ಬೆಳವಾಡಿ ನಿರ್ದೇಶನದ 'ಬೆಕೆಟ್', ಕಲಾಗ್ರಾಮ, ಕಲಾಸೌಧದಲ್ಲಿ ಪ್ರದರ್ಶನ
ಬೆಂಗಳೂರು, ಜೂನ್ 29: ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗ 'ಬೆಕೆಟ್' ನಾಟಕದ ಐದನೇ ಮತ್ತು ಆರನೇ ಪ್ರದರ್ಶನಕ್ಕೆ ಸಜ್ಜಾಗಿದೆ.
2015ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ, ತನ್ನ ಮೊದಲ ನಾಟಕ ಚೆರ್ರಿ ಆರ್ಚರ್ಡ್ ಯಶಸ್ವಿ 15 ಪ್ರದರ್ಶನ ನೀಡಿ ಈಗ ಪ್ರಕಾಶ್ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕ ದ ತಯಾರಿಯಲ್ಲಿದೆ. ಇದೇ ಗುರುವಾರ, ಜೂನ್ 30 ಕಲಾಗ್ರಾಮದಲ್ಲಿ ಮತ್ತು ಭಾನುವಾರ, ಜುಲೈ 3 ರಂದು ಹನುಮಂತನಗರದ ಕೆಎಚ್ ಕಲಾಸೌಧದಲ್ಲಿ ನಡೆಯಲಿವೆ.
ನಾಟಕದ ಬಗ್ಗೆ:
ಜಾನ್ ಆನ್ವಿ ರಚಸಿದ ಬೆಕೆಟ್ (ಮೂಲ ಫ್ರೆಂಚ್ ನಾಟಕ)ನಾಟಕದ ಐತಿಹಾಸಿಕ ನೆಲೆ 12ನೇ ಶತಮಾನದ ಇಂಗ್ಲೆಂಡಿನ ನಾರ್ಮನ ಜನಾಂಗದ ದೊರೆ ಎರಡನೆ ಹೆನ್ರಿ ಮತ್ತು ಕ್ಯಾಥೋಲಿಕ್ ಚರ್ಚಿನ ಥಾಮಸ್ ಬೆಕೆಟ್ ನಡುವೆ ಆದ ಸಮರ. (ಆನ್ವಿಯವರು ನಾಟಕ ಬರೆಯುವಾಗ ಮುಂದೆ ಸಂತರೆಂದು ಘೋಷಿತರಾದ ಬೆಕೆಟ್ ಅವರನ್ನು ಸಾಕ್ಸನ್ ಜನಾಂಗದವರೆಂದು ತಪ್ಪಾಗಿ ಗ್ರಹಿಸಿದ್ದರು)ಈ ಕೃತಿಯನ್ನು ಟಿ.ಎಸ್. ಎಲಿಯಟ್ ರಚಿಸಿದ ಕಾವ್ಯ ನಾಟಕವಾದ ''Murder in the Cathedralಗೆ ವಿಮರ್ಶಕರು ಆಗಾಗ ಹೋಲಿಸುವುದು ಉಂಟು.

ಅದೇ ಮೂಲ ಐತಿಹ್ಯ ಮತ್ತು ಮುಖ್ಯ ಪಾತ್ರಗಳು ಎರಡೂ ಕೃತಿಗಳಲ್ಲಿ ಕಾಣಿಸಿಕೊಂಡರೂ, ಅವು ಎತ್ತಿ ಹಿಡಿಯುವ ಪ್ರಶ್ನೆಗಳು ಬೇರೆ ಬೇರೆ ಎಂದು ನನ್ನ ಅನಿಸಿಕೆ. ಎಲಿಯಟ್ ನಾಟಕದಲ್ಲಿ ಕೇಂದ್ರ ಕಥನ ಬೆಕೆಟ್ ಪಾತ್ರದ ನೈತಿಕ ಸತ್ವ ಪರಿಕ್ಷೆಯಾದರೆ, ಆನ್ವಿಯ ಬೆಕೆಟ್ ಎದುರಿಸುವುದು ಧರ್ಮಸಂಕಟ.
ಆನ್ವಿಯ ಬೆಕೆಟ್ ನಾಟಕದಲ್ಲಿ ಕೇಂದ್ರ ಕಥನ ಎಂದರೆ ರಾಜಕಾರಣ ಮತ್ತು 'ಧರ್ಮ'ದ ನಡುವೆ ಎನ್ನುವವರಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಇಲ್ಲಿಯ ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು - ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ - ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ - ಮಾಡಲು ಸಾಧ್ಯವಿಲ್ಲ ಅನ್ನಿಸುವುದು.
ಆನ್ವಿಯ ಬೆಕೆಟ್, ಪಿ. ಲಂಕೇಶರ 'ಸಂಕ್ರಾಂತಿ'ಯ ಸಾತ್ವಿಕ ಬಸವಣ್ಣನಲ್ಲ. ಗಿರೀಶ್ ಕಾರ್ನಾಡರ 'ತಲೆದಂಡ'ದ ಬಸವಣ್ಣನೂ ಅಲ್ಲ. ಈತ ಪ್ರಾರಂಭಕ್ಕೆ ಮೋಜುಗಾರ, ಸೊಗಸುಗಾರ, ವಿಷಯಲಂಪಟ. ಇಂಥವನು ದೇವರಗೆ ಮುಖಕೊಡಬೇಕು, ಕಣ್ಣಲ್ಲಿ ದೇವರನ್ನು ತುಂಬಿಕೊಂಡು ಎಲ್ಲ ಸಾಮ್ರಾಜ್ಯಗಳಂತೆ "ದೇವರ ಸಾಮ್ರಾಜ್ಯ"ವನ್ನೂ ಕಾಪಾಡಬೇಕು.
ಬೆಳವಾಡಿ ನಿರ್ದೇಶನ 'ಬೆಕೆಟ್' ನಾಟಕದ ದೃಶ್ತ್ಯಗಳು
ಸ್ವಲ್ಪ ಮಟ್ಟಿಗೆ ಈ ಬೆಕೆಟ್ ಪಡುವ ಧರ್ಮಸಂಕಟ, ಸಲಿಮ್-ಜಾವೆದ್ ರಚಿಸಿದ 'ನಮಕ್ ಹರಾಮ್' ಚಿತ್ರದಲ್ಲಿ ಕಾಣಬಹುದು.ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲಕ್ಕೂ ಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ...
ನಾಟಕ: ಬೆಕೆಟ್
ಪ್ರಸ್ತುತಿ: ಬೆಂಗಳೂರು ಥಿಯೇಟರ್ ಕಂಪನಿ
ಫ್ರೆಂಚ್ ಮೂಲ : ಜಾನ್ ಶನ್ವಿ
ವಿನ್ಯಾಸ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 30/06/2016
ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ
ದಿನಾಂಕ : 03/07/2016
ಸ್ಥಳ :ಕೆ.ಹೆಚ್. ಕಲಾಸೌಧ, ಹನುಮಂತನಗರ
ಸಮಯ : 7 ಗಂಟೆಗೆ
ಟಿಕೆಟ್ ದರ : ರೂ. 100/-
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 9483709735 ; 9900182400
ವೆಬ್ ಸೈಟ್ : www.bookmyshow.com
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications