ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ

ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಫೆಬ್ರುವರಿ 02 ರಿಂದ 05 ರವರೆಗೆ 3 ದಿನ ಖಾತಾ ಮೇಳ ಹಮ್ಮಿಕೊಳ್ಳಲಾಗಿದೆ. ಆಸ್ತಿ ಖಾತೆ ಮಾಡಿಕೊಳ್ಳುವವರಿಗೆ ಇದೊಂದು ಸುವರ್ಣ ಅವಕಾಶ ಎಂದು ಬಿಬಿಎಂಪಿ ತಿಳಿಸಿದೆ.

|
Google Oneindia Kannada News

ಬೆಂಗಳೂರು, ಜನವರಿ 25: ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 3 ದಿನಗಳ ಕಾಲ ಖಾತಾ ಮೇಳ ಹಮ್ಮಿಕೊಳ್ಳಲಾಗಿದೆ.

ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಂದಿನ ತಿಂಗಳು ಫೆಬ್ರುವರಿ 02 ರಿಂದ ಫೆಬ್ರುವರಿ 05 ರವರೆಗೆ ಖಾತಾ ಮೇಳವನ್ನು ಆಯೋಜಿಸಲಾಗಿದೆ.

ನಗರದ ಎಲ್ಲಾ 8 ವಲಯಗಳಲ್ಲಿ ಒಟ್ಟು 2199 ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿ 317 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಈ ಪೈಕಿ ದಕ್ಷಿಣ ವಲಯದ ಎಲ್ಲಾ ನಾಗರಿಕರು ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ತಮ್ಮ ಆಸ್ತಿಗಳಿಗೆ ಖಾತೆ ಹಾಗೂ ಖಾತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ವಲಯ ಆಯುಕ್ತರಾದ ಜಯರಾಮ್ ರಾಯ್‌ಪುರ ಅವರ ಮನವಿ ಮಾಡಿದ್ದಾರೆ. ಜೊತೆಗೆ ಮೂರು ದಿನದ ಖಾತಾ ಮೇಳದ ಸದುಪಯೋಗ ಮಾಡಿಕೊಳ್ಳುವಂತೆ ಕೋರಿದ್ದಾರೆ.

BBMP Will Be Held Khata Mela In Bengaluru From February 3rd to 5th

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಒಟ್ಟು 5232 ಖಾತಾ ಅರ್ಜಿಗಳ ಪೈಕಿ, ಇದುವರೆಗೆ 3038 ಖಾತಾ ಸಂಬಂಧಿತ ಅರ್ಜಿಗಳು ವಿಲೇವಾರಿಯಾಗಿವೆ. ಆದರೆ 2199 ಬಾಕಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿನ ಬಾಕಿ ಉಳಿದಿರುವ 2199 ಖಾತಾ ಅಂಕಿ ಸಂಖ್ಯೆ ನೋಡುವುದಾದರೆ...

ಯಲಂಕ ವಲಯ - 57

ಮಹದೇವಪುರ ವಲಯ - 459

ದಾಸರಹಳ್ಳಿ ವಲಯ - 124

ರಾಜರಾಜೇಶ್ವರಿ ನಗರ - 302

ಬೆಂಗಳೂರು ಪಶ್ಚಿಮ - 326

BBMP Will Be Held Khata Mela In Bengaluru From February 3rd to 5th

ಬೆಂಗಳೂರು ದಕ್ಷಿಣ - 317

ಬೆಂಗಳೂರು ಪೂರ್ವ- 389

ಬೊಮ್ಮನಹಳ್ಳಿ ವಲಯ - 125

ಒಟ್ಟು - 2199

English summary
A Khata Mela will be held in Bengaluru from February 3rd to 5th by Bruhat Bengaluru Mahanagara Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X