ಬಿಬಿಎಂಪಿ ಅಗ್ನಿ ಅವಘಡ: ಮೃತ ಶಿವಕುಮಾರ್ ಕುಟುಂಬಕ್ಕೆ ಆರ್ಥಿಕ ಅಭಯ ನೀಡಿದ ಸಂಘ
ಬೆಂಗಳೂರು, ಸೆಪ್ಟಂಬರ್ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗುಣ ನಿಯಂತ್ರಣ ಕೊಠಡಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದರಲ್ಲಿ ಅನೇಕ ಮಂದಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಅಪೊಲೋ ಆಸ್ಪತ್ರೆಯಲ್ಲಿ ಮೃತಪಟ್ಟ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರ ಕುಟುಂಬಕ್ಕೆ ಭಾರೀ ಆರ್ಥಿಕ ನೆರವನ್ನು ಬಿಬಿಎಂಪಿ ಪದಾಧಿಕಾರಿಗಳು ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಆಗಸ್ಟ್ 12 ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ನಡೆದಿತ್ತು. ಅದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬುಧವಾರ ಡಾ.ಶಿವಕುಮಾರ್ ಅವರು ಸಾವಿಗೀಡಾದರು. ಅವರು ಕುಟುಂಬಕ್ಕೆ ಸಂಘವು ಆರ್ಥಿಕ ನೆರವು ಒದಗಿಸಲು ಮುಂದಾಗಿದ್ದು, ಒಟ್ಟು 95.5 ಲಕ್ಷ ರೂಪಾಯಿ ನೀಡುವುದಾಗಿ ಘೊಷಿಸಿದೆ. ಅವರ ಮಕ್ಕಳ ಓದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಧರಿಸಿದ್ದು, ಶೀಘ್ರವೇ ಚೆಕ್ ಹಸ್ತಾಂತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿಬಿಎಂಪಿಯ ಅಮೃತ್ ರಾಜ್ ಹೇಳಿದ್ದಾರೆ.

ಅದಷ್ಟೇ ಅಲ್ಲದೇ ದಿ.ಶಿವಕುಮಾರ್ ಅವರ ಸ್ಮರಣಾರ್ಥ ಸಂಘದಿಂದ ಸಂಪೂರ್ಣ ವ್ಯವಸ್ಥಿತ ಆಂಬ್ಯುಲೆನ್ಸ್ ಗಳನ್ನು ಪೌರಕಾರ್ಮಿಕರ ಸೇವೆಗೆ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಕರಣದ ತನಿಖೆ ವರದಿ ಸಲ್ಲಿಕೆ ವಿಳಂಬ
ಬಿಬಿಎಂಪಿ ಕಚೇರಿಯ ಅಗ್ನಿ ಅವಘಡ ಬಗ್ಗೆ ಆಂತರಿಕ ತನಿಖೆ ತಿಂಗಳ ಕೊನೆಗೆ ಅಂದರೆ ಆಗಸ್ಟ್ 31 ರೊಳಗೆ ಸಲ್ಲಿಕೆ ಆಗಬೇಕಿತ್ತು. ಆದರೆ ಅದು ಎರಡು ವಾರಗಳ ಕಾಲ ವಿಳಂಬವಾಗಿದೆ ಎಂದು ವಿಚಾರಣಾ ಸಮಿತಿಯ ಮುಖ್ಯಸ್ಥ ಬಿ.ಎಸ್.ಪ್ರಹ್ಲಾದ್ ಹೇಳಿದರು.
ಪಾಲಿಕೆಯಲ್ಲಿನ ಕೆಲ ಕೆಲಸಗಳು ವಿಳಂಬ ಹಿನ್ನೆಲೆಯಲ್ಲಿ ಜವಾಬ್ದಾರಿಗಳಿಂದ ನಿಗದಿತ ಸಮಯಕ್ಕೆ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ. ಮುಂದಿನ ಎರಡು ವಾರದ (15 ದಿನ) ಒಳಗೆ ಪ್ರಕರಣದ ತನಿಖೆ ವರದಿಯನ್ನು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಅಗ್ನಿ ಅವಘಡ ತನಿಖೆಯಲ್ಲಿ ಪರೀಕ್ಷೆಯ ಕಾರ್ಯವಿಧಾನಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಬೆಂಕಿಗೆ ಕಾರಣವಾಗಿರುವ ಬಿಟುಮೆನ್‌ನಲ್ಲಿ ಇರುವ ನಿರ್ಣಾಯಕ ಅಂಶವಾಗಿರುವ ಬೆಂಜೀನ್ ದ್ರಾವಣ ಬಳಕೆ ಕುರಿತು ವ್ಯತ್ಯಾಸಗಳು, ಬೆಂಜೀನ್ ದ್ರಾವಣ ಸಮರ್ಪಕ ಬಳಕೆ ಆಗದಿರುವುದು, ವಿಲೇವಾರಿ ಮಾಡುವುದು ಸೇರಿದಂತ ಕೆಲವು ಅಂಶಗಳನ್ನು ಪರಿಶೀಲಿಸಲಾಗುವುದು ಎಂದರು.
ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಅಭಿಯಂತರರಾಗಿದ್ದ ಸಿ.ಎಂ ಶಿವಕುಮಾರ್ ಅವರ ನಿಧನದ ಸ್ಮರಣಾರ್ಥ ಇಂದು ಶ್ರದ್ಧಾಂಜಲಿ ಸಮರ್ಪಣೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಶಿವಕುಮಾರ್ ರವರ ನಿಧನದ ಹಿನ್ನೆಲೆ ಮಾನ್ಯ ಉಪ ಮುಖ್ಯಮಂತ್ರಿ ರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ. ಅದರಂತೆ ಕೂಡಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.












Click it and Unblock the Notifications