ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳದಲ್ಲಿ ವಾಲಿದ 5 ಅಂತಸ್ತಿನ ಕಟ್ಟಡ; ತೆರವು ಕಾರ್ಯ ಆರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪಾಪುರದಲ್ಲಿ ವಾಲಿದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಟ್ಟಡದಲ್ಲಿದ್ದ ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಹೆಬ್ಬಾಳ ಸಮೀಪದ ಕೆಂಪಾಪುರದಲ್ಲಿ 5 ಅಂತಸ್ತಿನ ಕಟ್ಟಡ ಬುಧವಾರ ಬೆಳಗ್ಗೆ ವಾಲಿತ್ತು. ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿದ್ದರು.

30 ಜನರ ಬಲಿ ಪಡೆಯುತ್ತಿತ್ತು ಕುಸಿದು ನಿಂತ ಪಿಜಿ ಕಟ್ಟಡ!30 ಜನರ ಬಲಿ ಪಡೆಯುತ್ತಿತ್ತು ಕುಸಿದು ನಿಂತ ಪಿಜಿ ಕಟ್ಟಡ!

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮತ್ತು ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಾಲಿದ ಕಟ್ಟಡವನ್ನು ಹೇಗೆ ಸುರಕ್ಷಿತವಾಗಿ ತೆರವುಗೊಳಿಸಬೇಕು? ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು.

ಹೆಬ್ಬಾಳದಲ್ಲಿ ವಾಲಿದ 5 ಅಂತಸ್ತಿನ ಕಟ್ಟಡ: ಆತಂಕದಲ್ಲಿ ಜನಹೆಬ್ಬಾಳದಲ್ಲಿ ವಾಲಿದ 5 ಅಂತಸ್ತಿನ ಕಟ್ಟಡ: ಆತಂಕದಲ್ಲಿ ಜನ

ಗುರುವಾರ ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ. ಸ್ಥಳದಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಅಕ್ಕ-ಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

 ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ

ವಾಲಿದ ಕಟ್ಟಡ ತೆರವು ಕಾರ್ಯ

ವಾಲಿದ ಕಟ್ಟಡ ತೆರವು ಕಾರ್ಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೆಬ್ಬಾಳದ ಕೆಂಪಾಪುರದ ಜಿ.ರಾಮಯ್ಯ ಲೇಔಟ್‌ನಲ್ಲಿ ಅಪಾಯದ ಸ್ಥಿತಿಯಲ್ಲಿದ್ದ 5 ಅಂತಸ್ತಿನ ಕಟ್ಟಡವನ್ನು ಮುಂಜಾಗೃತ ಕ್ರಮಗಳೊಂದಿಗೆ ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ.

105 ಮಂದಿಗೆ ವ್ಯವಸ್ಥೆ

105 ಮಂದಿಗೆ ವ್ಯವಸ್ಥೆ

ಅಪಾಯದ ಸ್ಥಿತಿಯಲ್ಲಿದ್ದ ಕೆಂಪಾಪುರದ ಜಿ.ರಾಮಯ್ಯ ಲೇಔಟ್‌ನ ಕಟ್ಟಡದ, ಆಸುಪಾಸಿನ 150 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡಿ ಸೂಕ್ತ ವ್ಯವಸ್ಥೆಯನ್ನು ಬಿಬಿಎಂಪಿಯಿಂದ ಕಲ್ಪಿಸಲಾಗಿದೆ.

ಮುಂಜಾಗ್ರತಾ ಕ್ರಮ

ಮುಂಜಾಗ್ರತಾ ಕ್ರಮ

ವಾಲಿದ 5 ಅಂತಸ್ತಿನ ಕಟ್ಟಡವನ್ನು ತೆರವುಗೊಳಿಸುವಾಗ ಅಕ್ಕ-ಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇಂಜಿನಿಯರ್‌ಗಳ ಸಲಹೆ ಪಡೆದು ಕಟ್ಟಡಗಳ ಭದ್ರತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

5 ಅಂತಸ್ತಿನ ಕಟ್ಟಡ ವಾಲಿತ್ತು

5 ಅಂತಸ್ತಿನ ಕಟ್ಟಡ ವಾಲಿತ್ತು

ಕಟ್ಟಡದ ಹಿಂಭಾಗದಲ್ಲಿ ಮನೆ ಕಟ್ಟಲು 8 ಅಡಿ ಆಳದ ಹಳ್ಳ ತೆಗೆಯಲಾಗಿತ್ತು. ಆದ್ದರಿಂದ, 5 ಅಂತಸ್ತಿನ ಕಟ್ಟಡ ವಾಲಿತ್ತು. ತಕ್ಷಣ ಕಟ್ಟಡದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಗ್ಯಾಸ್ ಕಲೆಕ್ಷನ್‌ಗಳನ್ನು ತೆಗೆಯಲು ಸೂಚನೆ ನೀಡಲಾಗಿತ್ತು.

English summary
Bruhat Bengaluru Mahanagara Palike (BBMP) has started demolishing the dangerously leaning structure in Hebbal, Kempapura. Officials have taken all safety measures to prevent any damage to neighbouring buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X