ವಿಡಿಯೋ : ಕನ್ನಡ ಹಾಡಿಗೆ ಹೆಜ್ಜೆಹಾಕಿದ ಮೇಯರ್, ಆಯುಕ್ತರು
Recommended Video
ಬೆಂಗಳೂರು, ಜನವರಿ 25 : ಅಲ್ಲಿ ಉತ್ಸಾಹಕ್ಕೆ ಯಾವುದೇ ಕೊರತೆ ಇರಲಿಲ್ಲ. ಕನ್ನಡದ ಜನಪ್ರಿಯ ಚಿತ್ರಗೀತೆ ಕೇಳಿ ಬರುತ್ತಿತ್ತು. ಕಾಲುಗಳು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದವು. ಇಂತಹ ಅಪರೂಪದ ಕ್ಷಣಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ಸಾಕ್ಷಿ ಆಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಪಾಲಿಕೆಯ ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್ ಆಗಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಜೋಗುಪಾಳ್ಯ ವಾರ್ಡ್ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾಗಿದ್ದಾಗ ಕನ್ನಡಿಗರು ಮೇಯರ್ ಆಗಿಲ್ಲ ಎಂದು ಚರ್ಚೆ ನಡೆದಿತ್ತು. ಅಂದು ಚರ್ಚೆ ಹುಟ್ಟು ಹಾಕಿದವರು ಇಂದು ಮೇಯರ್ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.
ಮೇಯರ್ ಮತ್ತು ಆಯುಕ್ತರು ಕನ್ನಡ ಹಾಡಿಗೆ ಹೆಜ್ಜೆ ಹಾಕುವ ವಿಡಿಯೋವನ್ನು ಆಯುಕ್ತರು ತಮ್ಮ ಫೇಸ್ ಬುಕ್, ಟ್ವಿಟರ್ ಖಾತೆಗಳಲ್ಲಿ ಹಾಕಿದ್ದಾರೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, 260 ಕ್ಕೂ ಅಧಿಕ ಜನರು ವಿಡಿಯೋ ವೀಕ್ಷಣೆ ಮಾಡಿದ್ದಾರೆ.

ಕಬ್ಬನ್ ಪಾರ್ಕ್‌ನಲ್ಲಿ ಕಾರ್ಯಕ್ರಮ
ಶನಿವಾರ ಕಬ್ಬನ್ ಪಾರ್ಕ್‌ನಲ್ಲಿ ಸ್ವಚ್ಚ ಸರ್ವೇಕ್ಷಣೆ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಆಯುಕ್ತರು ಕನ್ನಡ ಹಾಡಿಗೆ ಹೆಜ್ಜೆ ಹಾಕಿದರು.

ಆಕಸ್ಮಿಕ ಚಿತ್ರದ ಹಾಡು
ಮೇಯರ್ ಮತ್ತು ಆಯುಕ್ತರು 'ಆಕಸ್ಮಿಕ' ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದರು. ಈ ಗೀತೆಯನ್ನು ಬರೆದವರು ಮತ್ತು ಸಂಗೀತ ನೀಡಿದವರು ಹಂಸಲೇಖ. ವರನಟ ಡಾ. ರಾಜ್ ಕುಮಾರ್ ಈ ಹಾಡನ್ನು ಹಾಡಿದ್ದರು.

ಕನ್ನಡಿಗ ಮೇಯರ್ ಬೇಕು
ಬಿಬಿಎಂಪಿ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆಯಾದಾಗ ಕನ್ನಡಿಗ ಮೇಯರ್ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಬೆಂಗಳೂರು ನಗರದ ಆಡಳಿತವನ್ನು ಮಾರ್ವಾಡಿಗಳ ಕೈಗೆ ನೀಡಲಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
|
ಡ್ಯಾನ್ಸ್ ಮಾಡಿರುವ ವಿಡಿಯೋ
ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಪಾಲಿಕೆಯ ಆಯುಕ್ತರಾದ ಬಿ. ಎಚ್. ಅನಿಲ್ ಕುಮಾರ್ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ











Click it and Unblock the Notifications