ಮಳೆಯಿಂದ ನಿಮ್ಮ ಏರಿಯಾದಲ್ಲೂ ತೊಂದರೆಯಾಗಿದೆಯೇ? : ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ
ಬೆಂಗಳೂರು, ಮೇ 24: ನಗರದಲ್ಲಿ ಇಂದು ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಸುರಿದಿದೆ, ಗಾಳಿಯ ರಭಸಕ್ಕೆ ನೂರಾರು ಮರಗಳು ಧರೆಗುರುಳಿವೆ.
Recommended Video
ಜನರಿಗೆ ಮಳೆಯಿಂದ ಯಾವುದೇ ತೊಂದರೆ ಆದಲ್ಲಿ ಈ ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ. ಇನ್ನೇನು ಮುಂಗಾರು ಹತ್ತಿರವಾಗುತ್ತಿದೆ. ಬಿಬಿಎಂಪಿಯು ಮಳೆಗಾಲದಲ್ಲಿ ತೊಂದರೆ ಉಂಟು ಮಾಡಬಲ್ಲ ಮರದ ರೆಂಬೆಗಳನ್ನು ಕಡಿಯುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ. ಮಳೆಗಾಲ ಎದುರಿಸಲು ಬೇಕಾಗಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬೆಂಗಳೂರಿನ ಗವಿಪುರ, ಎನ್‌ಆರ್ ಕಾಲೊನಿ, ಜೆಪಿನಗರ, ಪುಲಕೇಶಿನಗರ, ಮಹಾದೇವಪುರ ಸೇರಿ ಹಲವು ಬಡಾವಣೆಗಳಲ್ಲಿ ಸುಮಾರು 150 ಮರಗಳು ನೆಲಕ್ಕುರುಳಿವೆ. ಬಿಬಿಎಂಪಿಯು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರಸ್ತೆ, ಕಸ, ಮಳೆ ನೀರು ಸಂಗ್ರಹ, ಬೀದಿನಾಯಿಗಳ ಹಾವಳಿ ಸೇರಿದಂತೆ ಸಾರ್ವಜನಿಕರು ವಿವಿಧ ವಿಚಾರಗಳ ಕುರಿತು ದೂರು ನೀಡಬಹುದಾಗಿದೆ. ಮೊದಲು ತಮ್ಮ ಬಿಬಿಎಂಪಿ ವಲಯಗಳನ್ನು ಜನರು ತಿಳಿದುಕೊಳ್ಳಬೇಕು.

ವಲಯವಾರು ಸಹಾಯವಾಣಿ ಕೇಂದ್ರಗಳನ್ನು ಬಿಬಿಎಂಪಿ ಸ್ಥಾಪನೆ ಮಾಡಿದೆ. ದೂರುಗಳು ಬರುತ್ತಿದ್ದಂತೆ ಅದನ್ನು ಪರಿಹಾರ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ವಲಯವಾರು ಕರೆಗಳನ್ನು ಸ್ವೀಕಾರ ಮಾಡುವುದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.












Click it and Unblock the Notifications