• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: 2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ

|

ಬೆಂಗಳೂರು, ಸೆಪ್ಟೆಂಬರ್. 11: ಉದ್ಯಾನನಗರಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ ಬುಧವಾರ ಸ೦ಜೆ 6 ಕಡೆ ಕೈಚಳಕ ತೋರಿಸಿದ್ದವರು ಗುರುವಾರ ನಾಲ್ಕು ಕಡೆ ಸರಗಳ್ಳತನ ಮಾಡಿದ್ದಾರೆ. ಎರಡು ದಿನದಲ್ಲಿ 10 ಪ್ರಕರಣಗಳು ನಡೆದಂತೆ ಆಗಿದೆ.

ಮನೆ ಎದುರು ವಾಕಿಂಗ್ ಮಾಡುತ್ತಿದ್ದ, ದೇವಾಲಯಕ್ಕೆ ತರಳುತ್ತಿದ್ದ ಮಹಿಳೆಯರನ್ನೇ ಗುರುತಾಗಿಸಿಕೊಂಡು ಕೃತ್ಯ ಎಸಗಲಾಗಿದೆ. ಕಪ್ಪು ಬಣ್ಣದ ಪಲ್ಸರ್ ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಸರ ಎಗರಿಸಿದ್ದಾರೆ. ಇರಾನಿ ಗ್ಯಾಂಗ್ ಹೆಸರಿನಲ್ಲಿ ಸರಗಳ್ಳತನ ಮಾಡಲಾಗಿದ್ದರೂ ಇದರ ಹಿಂದೆ ಸ್ಥಳೀಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.[ಮೊಬೈಲ್ ಕದಿಯಲು ಬಂದವನಿಗೆ ಯುವತಿಯರಿಂದ ಸರಿಯಾಗೇ ಬಿತ್ತು!]

ಎರಡು ದಿನದಲ್ಲಿ ನಡೆದ ಸರಗಳ್ಳತನಕ್ಕೆ ಗುರಿಯಾದವರು

* ಸೆಪ್ಟೆಂಬರ್, 10 ಬೆಳಗ್ಗೆ: ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಕಾಮಾಕ್ಷಿಪಾಳ್ಯ ಸಮೀಪದ ಕೆಎಚ್ ಬಿ ಕಾಲನಿಯ ಸಾವಿತ್ರಿ (59) (90 ಗ್ರಾ೦ ಸರ)

* ಸೆಪ್ಟೆಂಬರ್, 10 ಬೆಳಗ್ಗೆ 10.30: ತಾವರೆಕೆರೆ ಸಮೀಪದ ಪ್ಯೆಪ್‍ಲ್ಯೆನ್ ರಸ್ತೆಯಲ್ಲಿ ತರಕಾರಿ ತರಲು ತೆರಳುತ್ತಿದ್ದ ರತ್ನನಗರ ನಿವಾಸಿ ಪುಷ್ಪಾ (33)(60 ಗ್ರಾ೦)

* ಸೆಪ್ಟೆಂಬರ್, 10 ಬೆಳಗ್ಗೆ 10.45ಕ್ಕೆ ವಿನಾಯಕನಗರದಲ್ಲಿ ಟೈಲರಿ೦ಗ್ ತರಗತಿಗೆ ಹೋಗುತ್ತಿದ್ದ ವಿಶಾಲಾಕ್ಷಿ (31) (35 ಗ್ರಾ೦ನ ಸರ)* ಸೆಪ್ಟೆಂಬರ್, 10 ಬೆಳಗ್ಗೆ 11ಕ್ಕೆ ಉಳ್ಳಾಲ ಲೇಔಟ್‍ನಲ್ಲಿ ಹೂವು ಖರೀದಿ ಮಾಡುತ್ತಿದ್ದ ಸುನೀತಾ (42) (100 ಗ್ರಾ೦ ಸರ)

* ಸೆಪ್ಟೆಂಬರ್ 9 ರಂದು ಮಧ್ಯಾಹ್ನ 2.35 ರಿಂದ ರಾತ್ರಿ 8 ಗಂಟೆ ಅವಧಿಯಲ್ಲಿ ಮಹದೇವಪುರ, ಕೆ.ಆರ್.ಪುರ, ಬಾಣಸವಾಡಿ, ಜೆ.ಪಿ.ನಗರ, ಯಲಹಂಕ ನ್ಯೂ ಟೌನ್ ಮತ್ತು ಸುಬ್ರಹ್ಮಣ್ಯಪುರದಲ್ಲಿ ಅಂದರೆ 6 ಕಡೆ ಸರಗಳ್ಳತನ ಮಾಡಲಾಗಿತ್ತು.

* ಸೆಪ್ಟೆಂಬರ್ 9 ಬುಧವಾರ ಎಇಸಿಎಸ್‌ಲೇಔಟ್‌ನಲ್ಲಿ ಮೇರಿಸ್ಟೆರ್ಲ(57) (70 ಗ್ರಾಂ ಸರ), ಗಾಯತ್ರಿಲೇಔಟ್‌ಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರತ್ನಾ (50) (50 ಗ್ರಾಂ ಚಿನ್ನದ ಸರ), ಅದೇ ದಿನ ಸಂಜೆ 6.15ರ ವೇಳೆಗೆ ಶ್ರೀನಿಧಿಲೇಔಟ್ ನಿವಾಸಿ ಜಯಶ್ರೀ (60) ಎಂಬುವರು ಕಳ್ಳರ ಕೃತ್ಯಕ್ಕೆ ಬಲಿಯಾಗಿದ್ದರು.

* ಜೆ.ಪಿ.ನಗರ 5ನೇ ಹಂತದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಮಂಜುಳಾ (48), ಕಲ್ಯಾಣನಗರ 1ನೇ ಬ್ಲಾಕ್‌ನಲ್ಲಿ ಮುನಿವೆಂಕಟಮ್ಮ (68), ಯಲಹಂಕ ಉಪನಗರ ಮಣಿ (37) ಎಂಬುವರ ಸರ ಹರಿದುಕೊಂಡ ಚೋರರು ನಾಪತ್ತೆಯಾಗಿದ್ದಾರೆ.

ನಿಯಂತ್ರಣಕ್ಕೆ ಬಂದಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಹೆಚ್ಚಿಕೊಂಡಿದ್ದು ಬೆಂಗಳೂರು ನಾಗರಿಕರು ಎಚ್ಚರಿಕೆ ವಹಿಸಬೇಕಾಗಿದೆ. ಪೊಲೀಸರು ಸಹ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Total 10 Chain snatching incidents happen in Two days. On Thursday even as the police stepped up vigil following 6 cases on Wednesday. Looking at the modus operandi, police suspect an inter-State gang and are examining CCTV footage of all the incidents.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more