ಪ್ರವಾಹ ಪೀಡಿತ ಕರಾವಳಿ ಜನರಿಗೆ ಉದಾರ ಸಹಾಯ ನೀಡಿದ ಬಿಬಿಎಂಪಿ
ಬೆಂಮಗಳೂರು, ಆಗಸ್ಟ್ 18: ಕೊಡಗು ಸೇರಿ ಕರವಾಳಿ ಜಿಲ್ಲೆಗಳ ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿರುವ ಬಿಬಿಎಂಪಿ ಉದಾರ ನೆರವಿಗೆ ಮುಂದಾಗಿದೆ.
ಬಿಬಿಎಂಪಿಯ ಮಹಾಪೌರರು ಹಾಗೂ ಆಯುಕ್ತರು, ಪಾಲಿಕೆ ಸದಸ್ಯರು ತಮ್ಮ ಒಂದು ತಿಂಗಳ ವೇತನದ ಮೊತ್ತವನ್ನು ಕರಾವಳಿ ಜಿಲ್ಲೆಗಳ ಪ್ರವಾಹ ಸಂತ್ರಸ್ತರ ನೆರವಿಗೆ ನೀಡಿದ್ದಾರೆ.
ಅಷ್ಟೆ ಅಲ್ಲದೆ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಒಂದು ದಿನದ ಸಂಬಳವನ್ನೂ ಪ್ರವಾಹ ಸಂತ್ರಸ್ತರ ನೆರವಿಗೆ ನೀಡಲಾಗುತ್ತಿದೆ.

ಸದಸ್ಯರ ತಿಂಗಳ ಸಂಬಳ ಹಾಗೂ ನೌಕರರ ಒಂದು ದಿನದ ಸಂಬಳದ ಒಟ್ಟು ಅಂದಾಜು ಮೊತ್ತ ರೂ.1ಕೋಟಿ 25 ಲಕ್ಷ ಆಗಲಿದ್ದು ಇದನ್ನು ತುರ್ತು ಕಾರ್ಯದ ನೆರವಾಗಿ ನೀಡಲಾಗುವುದೆಂದು ಬಿಬಿಎಂಪಿ ತಿಳಿಸಿದೆ.
ಪ್ರವಾಹ ಸಂತ್ರಸ್ತರ ನೆರವಿಗೆಂದು ಈಗಾಗಲೇ ಕುಮಾರಸ್ವಾಮಿ ಅವರು 200 ಕೋಟಿ ಘೋಷಣೆ ಮಾಡಿದ್ದಾರೆ, ಅಲ್ಲದೆ ಹಲವು ಕಡೆಗಳಿಂದ ನೆರವು ಸಹ ಬರುತ್ತಿದೆ. ಡಿಕೆ.ಶಿವಕುಮಾರ್ ಅವರು ಉದ್ಯಮಿಗಳಿಗೆ ನೆರವಿಗಾಗಿ ಕೇಳಿದ್ದಾರೆ.












Click it and Unblock the Notifications