ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಕಾವತಿ ಅರ್ಜಿದಾರರಿಗೆ ಸಿಹಿ ಸುದ್ದಿ; ಹೊಸ ವರ್ಷಕ್ಕೆ ಬಿಡಿಎ ಕೊಡುಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16; ಅರ್ಕಾವತಿ ಬಡಾವಣೆಯ ಅರ್ಜಿದಾರರಿಗೆ ಹೊಸ ವರ್ಷದ ಕೊಡುಗೆ ನೀಡಲು ಬಿಡಿಎ ತಯಾರಿ ನಡೆಸಿದೆ. ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಗೆ ಅತಿ ಶೀಘ್ರವೇ ನಿವೇಶನ ಹಂಚಿಕೆ ಮಾಡುವುದಾಗಿ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಭರವಸೆ ನೀಡಿದ್ದಾರೆ.

ಈ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಿರುವ ಅವರು, ಬಡಾವಣೆಯ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದಿದ್ದು, ಜೇಷ್ಠತೆಯ ಆಧಾರದ ಮೇಲೆ 2021ರ ಜನವರಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ...

"ಇನ್ನೂ ನಿವೇಶನಕ್ಕೆ ಕಾಯುತ್ತಿರುವುದು ದುರದೃಷ್ಟಕರ"

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಗೊಳ್ಳುತ್ತಿರುವ ಅರ್ಕಾವತಿ ಬಡಾವಣೆ ಕುರಿತು ಪ್ರಗತಿ ವಿಶ್ಲೇಷಣಾ ಸಭೆಯನ್ನು ಮಂಗಳವಾರ ಹಮ್ಮಿಕೊಂಡಿದ್ದು, ನಿವೇಶನ ಹಂಚಿಕೆ ಕುರಿತು ಪ್ರಸ್ತಾಪ ಮಾಡಿದ್ದಾರೆ. "15 ವರ್ಷಗಳಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಹಣ ಕಟ್ಟಿರುವ ಜನರು ಇನ್ನೂ ನಿವೇಶನದ ಹಂಚಿಕೆಗೆ ಬಿಡಿಎ ಬಾಗಿಲು ತಟ್ಟುತ್ತಿರುವುದು ದುರದೃಷ್ಟಕರ" ಎಂದಿದ್ದಾರೆ.

ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಜಮೀನು: ಬಿಡಿಎಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಜಮೀನು: ಬಿಡಿಎ

"ಅತಿ ಶೀಘ್ರವೇ ಹಂಚಿಕೆ ಪ್ರಕ್ರಿಯೆ ಆರಂಭ"

"ಇಷ್ಟು ವರ್ಷಗಳಾದರೂ ನಿವೇಶನ ಹಂಚಿಕೆಯಾಗಿಲ್ಲ. ಇನ್ನು ತಡ ಮಾಡುವುದಿಲ್ಲ. ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದ ಜಾಗಗಳನ್ನು ಗುರುತಿಸಿ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು. ಶೀಘ್ರವೇ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.

 ಹೊಸ ವರ್ಷದಲ್ಲಿ ನಿವೇಶನ ಹಂಚಿಕೆ ಆರಂಭ

ಹೊಸ ವರ್ಷದಲ್ಲಿ ನಿವೇಶನ ಹಂಚಿಕೆ ಆರಂಭ

ಎಷ್ಟು ಅಳತೆಯ ನಿವೇಶನವನ್ನು ಎಷ್ಟು ಜನರಿಗೆ ಹಂಚಿಕೆ ಮಾಡಲು ಸಾಧ್ಯ ಎಂಬ ಕುರಿತು ಡಿಸೆಂಬರ್ 30ರ ಒಳಗೆ ವಿವರವಾದ ವರದಿ ಕೇಳಲಾಗಿದೆ. ಅಷ್ಟರಲ್ಲಿ ನಿವೇಶನಗಳ ಕುರಿತು ಸ್ಪಷ್ಟ ಆಯಾಮ ದೊರೆಯಲಿದೆ. ಆ ವರದಿ ಆಧರಿಸಿ ನಿವೇಶನಗಳ ಲಭ್ಯತೆ ಹಾಗೂ ಜೇಷ್ಠತೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ಹೊಸ ವರ್ಷದ ಆರಂಭದಲ್ಲಿ ಅಥವಾ 2021 ಜನವರಿ ಕೊನೆಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ

Recommended Video

ಬೆಂಗಳೂರು:ಟ್ರಾಫಿಕ್ ಕ್ಲಿಯರ್ ಮಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ | Oneindia Kannada
 ಬಿಡಿಎ ನಕಲಿ ದಾಖಲೆ ಪ್ರಕರಣಕ್ಕೆ ತನಿಖಾ ತಂಡ

ಬಿಡಿಎ ನಕಲಿ ದಾಖಲೆ ಪ್ರಕರಣಕ್ಕೆ ತನಿಖಾ ತಂಡ

ಬಿಡಿಎ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಿವೇಶನ ಹಂಚಿಕೆ ಮಾಡಲು ಯತ್ನಿಸಿದ ಪ್ರಕರಣದ ಕುರಿತ ತನಿಖೆಗೆ ಸರ್ಕಾರವು ಶೀಘ್ರವೇ ವಿಶೇಷ ತನಿಖಾ ತಂಡ ನೇಮಿಸಲಿದೆ. ಇದುವರೆಗೂ ಬಿಡಿಎ ಅಧಿಕಾರಿಗಳನ್ನೂ ಒಳಗೊಂಡಂತೆ ಆರು ಜನರನ್ನು ಬಂಧಿಸಲಾಗಿದೆ. ಎಂಥ ಪ್ರಭಾವಿತರಾಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.

English summary
BDA Chairperson S R Vishwanath had directed officials to make arrangements for distribution of plots in arkavathy applicants on seniority basis in january 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X