ಬಿಬಿಎಂಪಿ ವಿಭಜನೆ ವಿಧೇಯಕ ರಾಷ್ಟ್ರಪತಿಗಳಿಗೆ ರವಾನೆ, 4 ಕಾರಣಗಳು
ಬೆಂಗಳೂರು, ಜುಲೈ 29 : ಬಿಬಿಎಂಪಿಯನ್ನು ವಿಭಜನೆ ಮಾಡುವ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ದನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ. ಇದರಿಂದ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಬಿಬಿಎಂಪಿ ಚುನಾವಣೆ ನಡೆಯುವುದು ಖಚಿತವಾಗಿದೆ.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧೇಯಕಕ್ಕೆ ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಅಂಕಿತ ಹಾಕದಿರಲು ರಾಜ್ಯಪಾಲರು ಹಲವು ಕಾರಣಗಳನ್ನು ನೀಡಿದ್ದಾರೆ. [ಆಗಸ್ಟ್ 22ರಂದು ಬಿಬಿಎಂಪಿ ಚುನಾವಣೆ]
ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು ಅಷ್ಟರೊಳಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರೆ ಚುನಾವಣೆ ವಿಳಂಬವಾಗಲಿದೆ. ಇಲ್ಲವಾದಲ್ಲಿ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಚುನಾವಣೆ ನಡೆದು 25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [ಪಾಲಿಕೆ ವಿಭಜನೆ, ಪಾಟೀಲ್ ಸಮಿತಿ ವರದಿ]
ರಾಷ್ಟ್ರಪತಿಗಳು ವಿಧೇಯಕಕ್ಕೆ ಒಪ್ಪಿಗೆ ನೀಡುವ ಕುರಿತು ನಿರ್ಧಾರವನ್ನು ಕೈಗೊಳ್ಳಲು ಕನಿಷ್ಠವೆಂದರೂ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ವಿಧೇಯಕದ ಬಗ್ಗೆ ಕಾನೂನು, ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯ ಪಡೆಯುತ್ತಾರೆ. ಅನಂತರ ರಾಷ್ಟ್ರಪತಿಗಳ ಬಳಿ ಅಂಕಿತಕ್ಕೆ ತೆರಳುತ್ತದೆ. ಈ ಪ್ರಕ್ರಿಯೆ ವಿಳಂಬವಾಗುವುದರಿಂದ ನಿಗದಿಯಂತೆ ಚುನಾವಣೆ ನಡೆಯುವುದು ಖಚಿತವಾಗಿದೆ. ರಾಜ್ಯಪಾಲರು ಸಹಿ ಹಾಕದಿರಲು ನೀಡಿರುವ ಕಾರಣಗಳು....

ಸಂವಿಧಾನದ ತಿದ್ದುಪಡಿಗೆ ವಿರುದ್ಧವಾಗಿದೆ
ಸಂವಿಧಾನದ ಅನ್ವಯ ಸಾಂವಿಧಾನಿಕ ಸಂಸ್ಥೆಗಳಿಗೆ ಪ್ರತ್ಯೇಕ ಕಾನೂನು ರಚಿಸುವಂತಿಲ್ಲ. ಬಿಬಿಎಂಪಿ ವಿಚಾರದಲ್ಲಿ ಈ ವಿಧೇಯಕ ತಂದಿರುವುದು ಸಂವಿಧಾನದ ಸೆಕ್ಷನ್ 9 (ಎ) ಗೆ ವಿರುದ್ಧವಾಗಿದೆ. ಆದ್ದರಿಂದ ಅಂಕಿತ ಹಾಕಿತ್ತಿಲ್ಲ ಎಂದು ರಾಜ್ಯಪಾಲರು ವಿವರಣೆ ನೀಡಿದ್ದಾರೆ.

ಶೂನ್ಯ ಸೃಷ್ಟಿಯಾಗಬಾರದು
ಈ ವಿಧೇಯಕಕ್ಕೆ ಅಂಕಿತ ಹಾಕಿದ ತಕ್ಷಣ ಬಿಬಿಎಂಪಿಯು ಅಸ್ತಿತ್ವವನ್ನು ಕಳೆದುಕೊಂಡು ಶೂನ್ಯ ಸೃಷ್ಟಿಯಾಗುತ್ತದೆ. ನಗರ, ಪಟ್ಟಣ ಸಂಸ್ಥೆಗಳಲ್ಲಿ ಹೀಗೆ ಶೂನ್ಯ ಸೃಷ್ಟಿಯಾಗಬಾರದು.

ಎಷ್ಟು ಭಾಗವಾಗಿ ವಿಭಜನೆ ಸ್ಪಷ್ಟತೆ ಬೇಕು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಎಷ್ಟು ಭಾಗವಾಗಿ ವಿಂಗಡನೆ ಮಾಡಲಾಗುತ್ತದೆ, ಅವರ ವ್ಯಾಪ್ತಿಯನ್ನು ಹೇಗೆ ಗುರುತಿಸುವಿರಿ ಎಂಬ ಬಗ್ಗೆ ಸ್ಪಷ್ಟತೆಗಳು ಬೇಕಾಗಿದೆ.

ಒಂದೇ ರಾಜ್ಯಕ್ಕೆ ಸೀಮಿತವಾಗಬಾರದು
ಇಷ್ಟು ದೊಡ್ಡ ನಗರದ ವಿಭಜನೆ ಮಾಡುವ ವಿಚಾರ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು. ಈ ಬಗ್ಗೆ ರಾಷ್ಟ್ರವ್ಯಾಪಿ ಏಕರೂಪ ಕಾಯ್ದೆಯ ಅಗತ್ಯವಿದೆ. ಆದ್ದರಿಂದ ಇದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತಿದೆ.

ಚುನಾವಣೆ ನಡೆಯುವುದು ಖಚಿತ
ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು ಅಷ್ಟರೊಳಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರೆ ಚುನಾವಣೆ ವಿಳಂಬವಾಗಲಿದೆ. ಇಲ್ಲವಾದಲ್ಲಿ ನಿಗದಿತ ವೇಳಾಪಟ್ಟಿಯಂತೆ ಆ.22ರಂದು ಚುನಾವಣೆ ನಡೆದು 25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
-
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications