ಕಸದ ಲಾರಿಗೆ ಮೂರು ಜೀವಗಳು ಬಲಿ: ಈಗ ಫಿಟ್‌ನೆಸ್ ಟೆಸ್ಟ್ ಬಗ್ಗೆ ಎಚ್ಚೆತ್ತ ಬಿಬಿಎಂಪಿ
ಬೆಂಗಳೂರು , ಏಪ್ರಿಲ್ 19: ಬಿಬಿಎಂಬಿ ಕಸದ ಲಾರಿಗಳಿಂದ ಇತ್ತೀಚೆಗೆ ಅವಘಡಗಳು ಹೆಚ್ಚಾಗುತ್ತಿವೆ. ಬಿಬಿಎಂಪಿಯಲ್ಲಿ ಬಳಕೆಯಾಗುತ್ತಿರುವ ಕಸದ ಲಾರಿಗಳ ಫಿಟ್ನೆಸ್ ಸರ್ಟಿಫಿಕೇಟು ಅಗತ್ಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಬಿಬಿಎಂಪಿ ಬಳಸುವ ಕಸದ ಲಾರಿಗಳು ಇತ್ತೀಚೆಗೆ ಹೆಚ್ಚು ಅಪಘಾತಗಳನ್ನು ಮಾಡುತ್ತಿವೆ. ಇದರಿಂದ ಎಚ್ಚೆತ್ತಿರೋ ಬಿಬಿಎಂಪಿ ಆಯುಕ್ತರು ಕಸದ ಲಾರಿಗಳ ಫಿಟ್‌ನೆಸ್ ಪ್ರಮಾಣಪತ್ರ, ಇನ್ಸುರೆನ್ಸ್‌ಗಳನ್ನು ಗಳನ್ನು ಪರಿಶೀಲಿಸಲು ಆದೇಶಿಸಿದ್ದಾರೆ.
ಇನ್ನು ಫ್ಲೈ ಓವರ್‌ಗಳ ಮೇಲೆ ಮತ್ತು ಕೆಲವು ರಸ್ತೆಗಳಲ್ಲಿ ಬಿಬಿಎಂಪಿ ಕಸದ ಲಾರಿಗಳು ವೇಗವಾಗಿ ಸಂಚಾರವನ್ನು ಮಾಡುತ್ತಿದ್ದು ಲಾರಿಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಮಾತನಾಡಲು ಆಯುಕ್ತರು ಮುಂದಾಗಿದ್ದಾರೆ.

ತ್ಯಾಜ್ಯ ವಿಲೇವಾರಿ ವಾಹನಗಳ ನಿರ್ವಹಣೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ ಏನು..?
- ಎಲ್ಲಾ ಕಾಂಟ್ಯಾಕ್ಟರ್/ ಟಿಪ್ಪರ್ ಲಾರಿಗಳು ಸಂಚಾರಕ್ಕೆ ಯೋಗ್ಯವಾಗಿರುವ ಬಗ್ಗೆ ದೃಢೀಕರಿಸಬೇಕು.
- ಸಂಬಂಧಿಸಿದ ಸಾರಿಗೆ ಪ್ರಾಧಿಕಾರದಿಂದ ಸದೃಢ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು.
- ಪ್ರತಿ ವಾಹನಗಳಿಗೆ ಸ್ಪೀಡ್ ಕಂಟ್ರೋಲ್ ಅಳವಡಿಸಿರಬೇಕು.
- ಸ್ಪೀಡ್ ಕಂಟ್ರೋಲ್ ಅಳವಡಿಸಿರೊ ಬಗ್ಗೆ ಸಾರಿಗೆ ಪ್ರಾಧಿಕಾರದಿಂದ ದೃಢೀಕರಣ ಮಾಡಿರಬೇಕು.
- ಪಾಲಿಕೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಒದಗಿಸಿರುವ ವಾಹನಗಳ ಬಗ್ಗೆ ಕಾರ್ಯಪಾಲಕ ಅಭಿಯಂತರರು (ಸಾರಿಗೆ) & ಗುತ್ತಿಗೆದಾರರು ಕ್ರಮವಹಿಸಬೇಕು.

- ವಲಯವಾರು ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಕಾಲಕಾಲಕ್ಕೆ ಈ ಎಲ್ಲಾ ಪ್ರಮಾಣಪತ್ರ ಪರಿಶೀಲಿಸುತ್ತಿರಬೇಕು.
- ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸ್ತಿರುವ ಎಲ್ಲಾ ಕಾಂಪ್ಯಾಕ್ಟರ್ / ಟಿಪ್ಪರ್ ಗಳ ರ್ಯಾಂಡಮ್ ಪರಿಶೀಲನೆ ಮಾಡಿ ಯೋಗ್ಯ ಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಬೇಕು.
- ಚಾಲಕರು ಶಿಸ್ತಿನಿಂದ ವಾಹನ ಚಾಲನೆ ಮಾಡಬೇಕು.
- ಚಾಲಕರ ವಾಹನ ಚಾಲನಾ ಸಾಮರ್ಥ್ಯವನ್ನ ನಿಗದಿತ ಮಾನದಂಡಗಳಿಂದ ಪರಿಶೀಲಿಸಬೇಕು.
ಬಿಬಿಎಂಪಿ ಆಯುಕ್ತರು ಹೇಳಿದದ್ದೇನು..?
ಕಸದ ಲಾರಿಗಳ ರಸ್ತೆ ಅಪಘಾತ ವಿಚಾರದಲ್ಲಿ ಮಾತನಾಡಿದ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತಾ, ''ಅಪಘಾತಗಳು ಆಕಸ್ಮಿಕವಾಗಿ ನಡೆಯುತ್ತಿವೆ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಘನತ್ಯಾಜ್ಯ ವಾಹನಗಳ ದಾಖಲೆ ಪರಿಶೀಲನೆ ಮಾಡುತ್ತೇವೆ,'' ಎಂದು ತಿಳಿಸಿದ್ದಾರೆ.
ಬಿಬಿಎಂಪಿಯಿಂದ ಸಂಚರಿಸು ಘನ ತ್ಯಾಜ್ಯ ವಿಲೇವಾರಿ ವಾಹನ ಮತ್ತು ನಗರದಾದ್ಯಂತ ತ್ಯಾಜ್ಯ ಸಂಗ್ರಹಿಸುವ ವಾಹನಗಳು ಬಹುತೇಕ ಹೊರಗುತ್ತಿಗೆಯ ಆಧಾರದಲ್ಲಿ ಬಿಬಿಎಂಪಿ ಪಡೆದಿದೆ. ಹೀಗಾಗಿ ಬಿಬಿಎಂಪಿಯಿಂದ ಕಸ ಸಂಗ್ರಹ ವಾಹನಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕಿದೆ.












Click it and Unblock the Notifications