ಅಧಿಕಾರ ನಡೆಸ್ತಿರೋದು ನೀವಾ ಅಥವಾ ಆಯುಕ್ತರಾ?: ಮೇಯರ್‌ಗೆ ಪ್ರಶ್ನೆ
ಬೆಂಗಳೂರು, ಜನವರಿ 9: ಅಧಿಕಾರ ನಡೆಸುತ್ತಿರುವುದು ನೀವಾ ಅಥವಾ ಆಯುಕ್ತರಾ ಎಂದು ಬಿಬಿಎಂಪಿ ಮೇಯರ್‌ಗೆ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಸುಪ್ರೀಂ ಆಗಿರುತ್ತಾರೆ ಆದರೆ ಕಮಿಷನರ್ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ.
ಮೇಯರ್ ಗೌತಮ್ ಕುಮಾರ್ ಅಧಿಕಾರ ವಹಿಸಿಕೊಂಡು ನೂರುದಿನಗಳು ಕಳೆದಿವೆ. ಆದರೆ ಸಾಧನೆ ಮಾತ್ರ ಶೂನ್ಯ ಎಂದರು.ಕಸ ಮುಕ್ತ ಹೋರ್ಡಿಂಗ್ಸ್ ಮುಕ್ತ ಬೆಂಗಳೂರು ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಕೆರೆ ಅಭಿವೃದ್ಧಿ, ಪ್ಲಾಸ್ಟಿಕ್ ಮುಕ್ತ,ಜಾಹೀರಾತು ಮುಕ್ತ ಬೆಂಗಳೂರು ಮಾಡುವುದಾಗಿ ಘೋಷಿಸಿದ್ದರು. ಆದರೆ ಯಾವುದೇ ಕೆಲಸವಾಗಿಲ್ಲ ಎಂದು ಆರೋಪಿಸಿದರು.

ನೂರು ದಿನಗಳಲ್ಲಿ ಕೇವಲ 3 ಕೌನ್ಸಿಲ್ ಸಭೆಗಳು ನಡೆದಿವೆ. ಇಲ್ಲಿಯವರೆಗೆ ನಾಲ್ಕು ಸ್ಥಳ ಪರಿಶೀಲನೆ, ಐದು ಕಚೇರಿ ಸಭೆ ಮಾತ್ರ ಮಾಡಿದ್ದಾರೆ.
ಪಾಲಿಕೆಯಲ್ಲಿ ಪ್ರತಿ ತಿಂಗಳು ನೂರಾರು ಟ್ರಾನ್ಸ್‌ಫರ್ ಮಾಡೋ ಮೂಲಕ ದಂಧೆ ಮಾಡುತ್ತಿದ್ದಾರೆ. ಜಾಹೀರಾತು ಮಾಫಿಯಾ ಮಾಡಲು ಮುಂದಾಗಿದ್ದು, ಕೋರ್ಟ್ ತೀರ್ಪನ್ನೇ ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications