ಸಿಟಿಸೆಂಟರ್ ಹೋಟೆಲ್ ಗೆ ಬೀಗ ಹಾಕಿದ ಮೇಯರ್
ಬೆಂಗಳೂರು, ಅ.17 : ಆಸ್ತಿ ತೆರಿಗೆ ಪಾವತಿಸದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಂಚಿಸುತ್ತಿದ್ದ ಬೆಂಗಳೂರು ರೈಲು ನಿಲ್ದಾಣದ ಸಮೀಪದ ಸಿಟಿ ಸೆಂಟರ್ ಹೋಟೆಲ್ ಮುಚ್ಚುವಂತೆ ಮೇಯರ್ ಕಟ್ಟೆ ಸತ್ಯಾನಾರಾಯಣ ಆದೇಶ ಹೊರಡಿಸಿದ್ದಾರೆ.
ಗುರುವಾರ ಬಿಬಿಎಂಪಿ ಮೇಯರ್ ಮತ್ತು ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ನೇತೃತ್ವದ ಸಮಿತಿ ಸಿಟಿ ಸೆಂಟರ್ ಹೋಟೆಲ್ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ 2009ರಿಂದ ಆಸ್ತಿ ತೆರಿಗೆ ಪಾವತಿ ಮಾಡದ ಹೋಟೆಲ್ ಮಾಲೀಕರನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.

ನಟರಾಜ್ ಎಂಬುವವರು ಈ ಹೋಟೆಲ್ ಮಾಲೀಕರಾಗಿದ್ದ 2009ರಿಂದ ಇವರು ಬಿಬಿಎಂಪಿಗೆ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಹೋಟೆಲ್ ಒಟ್ಟು 3.4 ಕೋಟಿ ರೂ. ಆದಾಯ ತೆರಿಗೆಯನ್ನು ಬಿಬಿಎಂಪಿಗೆ ಕಟ್ಟಬೇಕಾಗಿದೆ.
ಈ ಮಾಹಿತಿ ಆಧರಿಸಿ ಮೇಯರ್ ನೇತೃತ್ವದಲ್ಲಿ ಗುರುವಾರ ಹೋಟೆಲ್ ಮೇಲೆ ದಾಳಿ ನಡೆಸಿ ಲೆಕ್ಕಪತ್ರಗಳನ್ನು ಪರಿಶೀಲನೆ ನಡೆಸಲಾಯಿತು. ಈ ಇದೇ ಸಂರ್ಭದಲ್ಲಿ ಹೋಟೆಲ್ ಮಾಲೀಕರನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.
ಹೋಟೆಲ್ ಜಪ್ತಿ ಮಾಡಿ ಆದಾಯ ತೆರಿಗೆಯನ್ನು ಸಂಗ್ರಹಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು. ಹೋಟೆಲ್ ಪರವಾನಗಿಯನ್ನು ರದ್ದುಗೊಳಿಸುವಂತೆ ಸೂಚಿಸಿ, ಹೋಟೆಲ್ ಮುಚ್ಚುವಂತೆ ಆದೇಶ ನೀಡಿದರು.
ಬಹುದೊಡ್ಡ ಹೋಟೆಲ್ : ಸಿಟಿ ಸೆಂಟರ್ ಹೋಟೆಲ್ ನಗರದ ಬೆಂಗಳೂರಿನ ಹೃದಯ ಭಾಗವೆಂದೇ ಹೇಳಲಾಗುವ ಮೆಜೆಸ್ಟಿಕ್ ನಲ್ಲಿದೆ. ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಹೋಟೆಲ್ ಗೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಇಂತಹ ಹೋಟೆಲ್ ಆಸ್ತಿ ತೆರಿಗೆ ಪಾವತಿ ಮಾಡದೆ, ಬಿಬಿಎಂಪಿಗೆ ವಂಚಿಸುತ್ತಿತ್ತು. ಆದ್ದರಿಂದ ಗುರುವಾರ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ.












Click it and Unblock the Notifications