ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಬಂದಿದ್ದೆ ಒಬ್ಬರಿಗೆ, ಚಿಕಿತ್ಸೆ ಮಾಡ್ತಿರೋದೆ ಮತ್ತೊಬ್ಬರಿಗೆ?

|
Google Oneindia Kannada News

ಬೆಂಗಳೂರು, ಮೇ 6: ಬೆಂಗಳೂರಿನ ಬೇಗೂರು ಪೊಲೀಸ್ ಪೇದೆಯ ಕೊರೊನಾ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಕೊರೊನಾ ಬಂದಿರುವ ವ್ಯಕ್ತಿಯನ್ನು ಬಿಟ್ಟು, ಅದೇ ಹೆಸರಿನ ಮತ್ತೊಬ್ಬರಿಗೆ ಆರೋಗ್ಯ ಇಲಾಖೆ ಚಿಕಿತ್ಸೆ ನೀಡುತ್ತಿದೆಯೇ ಎನ್ನುವ ಅನುಮಾನ ಮೂಡಿದೆ.

Recommended Video

ಕೊರೊನದಿಂದ ಗುಣಮುಖರಾಗಿ ಹಿಂತಿರುಗಿದ ವೀರ ಪೊಲೀಸರು | Police | After Corona Recovery

ಬೆಂಗಳೂರಿನ ಬೇಗೂರು ಪೊಲೀಸ್ ಪೇದೆಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅದೇ ಆಸ್ಪತ್ರೆಯಲ್ಲಿ ಅದೇ ಹೆಸರಿನ (ಪೇದೆಯ ಹೆಸರಿನ) ಮತ್ತೊಬ್ಬ ವ್ಯಕ್ತಿಗೆ ಒಂದೇ ದಿನ ಕೊವೀಡ್ 19 ಪರೀಕ್ಷೆ ಮಾಡಲಾಗಿತ್ತು. ಆ ನಂತರ ಪೊಲೀಸ್‌ ಪೇದೆಗೆ ಕೊರೊನಾ ಇದೆ ಎನ್ನುವ ಕಾರಣಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪೊಲೀಸ್ ಪೇದೆಗೆ ಕೊರೊನಾ ಸೋಂಕು, ಟ್ರಾವೆಲ್ ಹಿಸ್ಟರಿ ತಂದಿದೆ ಆತಂಕ ಪೊಲೀಸ್ ಪೇದೆಗೆ ಕೊರೊನಾ ಸೋಂಕು, ಟ್ರಾವೆಲ್ ಹಿಸ್ಟರಿ ತಂದಿದೆ ಆತಂಕ

ಆದರೆ, ಈಗ ಈ ಪೇದೆಗೆ ಕೊರೊನಾ ಇಲ್ಲ ಎನ್ನುವುದು ತಿಳಿದು ಬಂದಿದೆ. ಒಂದೇ ಹೆಸರಿನ ಇಬ್ಬರ ಪರೀಕ್ಷೆ ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ನಡೆದಿದ್ದು, ಆರೋಗ್ಯ ಇಲಾಖೆ ಹೆಸರಿನಲ್ಲಿ ಎಡವಟ್ಟು ಮಾಡಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಪೇದೆಯ ಕೊರೊನಾ ಪ್ರಕರಣಕ್ಕೆ ತಿರುವು

ಪೇದೆಯ ಕೊರೊನಾ ಪ್ರಕರಣಕ್ಕೆ ತಿರುವು

ಬೆಂಗಳೂರಿನ ಬೇಗೂರು ಪೊಲೀಸ್ ಪೇದೆಯ ಕೊರೊನಾ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈಗ ಆ ಪೊಲೀಸ್ ಪೇದೆಯ ಬದಲು ಅದೇ ಹೆಸರಿನ ಇನ್ನೊಬ್ಬರಿಗೆ ಕೊರೊನಾ ಬಂದಿದೆ ಎನ್ನುವ ಮಾಹಿತಿ ಇದೆ. ಪೊಲೀಸ್ ಠಾಣೆಗೆ ಕಳಿಸಿರುವ ಕೋವಿಡ್ 19 ರಿಸಲ್ಟ್ ಶೀಟ್ ನಲ್ಲಿ ಯಾರಿಗೂ ಪಾಸಿಟಿವ್ ಇಲ್ಲ ಎಂದು ತಿಳಿಸಲಾಗಿದೆ. ಆಗ ಪಾಸಿಟಿವ್ ಇದೆ ಎಂದು ಹೇಳಲಾಗಿರುವ ಪೇದೆಗೆ ಸೋಂಕಿಲ್ಲ ಎಂದು ಠಾಣೆಗೆ ಆರೋಗ್ಯ ಇಲಾಖೆ ವರದಿ ಕಳುಹಿಸಿದೆ.

ಅಸಲಿ ಸೋಂಕಿತ ಯಾರು..?

ಅಸಲಿ ಸೋಂಕಿತ ಯಾರು..?

ಅಸ್ಪತ್ರೆಗೆ ಇರುವ ಮಾಹಿತಿ ಪ್ರಕಾರ ಪಾಸಿಟಿವ್ ಇರುವ ವ್ಯಕ್ತಿ ಫೋನ್ ನಂಬರ್‌ಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಸಲಿ ಸೋಂಕಿತ ಯಾರು..? ಆತ ಈಗ ಎಲ್ಲಿದ್ದಾನೆ ಎನ್ನುವುದೇ ಆರೋಗ್ಯ ಇಲಾಖೆಗೆ ತಿಳಿದಿಲ್ಲ. ಹೀಗಾಗಿ ಯಾರ ಬದಲು ಯಾರನ್ನೊ ಕರೆದುಕೊಂಡು ಆರೋಗ್ಯ ಅಧಿಕಾರಿಗಳು ಬಂದಿದ್ದಾರೆ ಎನ್ನುವ ಅನುಮಾನ ಮೂಡಿದೆ. ಮತ್ತೊಂದು ಕಡೆ ಸೋಂಕಿತನ ಹುಡುಕಾಟ ನಡೆಸುತ್ತಿದ್ದಾರೆ.

ಪೇದೆಗೆ ಕೊರೊನಾ ಲಕ್ಷಣಗಳು ಕಂಡಿಲ್ಲ

ಪೇದೆಗೆ ಕೊರೊನಾ ಲಕ್ಷಣಗಳು ಕಂಡಿಲ್ಲ

ಮೊನ್ನೆ ಪಾಸಿಟಿವ್ ಇದೆ ಎಂದು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದ ಪೇದೆಗೆ ಇದುವರೆಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡಿಲ್ಲ. ನಿನ್ನೆ ರಾತ್ರಿ ಬಂದಿರುವ ಹೊಸ ವರದಿ ಪ್ರಕಾರ ಪೇದೆಗೆ ಸೋಂಕು ಇಲ್ಲ ಎನ್ನುವುದು ತಿಳಿದಿದೆ. ಪೊಲೀಸ್ ಠಾಣೆಗೆ ಕಳಿಸಿರುವ ಕೋವಿಡ್ 19 ರಿಸಲ್ಟ್ ಶೀಟ್ ನಲ್ಲಿ ಯಾರಿಗೂ ಪಾಸಿಟಿವ್ ಇಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ ಪೇದೆಯ ಕುಟುಂಬದ ಹನ್ನೆರಡು ಜನರಿಗೂ ನೆಗೆಟಿವ್ ಬಂದಿದೆ.

ಪೊಲೀಸ್ ಇಲಾಖೆ ಮಾಹಿತಿ

ಪೊಲೀಸ್ ಇಲಾಖೆ ಮಾಹಿತಿ

ನಿನ್ನೆ ಒಟ್ಟು ಪೊಲೀಸ್ ಇಲಾಖೆಯ ಇಪ್ಪತ್ತೊಂದು ಜನರ ಸ್ವಾಬ್ ಸಂಗ್ರಹವನ್ನು ಆರೋಗ್ಯ ಇಲಾಖೆ ಮಾಡಿದೆ. ಬೇಗೂರು ಪೊಲೀಸ್ ಪೇದೆಯ ಕೇಸ್ ಗೊಂದಲಕ್ಕೆ ಕಾರಣವಾಗಿದೆ. ಇಂದು ಸಂಜೆ ಎಲ್ಲ ಪೊಲೀಸರ ಕೋವಿಡ್ 19 ಪರೀಕ್ಷಾ ವರದಿ ಬರಲಿದೆ. ಈ ಬಗ್ಗೆ ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿದೆ.

English summary
Bengaluru Begur police constable corona case got twist. He tested negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X