ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ; ಇಬ್ಬರು ಸದಸ್ಯರ ಆಯ್ಕೆ

ಬೆಂಗಳೂರು, ಫೆಬ್ರವರಿ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಲೆಕ್ಕಪತ್ರ ಹಾಗೂ ತೋಟಗಾರಿಕೆ ಇಲಾಖೆ ಸ್ಥಾಯಿ ಸಮಿತಿಯ ಎರಡು ಸ್ಥಾನಕ್ಕೆ ಸೋಮವಾರ ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಎನ್ ವಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಈ ಚುನಾವಣೆ ನಡೆಯಿತು. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಜೆ.ಪಿ.ಉದ್ಯಾನವನ ವಾರ್ಡ್- 17 ರ ಸದಸ್ಯರಾದ ಮಮತಾ ವಾಸುದೇವ್ ಸದಸ್ಯರಾಗಿ ಆಯ್ಕೆಯಾದರು. ತೋಟಗಾರಿಕೆ ಸ್ಥಾಯಿ ಸಮಿತಿಗೆ ರಾಜಾಜಿನಗರ ವಾರ್ಡ್- 99 ಸದಸ್ಯರಾದ ಜಿ.ಕೃಷ್ಣಮೂರ್ತಿ ಸದಸ್ಯರಾಗಿ ಆಯ್ಕೆಯಾದರು.

ಬೆಳಿಗ್ಗೆ 8;30 ರಿಂದ 11 ರವೆರೆಗೆ ನಾಮಪತ್ರಗಳನ್ನು ಸಲ್ಲಿಸಲು ಸಮಯ ನಿಗದಿ ಮಾಡಲಾಗಿತ್ತು. 11;30 ಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ, ಕೋರಮ್ ಕೊರತೆಯಿಂದ ಎನ್ ವಿ ಪ್ರಸಾದ್ ಚುನಾವಣೆಯಲ್ಲು ಮಧ್ಯಾಹ್ನ 1 ಕ್ಕೆ ಮುಂದೂಡಿದ್ದರು.

BBMP Standing Committee Election 2 Members Selected

ಬಿಬಿಎಂಪಿಯ ಪ್ರಸಕ್ತ ಸಾಲಿನ ಕೊನೆಯ ಅವದಿಯ ಸ್ಥಾಯಿ ಸಮಿತಿಗಳ ಚುನಾವಣೆ ಇದಾಗಿತ್ತು. ಆಗಸ್ಟ್‌ನಲ್ಲಿ ಬಿಬಿಎಂಪಿ ಚುನಾಯಿತ ಆಡಳಿತದ ಅವಧಿ ಮುಗಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+