ಬಿಡಿಎ ನಿವೇಶನಕ್ಕೆ ಸುಧಾರಣೆ ಶುಲ್ಕ ಪಾವತಿಸಿ : ಬಿಬಿಎಂಪಿ ಸೂಚನೆ

ಬೆಂಗಳೂರು, ಡಿ. 30: ಜಿಲ್ಲಾಧಿಕಾರಿ ಮೂಲಕ ಭೂ ಬಳಕೆಗೆ ಪರಿವರ್ತನೆಗೊಂಡ ಬಿಡಿಎ ನಿವೇಶನಗಳ ಸುಧಾರಣಾ ಶುಲ್ಕ ಪಾವತಿಸಿ ಖಾತೆ ಪಡೆಯಬೇಕೆಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಸೂಚಿಸಿದ್ದಾರೆ.

ಶುಲ್ಕ ತುಂಬಿ ಖಾತೆ ತೆರೆಯಲು ಆದೇಶಿಸಿದ್ದರೂ ಮಾಲೀಕರು ಮುಂದೆ ಬರುತ್ತಿಲ್ಲ. ಸುಧಾರಣಾ ವೆಚ್ಚದ ಮೊತ್ತವನ್ನು ನಿಗದಿಪಡಿಸುವ ಮೊದಲೇ ಕೆಲವರು ಸುಧಾರಣಾ ಶುಲ್ಕ ಪಾವತಿಸುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಖಾತಾ ನೋಂದಣಿ ಹಾಗೂ ನಕ್ಷೆ ಮಂಜೂರಾತಿ ಪಡೆದಿದ್ದಾರೆ. ಅವರು ಕೂಡಲೇ ಅಭಿವೃದ್ಧಿ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಖಾತೆ ಬದಲಾವಣೆಗೆ ಅನುಮತಿ ನೀಡುವುದಿಲ್ಲ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. [ಫೇಸ್ ಬುಕ್, ಟ್ವಿಟ್ಟರ್ ಮೂಲಕ ಬಿಬಿಎಂಪಿಗೆ ದೂರು ನೀಡಿ]

bbmp

ಫ್ಲ್ಯಾಟ್ ಮಾಲೀಕರೇ ಸುಧಾರಣಾ ವೆಚ್ಚ ಪಾವತಿಸಿ : ಅನೇಕ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣಕಾರರು ಸುಧಾರಣಾ ವೆಚ್ಚ ಪಾವತಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಖಾತೆ ನೋಂದಣಿ ಹಾಗೂ ನಕ್ಷೆ ಮಂಜೂರಾತಿ ಪಡೆದು ಫ್ಲ್ಯಾಟ್ ನಿರ್ಮಿಸಿದ್ದರು. ಆದರೆ, ಅವುಗಳನ್ನು ಮಾರಾಟ ಮಾಡಿ ಹೋಗಿಬಿಟ್ಟಿದ್ದಾರೆ. ಆದ್ದರಿಂದ ಪ್ರಸ್ತುತ ಫ್ಲ್ಯಾಟ್‌ಗಳ ಮಾಲೀಕರೇ ಸುಧಾರಣಾ ವೆಚ್ಚ ಪಾವತಿಸಬೇಕು. ಇಲ್ಲದಿದ್ದರೆ ಮುಂದೆ ಅವುಗಳ ಖಾತಾ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. [ಬಿಬಿಎಂಪಿ ವಿಭಜನೆ ಅನಿವಾರ್ಯ]

ಎಷ್ಟು ಹಣ ತುಂಬಬೇಕು..? : ಹಳೆಯ ವಾರ್ಡ್‌ಗಳಲ್ಲಿ ಪ್ರತಿ ಚದರ ಮೀಟರ್‌ಗೆ (10.76 ಚದರ ಅಡಿ) 200 ರು. ಹಾಗೂ ಹೊಸ ವಾರ್ಡ್‌ಗಳಲ್ಲಿ ಪ್ರತಿ ಚದರ ಮೀಟರ್‌ಗೆ 250 ರೂ. ಸುಧಾರಣಾ ವೆಚ್ಚ ಪಾವತಿಸಬೇಕು ಎಂದು ಆಯುಕ್ತ ಎಂ. ಲಕ್ಷ್ಮೀನಾರಾಯಣ ಸೂಚಿಸಿದ್ದಾರೆ. [ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಎಂ ಗರಂ]

ಭೂ ಪರಿವರ್ತನೆ ಮಾಡಿ, ನಂತರ ನಿವೇಶನ ವಿಭಜಿಸಿ ನಿರ್ಮಿಸುವ ಕಟ್ಟಡಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿದ್ದರೂ ಅಧಿಕೃತ ಖಾತೆ ಬೇಕೆಂದು ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+