ಮಳೆಗೆ ಕೊಚ್ಚಿ ಹೋದ ವೃಷಭಾವತಿ ನದಿ ತಡೆಗೋಡೆ: ಮೇಯರ್, ಆಯುಕ್ತ ಭೇಟಿ
ಬೆಂಗಳೂರು, ಜೂನ್ 26: ಗುರುವಾರ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಂಗೇರಿಯ ಬಳಿಯ ವೃಷಭಾವತಿ ನದಿ ಕಾಲುವೆಯ ತಡೆಗೋಡೆ ಕೊಚ್ಚಿ ಹೋಗಿದೆ. ಗೋಡೆ ಕುಸಿದ ಕಾರಣ ನದಿ ನೀರು ರಸ್ತೆಗೆ ನುಗ್ಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
Recommended Video
ಈ ಹಿನ್ನೆಲೆ ಶುಕ್ರವಾರ ಬೆಳಿಗ್ಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮತ್ತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ, ''ಶೀಘ್ರವಾಗಿ ರಸ್ತೆ ಕೊರೆಯದಂತೆ ನೀರಿನ ಡೈವರ್ಷನ್ ಮಾಡಿ ನೂತನವಾಗಿ ತಡೆಗೋಡೆ ನಿರ್ಮಿಸಲು ಕ್ರಮ ವಹಿಸಲಾಗಿದೆದ್ದು, ಕೂಡಲೇ ಕಾಮಗರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಮೇಯರ್ ತಿಳಿಸಿದ್ದಾರೆ.
ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕೆಂಗೇರಿ ಬಳಿಯ ವೃಷಭಾವತಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಡೆಗೋಡೆ ಕುಸಿದಿದ್ದು, ಇಂದು ಆಯುಕ್ತರು @BBMPCOMM ರವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ಕೂಡಲೇ ಕಾಮಗರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.#BengaluruRains pic.twitter.com/HuiLg0DHCr
— M Goutham Kumar (@BBMP_MAYOR) June 26, 2020
ಈ ವೇಳೆ ಸ್ಥಳೀಯ ಬಿಬಿಎಂಪಿ ಸದಸ್ಯ ವಿ.ವಿ.ಸತ್ಯನಾರಾಯಣ ಸಹ ಮೇಯರ್ ಜೊತೆ ಉಪಸ್ಥಿತರಿದ್ದರು.

ಗುರುವಾರ ಮಧ್ಯಾಹ್ನದಿಂದ ಸುರಿದ ಮಳೆಯಿಂದ ಸಂಜೆ ವೇಳೆ 5.30 ವೇಳೆ ವೃಷಭಾವತಿ ನದಿ ಕಾಲುವೆಯ ಗೋಡೆ ಕುಸಿದಿದೆ. ಸುಮಾರು 300 ಮೀಟರ್ ಉದ್ದ ಕುಸಿದಿದ್ದು, ರಸ್ತೆ ಮೇಲೆ ನೀರು ಹರಿಯಲಾರಂಭಿಸಿದೆ. ರಾತ್ರಿ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.












Click it and Unblock the Notifications