Ejipura Flyover: ರಾಮಲಿಂಗಾ ರೆಡ್ಡಿ ನಿರ್ದೇಶನ ಮೇರೆಗೆ ಬಿಬಿಎಂಪಿ ಮಹತ್ವದ ಆದೇಶ
ಬೆಂಗಳೂರು, ಮಾರ್ಚ್ 14: ಬೆಂಗಳೂರಿನ ಸರ್ಜಾಪುರ ರಸ್ತೆಗೆ ಅಡ್ಡಲಾಗಿ ಹಾದು ಹೋಗುವ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಇದೀಗ ವೇಗ ನೀಡಲಾಗುತ್ತಿದೆ. ಭೂಮಿ ನೀಡಲು ಆಸ್ತಿ ಮಾಲೀಕರು ಒಪ್ಪಿದ್ದಾರೆ. ಇದರ ಬೆನ್ನಲ್ಲೆ ಯೋಜನೆ ತ್ವರಿತ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವರ ನಿರ್ದೇಶನ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಭಿಯಂತರ ನೇಮಿಸಿ ಆದೇಶಿಸಿದೆ.
ಈಗಾಗಲೇ ಆಮೆ ಗತಿಯಲ್ಲಿ ಸಾಗಿ ಬಂದ ಕೋರಮಂಗಲದ ಈಜಿಪುರ ಮೇಲ್ಸೇತುವೆ ಕಾಮಗಾರಿ ಕೆಲಸ ಇನ್ನೂ ತಡವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಸಚಿವರು ಪರಿಶೀಲಿಸಿದ್ದರು. ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿದ್ದರು. ಆಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಲು ಪ್ರತ್ಯೇಕ ಅಭಿಯಂತರರ ತಂಡ ರಚಿಸಲು ಸೂಚಿಸಿದ್ದರು.

ಸಚಿವರ ಸೂಚನೆ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಭಿಯಂತರರ ತಂಡ ರಚನೆ ಕುರಿತು ಆದೇಶಿಸಿದ್ದಾರೆ. ಬಿಬಿಎಂಪಿ ಯ ಮುಖ್ಯ ಆಯುಕ್ತರು, ಇನ್ನು ಮುಂದೆ ಕೇಂದ್ರ ಕಛೇರಿಯ ಗುಣನಿಯಂತ್ರಣ / ಗುಣಭರವಸೆ ವಿಭಾಗದಿಂದ "ಈಜಿಪುರ ಮೇಲೇತುವೆ ಯೋಜನೆ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋರಮಂಗಲದ "ಈಜಿಪುರ ಮೇಲ್ವೇತುವ ಯೋಜನೆ' ಕಾಮಗಾರಿ ಪ್ರಸ್ತುತ ಯೋಜನೆ-ಕೇಂದ್ರ ವಿಭಾಗದಿಂದ ನಿರ್ವಹಿಸಲಾಗುತ್ತಿರುತ್ತದೆ. ಈಜಿಪುರ ಮೇಲ್ಸೇತುವೆ ಕಾಮಗಾರಿ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಲು ಸರ್ಕಾರ ಸಜ್ಜಾಗಿದೆ. ಅದಕ್ಕಾಗಿ ತಂಡ ರಚಿಸಲಾಗಿದೆ.

'ಈಜಿಪುರ ಮೇಲೇತುವೆ ಯೋಜನೆ" ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಈ ಅಭಿಯಂತರರ ತಂಡದಲ್ಲಿ ಡಾ. ರಾಘವೇಂದ್ರ ಪ್ರಸಾದ್ ಬಿ. ಜಿ ಮುಖ್ಯ ಅಭಿಯಂತರರು (ಗುಣನಿಯಂತ್ರಣ / ಗುಣಭರವಸೆ) ರವರ ಅಧೀನದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆಗೆ ನೇಮಕವಾಗಿದ್ದಾರೆ. ಇವರೊಂದಿಗೆ ಎನ್. ಚಂದ್ರಶೇಖರ್ ಕಾರ್ಯಪಾಲಕ ಅಭಿಯಂತರರು- ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ್ರ/1), ಸಂದೇಶ್ ಶೆಟ್ಟಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು- ಮುಖ್ಯ ಅಭಿಯಂತರರು (ಟಿ.ವಿ.ಸಿ.ಸಿ) ಕಛೇರಿ, ರಂಜಿತ್ ಜೆ. ಎಲ್ ಸಹಾಯಕ ಅಭಿಯಂತರರು- ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ/9) ಇವರುಗಳು ಮುಖ್ಯ ಅಭಿಯಂತರರು (ಗುಣನಿಯಂತ್ರಣ / ಗುಣಭರವಸೆ) ಅವರಿಗೆ ಸಹಕಾರ ನೀಡಲಿದ್ದಾರೆ. ಮೇಲ್ವೇತುವೆ ಯೋಜನೆ ಕಾಮಗಾರಿ ಪೂರ್ಣಕ್ಕೆ ಶ್ರಮಿಸಲಿದ್ದಾರೆ.
ಭೂ ಸ್ವಾಧೀನ ಸಮಸ್ಯೆಗೆ ಮುಕ್ತಿ, ವರ್ಷಾಂತ್ಯಕ್ಕೆ ಯೋಜನೆ ಪೂರ್ಣ
ಗುತ್ತಿಗೆದಾರರ ಕಂಪನಿ ಬದಲಾವಣೆ, ಭೂಮಿ ಸ್ವಾಧೀನ ಸಮಸ್ಯೆಯಿಂದ ಈಜಿಪುರ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಇದರಿಂದ ಈ ಭಾಗದ ಸವಾನ ಸವಾರರಿಗೆ ತೊಂದರೆ ಉಂಟಾಗಿತ್ತು. ಟ್ರಾಫಿಕ್ ಸಿಗ್ನ್‌ನಲ್ಲಿ ಹೆಚ್ಚು ಸಮಯ ನಿಲ್ಲುವಂತಾಗಿದೆ. ಸದ್ಯ ಸರ್ಕಾರದ ಮಹತ್ವದ ಹೆಜ್ಜೆಯಿಂದಾಗಿ 30 ಹೆಚ್ಚು ಆಸ್ತಿ ಮಾಲೀಕರು ಭೂಮಿ ನೀಡಲು ಒಪ್ಪಿದ್ದಾರೆ. ಹೀಗಾಗಿ ಕಾಮಗಾರಿ ಪುನಾರಂಭಗೊಂಡು, ಇದೇ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications