ಡೆಂಗ್ಯೂ ಪೀಡಿತರ ಪ್ಲೇಟ್ಲೆಟ್‌ ವೆಚ್ಚ ಭರಿಸಲಿದೆ ಬಿಬಿಎಂಪಿ

ಬೆಂಗಳೂರು, ಆಗಸ್ಟ್ 1: "ಡೆಂಗ್ಯೂ ಪೀಡಿತರ ಪ್ಲೇಟ್ಲೆಟ್‌ ಖರೀದಿ ವೆಚ್ಚ ಬಿಬಿಎಂಪಿ ಭರಿಸಲಿದೆ" ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದ್ದಾರೆ.

ನಗರದದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಬಡ ರೋಗಿಗಳು ರಕ್ತದ ಪ್ಲೇಟ್ಲೆಟ್‌ಗಳಿಗೆ ಖರ್ಚು ಮಾಡಿದ ಹಣವನ್ನು ಪಾಲಿಕೆ ಭರಿಸಲಿದೆ ಎಂದು ಅವರು ಸೋಮವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಭರವಸೆ ನೀಡಿದ್ದಾರೆ.

BBMP will bear the cost of purchasing dengue platelets - Commissioner

"ಪ್ಲೇಟ್ಲೆಟ್‌ಗಳಿಗೆ ವೆಚ್ಚ ಮರುಪಾವತಿಗೆ ಆದೇಶ ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್‌ ಖರೀದಿಸಿದ ಬಿಲ್‌ಗಳನ್ನು ನೀಡಿದರೆ, ಅದನ್ನು ಪಾಲಿಕೆಯಿಂದ ಭರಿಸಲಾಗುತ್ತದೆ. ಆದರೆ ಬಡ ರೋಗಿಗಳನ್ನು ಗುರುತಿಸಲು ಮಾನದಂಡಗಳನ್ನು ನಿರ್ಧರಿಸಬೇಕಿದೆ," ಎಂದು ಆಯುಕ್ತರು ತಿಳಿಸಿದ್ದಾರೆ.

ಇದೇ ವೇಳೆ ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆ ಕಡೆಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ಸಹಾಯವಾಣಿಯನ್ನೂ ಆರಂಭಿಸಲಾಗುತ್ತದೆ. ಜತೆಗೆ ಮನೆಗಳ ಹೊರಗೆ ನಿಲ್ಲುವ ನೀರನ್ನು ತೆರವುಗೊಳಿಸಲು ಪೌರಕಾರ್ಮಿಕರು ಹಾಗೂ ಲಿಂಕ್‌ ವರ್ಕರ್‌
ಗಳನ್ನು ಬಳಸಿಕೊಳ್ಳುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಕಡೆಗಳಲ್ಲಿ ಔಷಧ ಸಿಂಪಡಣೆ, ಫಾಗಿಂಗ್‌ ಮಾಡಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+