Bengaluru: ಶ್ರಾವಣದಲ್ಲೇ ಸೆಖೆ, ತಂಪನ್ನ ಅರಸಿ ಹೊರ ಬರುತ್ತಿರುವ ಹಾವುಗಳು, ಹೆಲ್ಪ್ ಲೈನ್ ನಂಬರ್

ಬೆಂಗಳೂರು, ಆಗಸ್ಟ್ 30: ಸಿಲಿಕಾನ್ ಸಿಟಿಯಲ್ಲಿ ವಾಡಿಕೆಯಂತೆ ಮಳೆ ಆಗಿಲ್ಲ, ಬದಲಾಗುತ್ತಿರುವ ವಾತಾವರಣಕ್ಕೆ ಮನುಷ್ಯರೇ ಒಗ್ಗಿ ಕೊಳ್ಳಲು ಸಾಧ್ಯ ಆಗುತ್ತಿಲ್ಲ. ಇದರಿಂದ ಬಿಸಿ ವಾತಾವರಣದಿಂದ ಮನುಷ್ಯರೇ ಪರದಾಟ ಅನುಭವಿಸುತ್ತಾ ಇರೋದು ಒಂದು ಕಡೆ ಆದರೆ, ಇನ್ನೊಂದು ಕಡೆ ಹಾವುಗಳು ಕೂಡ ತಂಪನ್ನ ಅರಸಿ ಬರುತ್ತಿವೆ.

ಆಗಾಗ ಈ ಶೂಗಳಲ್ಲಿ, ಗಾಡಿಗಳ ಅಡಿ, ಬಹುತೇಕ ಕಟ್ಟಡದಲ್ಲಿ ಹಾವು ಕಾಣಿಸಿಕೊಳುತ್ತಿದೆ ಅಂತ ಜನ ಕಿಡಿ ಕಾರುತ್ತಿದ್ದಾರೆ. ಇದಕ್ಕೆ ಬಿಬಿಎಂಪಿ ಕೂಡ ಹೊರತಾಗಿಲ್ಲ.. ಬಿಬಿಎಂಪಿ ಅಲ್ಲಿ ಅಂತೂ ಕಳೆದ ಹಲವು ತಿಂಗಳಿಂದ ಹಾವಿನ ಕಾಟದ ಬಗ್ಗೆ ಜನ ಕಿಡಿ ಕಾರುತ್ತಲೇ ಇದ್ದಾರೆ. ಬಿಬಿಎಂಪಿ ಕಚೇರಿಯಲ್ಲಿ ಸಾವಿರಾರು ಜನ ನಿತ್ಯ ಓಡಾಟ ಮಾಡುತ್ತಾ ಇರುತ್ತಾರೆ.

bbmp

ಜನರ ಓಡಾಟದ ಮಧ್ಯೆ ಹಾವು ಕಾಣಿಸಿ ಕೊಳುತ್ತಿದ್ದು ಜನ ಭಯ ಭೀತರಾಗಿದ್ದರೆ. ಇನ್ನೂ ನಿನ್ನೆಯಷ್ಟೇ ಬಿಬಿಎಂಪಿಯ ಮುಖ್ಯ ಕಚೇರಿಯ ಒಳಗಡೆ ಹಾವು ಕಾಣಿಸಿ ಕೊಂಡಿದ್ದು ಕೊನೆಗೆ ಉರಗ ತಜ್ಞರು ಸೇವ್ ಮಾಡಿದ ಪ್ರಸಂಗ ಕೂಡ ನಡೆದಿದೆ. ಬೆಂಗಳೂರು ನಗರದಲ್ಲಿ ಬಿಸಿಲ ಝಳ ಹೆಚ್ಚಿದೆ. ಬಿಸಿಲಿನ ಕಾವಿಗೆ ಹಾವುಗಳು ತಂಪು ಪ್ರದೇಶ ಹುಡುಕಿಕೊಂಡು ಬರುತ್ತಿವೆ.

ಕೆಲವು ಪ್ರದೇಶಗಳಲ್ಲಿ ಹಾವುಗಳು ಮನೆಯೊಳಗೆ ಸಹ ಬಂದ ಉದಾಹರಣೆಗಳು ವರದಿಯಾಗುತ್ತಿವೆ. ಮನೆ ಪ್ರವೇಶಿಸಿದ ಹಾವುಗಳನ್ನು ನೋಡಿ ಗಾಬರಿಯಾಗಬೇಡಿ. ಹಾವುಗಳನ್ನು ಹೊಡೆಯಬೇಡಿ, ಅವುಗಳನ್ನು ಕೊಲ್ಲಬೇಡಿ. ಸದ್ಯ ಕೆಲದಿನಗಳ ಹಿಂದಷ್ಟೇ ಮಳೆ ಬಂದು ಸ್ವಲ್ಪ ಜನ ಬಿಸಿಲಿನಿಂದ ಮುಕ್ತಿ ಸಿಕ್ಕಿತಲ್ಲ ಅಂತ ರಿಲ್ಯಾಕ್ಸ್ ಮಾಡುವ ಹೊತ್ತಲ್ಲಿಯೇ ಈಗ ಮತ್ತೆ ಸುಡುವ ಬಿಸಿಲು ಜನರ ನೆತ್ತಿ ಮೇಲೆ ಶಾಕ್ ಕೊಡೋ ತರ ಆಗಿ ಹೋಗಿದೆ.

ಈ ಹೊತ್ತಲ್ಲಿ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೂಡ ಸೆಕೆ ತಾಳಲಾರದೇ ಹೊರಗೆ ಬರುತ್ತಿದ್ದು ಗಾಡಿ ಚಕ್ರದ ಅಡಿಯಲ್ಲಿ, ಮನೆಯಲ್ಲಿ, ಹೂ ಕುಂಡದಲ್ಲಿ ಹೆಚ್ಚಾಗಿ ಹಾವು ಕಾಣಿಸಿ ಕೊಳ್ಳುತ್ತಿದೆ. ಬೆಂಗಳೂರಿನ ಬಹುತೇಕ ಕಡೆ ಹಾವುಗಳು ಕಾಣಿಸಿ ಕೊಳ್ಳುತ್ತಿದ್ದು ಜನ ಹಾವು ಕಂಡು ಭಯಗೊಂಡು ಹೊಡೆಯುತ್ತಿದ್ದಾರೆ.

ಕಬ್ಬನ್ ಪಾರ್ಕ್ ನಂತಹ ಉದ್ಯಾನವನದಲ್ಲಿ ಕೂಡ ಹಾವು ಕೊಲ್ಲಲು ಕೆಲವರು ಮುಂದಾಗಿದ್ದರು. ಹೀಗೆ ಹಾವು ಕೊಲ್ಲಬೇಡಿ ಅಂತ ಉರಗ ತಜ್ಞರು ಮನವಿ ಮಾಡಿ ಕೊಳ್ಳುತ್ತಾ ಇದ್ದಾರೆ. ನಿಮ್ಮ ಕಣ್ಣಿಗೆ ಎಲ್ಲೇ ಹಾವು ಕಂಡು ಬಂದರೂ ತಕ್ಷಣ ಪಾಲಿಕೆ ಸಹಾಯವಾಣಿ ಸಂಖ್ಯೆ ಕಾಲ್ ಮಾಡಿ ಮಾಹಿತಿ ನೀಡಬಹುದು.

ಬಿಬಿಎಂಪಿ ವನ್ಯಜೀವಿ ಸಹಾಯವಾಣಿ ಸಂಖ್ಯೆ 99027-94711 ಅಥವಾ 81052-70233 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನೂ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಜೋನ್ ಗಳಲ್ಲಿ ಕೂಡ ಉರಗ ತಜ್ಞರಿದ್ದು ಸಿಬ್ಬಂದಿಗಳಿಗೆ ಹಾವು ಕಾಣಿಸಿ ಕೊಂಡರೋ ವಿಚಾರದಲ್ಲಿ ಸಾಕಷ್ಟು ಕರೆಗಳು ಬರುತ್ತಿವೆ.

ಒಟ್ಟಿನಲ್ಲಿ ಹಾವು ಕಾಣಿಸಿ ಕೊಂಡರೆ ಅವುಗಳನ್ನು ಕೊಲ್ಲೋದು, ಹೊಡೆಯೋದು, ಹಿಂಸಿಸಿಸುವುದು ಮಾಡದೇ ಜೊತೆಗೆ ಜನ ತಮ್ಮನ್ನ ತಾವೇ ಉರಗ ತಜ್ಞರು ಅಂತ ಭಾವಿಸಿ ಅವುಗಳನ್ನು ಹಿಡಿಯೋಕೆ ಹೋಗಿ ಅವಾಂತರ ಮಾಡಿಕೊಂಡು ಆಸ್ಪತ್ರೆ ಸೇರೋದು ಮಾಡದೇ ತಕ್ಷಣ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉರಗ ತಜ್ಞರಿಗೆ ವಿಚಾರ ಮುಟ್ಟಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+