ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಮೇ 06 : ಸಾರ್ವಜನಿಕ ಸ್ಥಳದಲ್ಲಿ ಸಂಚಾರ ನಡೆಸುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಹಾಕದಿದ್ದವರಿಗೆ ವಿಧಿಸುತ್ತಿದ್ದ 1000 ರೂ. ದಂಡವನ್ನು ಬಿಬಿಎಂಪಿ 200ಕ್ಕೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಮಾಸ್ಕ್ ಹಾಕದಿದ್ದವರಿಗೆ ದಂಡ ವಿಧಿಸುವ ಕುರಿತು ಏಪ್ರಿಲ್ 30ರಂದು ಹೊರಡಿಸಿದ್ದ ಆದೇಶವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಾಸ್ಕ್ ಇಲ್ಲದೇ ಓಡಾಟ; 98 ಸಾವಿರ ದಂಡ ಕಟ್ಟಿದ ಬೆಂಗಳೂರಿಗರು!ಮಾಸ್ಕ್ ಇಲ್ಲದೇ ಓಡಾಟ; 98 ಸಾವಿರ ದಂಡ ಕಟ್ಟಿದ ಬೆಂಗಳೂರಿಗರು!

ಏಪ್ರಿಲ್ 30ರ ಆದೇಶದ ಪ್ರಕಾರ ಮಾಸ್ಕ್ ಹಾಕದಿದ್ದರೆ ಮೊದಲ ಬಾರಿ 1000 ರೂ., ಎರಡನೇ ಬಾರಿ 2000 ರೂ. ದಂಡ ಹಾಕಲಾಗುತ್ತಿತ್ತು. ಹಿರಿಯ ಆರೋಗ್ಯ ಪರಿವೀಕ್ಷಕರು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳಿಗೆ ಸ್ಥಳದಲ್ಲಿಯೇ ದಂಡ ಹಾಕುವ ಅವಕಾಶ ನೀಡಲಾಗಿತ್ತು.

ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

Penalty For Not Wearing Mask BBMP Revised Order

ಈಗ ಆದೇಶವನ್ನು ಪರಿಷ್ಕರಣೆ ಮಾಡಲಾಗಿದೆ. ಮಾಸ್ಕ್ ಹಾಕದಿದ್ದರೆ ಮೊದಲ ಬಾರಿ 200, ಎರಡನೇ ಬಾರಿಯೂ 200 ರೂ. ದಂಡ ಹಾಕಲಾಗುತ್ತದೆ. ಕರ್ನಾಟಕ ಸರ್ಕಾರ ಮೇ 2ರಂದು ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆ ಅನ್ವಯ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಹಾಕುವುದು, ಪರಸ್ಪರ 1 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಜನರು ಮನೆಯಲ್ಲಿ ತಯಾರಿಸಿದ ಮಾಸ್ಕ್, ಮೂಗು ಮತ್ತು ಬಾಯಿ ಮುಚ್ಚುವಂತಹ ಬಟ್ಟೆಯನ್ನು ಸಹ ಬಳಕೆ ಮಾಡಬಹುದು.

ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ ಲಾಕ್ ಡೌನ್ ; ವಲಸೆ ಕಾರ್ಮಿಕರ ನೆರವಿಗೆ ನಿಂತ ಬಿಬಿಎಂಪಿ

ಬಿಬಿಎಂಪಿ ಮಾಸ್ಕ್ ಧರಿಸದ ಜನರಿಂದ ಮೇ 2ರಂದು 51, 700, ಮೇ 3ರಂದು 98, 350, ಮೇ 4ರಂದು 89,455 ರೂ. ದಂಡವನ್ನು ಸಂಗ್ರಹ ಮಾಡಿದೆ. ಮೇ 5ರಿಂದ ದಂಡದ ಮೊತ್ತ ಇಳಿಕೆಯ ಆದೇಶ ಜಾರಿಗೆ ಬಂದಿದೆ.

English summary
BBMP revised the its earlier order and cut the penalty for not wearing mask. Wearing a facial mask to cover mouth and nose is compulsory public place and in a working place with more than 5 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X