Get Updates
Get notified of breaking news, exclusive insights, and must-see stories!

Rajakaluve Encroachment: ಬಿಬಿಎಂಪಿ ಖಡಕ್ ಸೂಚನೆ ಮೇರೆಗೆ ಮತ್ತೆ ಘರ್ಜಿಸಲಿವೆ ಜೆಸಿಬಿಗಳು

ಬೆಂಗಳೂರು, ಜೂನ್ 15: ಪ್ರತಿ ಬಾರಿಯು ಮಳೆಗಾಲ ಆರಂಭವಾದ ಬಳಿಕ ಮತ್ತು ಅವಘಡಗಳ ನಂತರವೇ ಎಚ್ಚೆತ್ತುಕೊಳ್ಳುವ ಬಿಬಿಎಂಪಿ ಈ ಸಲವು ಅದನ್ನೆ ಮುಂದುವರಿಸಿದೆ. ಕಳೆದ ವರ್ಷ ಪ್ರವಾಹ ಸ್ಥಿತಿ ಬಳಿಕ ಪರಿಶೀಲಿಸಿ ಒತ್ತುವರಿ ತೆರವು ಕಾರ್ಯ ನಡೆಸಿದ್ದ ಬಿಬಿಎಂಪಿ ನಂತರ ಸ್ಥಗಿತಗೊಳಿಸಿತ್ತು. ಇದೀಗ ಮತ್ತು ವಿವಿಧೆಡೆ ಅತಿಕ್ರಮಣ ತೆರವಿಗೆ ಮುಂದಾಗಿದೆ.

ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಮಾರ್ಕ್ ಮಾಡಲಾಗಿದೆ. ತಹಶೀಲ್ದಾರ್ ಅವರಿಂದ ಆದೇಶದನ್ವಯ ಮಾಡಿರುವಂತಹ ಒತ್ತುವರಿಗಳನ್ನು ತ್ವರಿತಗತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

BBMP Instructed To Demolition Of Encroachment Who Rajakaluve And Water Canal

ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ (ಬಿಬಿಎಂಪಿ) ಗುರುವಾರ ರಾಜಕಾಲುವೆ ಒತ್ತುವರಿ ತೆರವು ಕುರಿತು ಸಭೆ ನಡೆಸಿತು.

ಈ ವೇಳೆ ಕೆಲವು ವಿಷಯಗಳನ್ನು ಚರ್ಚಿಸಿದ ನಂತರ ಮಾತನಾಡಿದ ತುಷಾರ್ ಗಿರಿನಾಥ್ ಅವರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರಿಗೆ ಬಾಕಿ ಆರ್ಡರ್ ಪಾಸ್ ಮಾಡಬೇಕಿರುವಂತಹ ಸರ್ವೇಗಳಿಗೆ ತಹಶೀಲ್ದಾರ್ ಗಳು ಆರ್ಡರ್ ಪಾಸ್ ಮಾಡಬೇಕು. ತದನಂತರ ಹಂತ-ಹಂತವಾಗಿ ಎಲ್ಲಾ ಒತ್ತುವರಿಗಳ ತೆರವು ಮಾಡಬೇಕು. ಯಾರಾದರು ತಡೆಯೊಡ್ಡಿದರೆ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿಗಳ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಕ್ಷೆ ಅನ್ವಯ ಆದೇಶ: ಬಾಕಿ ಒತ್ತುವರಿ ತೆರವುಗೊಳಿಸಿ

ಭೂ ಮಾಪನ ಕಾರ್ಯ ಮಾಡಿರುವ ಕಡೆ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೆ ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಿ ತಹಶೀಲ್ದಾರ್ ಅವರು ಆದೇಶಗಳನ್ನು ಜಾರಿ ಮಾಡಬೇಕು. ತದನಂತರ ಒತ್ತುವರಿ ತೆರವುಗೊಳಿಸಿ ಕಾಲುವೆ ನಿರ್ಮಾಣ ಮಾಡಬೇಕು ಎಂದರು.

BBMP Instructed To Demolition Of Encroachment Who Rajakaluve And Water Canal

ಬಿಬಿಎಂಪಿ ವ್ಯಾಪ್ತಿಯಲ್ಲಿ 08 ವಲಯಗಳಲ್ಲಿ ಬಾಕಿ ಇರುವ ಒತ್ತುವರಿಗಳನ್ನು ತೆರವುಗೊಳಿಸಬೇಕು. ಮಳೆ ನೀರುಗಾಲುವೆಗಳನ್ನು ನಿರ್ಮಾಣ ಮಾಡಿ ಎಲ್ಲಿಯೂ ಸಹ ಮಳೆಗಾದಲ್ಲಿ ನೀರು ನಿಂತು ಜಲಾವೃತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗಧಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ಮಹದೇವಪುರ: ಕೆಲವೆಡೆ ಈಗಾಗಲೇ ತೆರವು

ಕಳೆದ ವರ್ಷ ಮಹದೇವಪುರ, ಬೊಮ್ಮನಹಳ್ಳಿ ಸೇರಿದಂತೆ ವಿವಿಧ ನೆರೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಬಳಿಕ ಎಚ್ಚೆತ್ತ ಬಿಬಿಎಂಪಿ ಮಹಾದೇವಪುರ, ಯಲಹಂಕದಲ್ಲಿ ನೀರುಗಾಲುವೆ, ರಾಜಕಾಲುವೆ ಒತ್ತುವರಿ ಪ್ರದೇಶಗಳನ್ನು ಗುರುತಿಸಿತ್ತು. ಕೆಲವು ದಿನಗಳ ಕಾಲ ನಿರಂತರ ಬಿಬಿಎಂಪಿ ಉದ್ದೇಶಿತ ಸ್ಥಳದಲ್ಲಿ ಬುಲ್ಡೋಜರ್‌ಗಳು ತೆರವು ಕಾರ್ಯದಲ್ಲಿ ತೊಡಗಿದ್ದವು. ರಾಜಕಾಲುವೆ ಮೇಲೆ ಕಟ್ಟಿದ್ದ ಮನೆ ಕಾಂಪೌಂಡ್, ಮಳಿಗೆ, ಶೆಡ್‌ಗಳೆಲ್ಲವು ನೆಲಸಮಗೊಂಡಿದ್ದವು. ಅದೇ ರೀತಿ ಈ ಭಾರಿ ಮಾರ್ಕ್‌ ಮಾಡಿದ ಒತ್ತುವರಿ ಜಾಗ ಕೆಲವೇ ದಿನಗಳಲ್ಲಿ ತೆರವಾಗಲಿವೆ.

ಸಭೆಯಲ್ಲಿ ವಲಯ ಆಯುಕ್ತರಾದ ಜಯರಾಮ್ ರಾಯಪುರ, ಡಾ. ತ್ರಿಲೋಕ್ ಚಂದ್ರ, ವೀಂದ್ರ, ಡಾ. ಹರೀಶ್ ಕುಮಾರ್ , ಡಾ. ದೀಪಕ್, ಪ್ರೀತಿ ಗೆಹ್ಲೋಟ್, ಎಲ್ಲಾ ವಲಯ ಜಂಟಿ ಆಯುಕ್ತರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ರಾಜಕಾಲುವೆ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್ ಗಳು ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+