಚಳ ಮಾಡುತ್ತದೆ ಎಂದು ಎಎಐ ತಿಳಿಸಿದೆ.
ಮೂರನೇಯ ಸವಾಲು ಅಂದ್ರೆ, ಪ್ರಸ್ತಾಪಿತ ಮೂರೂ ಸ್ಥಳಗಳಲ್ಲಿ ಎಚ್‌ಎಎಲ್ ಕೂಡ ಇದ್ದು, ಇದು ವೈಮಾನಿಕ ವಲಯದ ವ್ಯಾಪ್ತಿಗೆ ಬರುತ್ತವೆ. ಆದರೆ, ಇದೊಂದು ಬಗೆಹರಿಸಬಹುದಾದ ಸಮಸ್ಯೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಫ್ಲೆಕ್ಸಿಬಲ್ ಏರ್‌ಸ್ಪೇಸ್ ಬಳಕೆಯ ಒಪ್ಪಂದ ಜಾರಿಯಲ್ಲಿದೆ. ಅದರ ಪ್ರಕಾರ, ರಕ್ಷಣಾ ಇಲಾಖೆಯ ವೈಮಾನಿಕ ವಲಯವನ್ನು ನಾಗರಿಕ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.
ವಿಮಾನವು ಟೇಕ್-ಆಫ್ ಆದ ನಂತರ ಏರ್‌ಪೋರ್ಟ್‌ನ ಏರ್ ಟ್ರಾಫಿಕ್ ಕಂಟ್ರೋಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಎಚ್‌ಎಎಲ್ ವಾಯುಪ್ರದೇಶವನ್ನು ಪ್ರವೇಶಿಸಿದಾಗ, ಅದು ಎಚ್‌ಎಎಲ್ ಎಟಿಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹೊಸ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ನಿಭಾಯಿಸಲು ಎಚ್‌ಎಎಲ್ ತನ್ನ ಮಾನವಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇವೆಲ್ಲಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಉನ್ನತ ಸಲಹಾ ಸಂಸ್ಥೆಗಳ ಮೊರೆ ಹೋಗಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾವುದೇ ಇಂತಹ ದೊಡ್ಡ ಮಟ್ಟದ ಯೋಜನೆ ಕೈಗೊಳ್ಳುವಾಗ ಇಂತಹ ಸವಾಲುಗಳನ್ನು ಎದುರಿಸಿಯೇ ಮುಂದುವರೆಯಬೇಕಾಗುತ್ತದೆ. ಆದ್ದರಿಂದ ಇಂತಹ ಯೋಜನೆಗಳನ್ನು ಕೈಗೊಳ್ಳುವುದು ತುಸು ನಿಧಾನ ಅಂತಲೇ ಹೇಳಬಹುದು.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications