ಅಬ್ಬಾ..! ಬಿಬಿಎಂಪಿ ಕೊನೆಗೂ ಸಿದ್ಧಪಡಿಸಿತು ಜಾಹೀರಾತು ನೀತಿ
ಬೆಂಗಳೂರು, ಆಗಸ್ಟ್ 14: ಬಿಬಿಎಂಪಿಯು ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿಯನ್ನು ತರಲು ಕರಡನ್ನು ಸಿದ್ಧಪಡಿಸಿದೆ. ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತಿರುವ ಬಿಬಿಎಂಪಿಯು ಕೊನೆಗೂ ಜಾಹೀರಾತು ನೀತಿಗೆ ಮುಂದಾಗಿದೆ.
ಅದರ ಜತೆಗೆ ಮುಂದಿನ 1 ವರ್ಷ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಿದೆ ಇದೀಗ ನೂತನ ಜಾಹೀರಾತು ನೀತಿಯಲ್ಲಿ ಪ್ರಮುಖವಾಗಿ ಅಕ್ರಮ ಜಾಹೀರಾತು ತಡೆಗೆ ಹೆಚ್ಚು ಒತ್ತು ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಜಾಹೀರಾತು ಪ್ರದರ್ಶನ ಮಾಡಬೇಕೆಂದರೂ ಬಿಬಿಎಂಪಿ ಆಯುಕ್ತರ ಅನುಮತಿ ಕಡ್ಡಾಯವಾಗಿದೆ. ಖಾಸಗಿ ಜಾಗ ಅಥವಾ ಸರ್ಕಾರ ವಿವಿಧ ಇಲಾಖೆಗಳಿಗೆ ಸೇರಿದ ಜಾಗವಾದರೂ, ಜಾಹೀರಾತು ಅಳವಡಿಕೆಗೆ ಅನುಮತಿ ಪಡೆಯಬೇಕಿದೆ.

ವಾಣಿಜ್ಯ ಪ್ರದೇಶಗಳಲ್ಲಿಯೇ ಅಳವಡಿಸಬೇಕಿದೆ. ಅದರ ಜತೆಗೆ ಪ್ರತಿ ಜಾಹೀರಾತು ಫಲಕದಲ್ಲೂ ಶೇ.10 ಸಾರ್ವಜನಿಕ ಸಂದೇಶ ಸಾರುವ ಅಂಶವನ್ನು ಒಳಗೊಂಡಿರುತ್ತದೆ.
ಮೊದಲ ಬಾರಿಗೆ ಜಾಹೀರಾತು ಅಕ್ರಮ ತಡೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಐವರ ಸಮಿತಿ ರಚಿಸಲಾಗುತ್ತಿದೆ. ಅದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ , ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರಾಗಿರಲಿದ್ದಾರೆ. ತಿಂಗಳಿಗೊಮ್ಮೆ ಸಭೆ ನಡೆಸಿ ಅಕ್ರಮ ಫಲಕಗಳ ವರದಿಯನ್ನು ಪಡೆಯಲಿದ್ದಾರೆ.











Click it and Unblock the Notifications