ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

ಬೆಂಗಳೂರು, ಅಕ್ಟೋಬರ್ 03 : ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್. ಬೆಂಗಳೂರು ನಗರದಲ್ಲಿ ಕ್ಯಾಂಟೀನ್‌ನನ್ನು ಬಿಬಿಎಂಪಿ ನಡೆಸುತ್ತಿದೆ. ನಗರದ ಕ್ಯಾಂಟೀನ್‌ನಲ್ಲಿನ ಮೆನು ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ.

ಬೆಂಗಳೂರು ನಗರದಲ್ಲಿ 198 ಇಂದಿರಾ ಕ್ಯಾಟೀನ್‌, ಹಲವಾರ ಸಂಚಾರಿ ಕ್ಯಾಂಟೀನ್‌ಗಳಿವೆ. ಕ್ಯಾಂಟೀನ್‌ಗೆ ಆಗಮಿಸಿದ 1,500 ಜನರು ಮೆನು ಬದಲಾವಣೆಗಾಗಿ ಸಲಹೆ ನೀಡಿದ್ದಾರೆ. ಕಾಫಿ, ಟೀ ಒದಗಿಸುವಂತೆಯೂ ಸಲಹೆ ಬಂದಿದೆ.

ಜನರ ಸಲಹೆ ಆಧರಿಸಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಮಾಡಲಿದೆ. ಟೀ ಅನ್ನು ಬೆಳಗಿನ ಉಪಹಾರದ ಜೊತೆ ಒದಗಿಸುವ ಕುರಿತು ಚಿಂತನೆ ನಡೆಸುತ್ತಿದೆ. ಇನ್ನೆರಡು ವಾರದಲ್ಲಿ ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆ ಆಗುತ್ತಿದೆ.

BBMP to change Indira Canteen food menu

ಬಿಬಿಎಂಪಿ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜನರ ಸಲಹೆಯಂತೆ ಮೆನು ಬದಲಾವಣೆ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತಷ್ಟು ಜನರನ್ನು ಕ್ಯಾಂಟೀನ್‌ಗೆ ಸೆಳೆಯಲು ಸಹಾಯಕವಾಗಲಿದೆ' ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗಳಲ್ಲಿನ ಮೆನು ಬದಲಾವಣೆ ಬೆಂಗಳೂರು ನಗರದ ಕ್ಯಾಂಟೀನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಬೇರೆ ಜಿಲ್ಲೆಗಳ ಕ್ಯಾಂಟೀನ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+