Bengaluru Skydeck: ಬೆಂಗಳೂರಿನಲ್ಲಿ ಆಕಾಶ ಗೋಪುರ ನಿರ್ಮಾಣಕ್ಕೆ ಸ್ಥಳ ಫೈನಲ್ ಮಾಡಿದ ಬಿಬಿಎಂಪಿ!
ಬೆಂಗಳೂರು ನಗರವನ್ನು ಒಂದು ಪ್ರಮುಖ ಆಕರ್ಷಿಣಿಯ ಸ್ಥಳವನ್ನಾಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ನಗರದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಆಕಾಶ ಗೋಪುರ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಸದ್ಯ ಸ್ಥಳವನ್ನೂ ಬಿಬಿಎಂಪಿ ಗುರುತಿಸಿದೆ.
ಹೌದು... ಬೆಂಗಳೂರಿನಲ್ಲಿ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ಸ್ಥಳವನ್ನು ಗುರುತಿಸಿದ್ದು, ಆ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಆಕ್ಷೇಪಣೆಯನ್ನು ನವೆಂಬರ್ 8ರ ಒಳಗಡೆ ಸಲ್ಲಿಸಲು ತಿಳಿಸಿದೆ. ಹಾಗಾದರೆ ಬಿಬಿಎಂಪಿ ಆಕಾಶ ಗೋಪುರ ನಿರ್ಮಾಣ ಮಾಡಲು ಯಾವ ಸ್ಥಳಗಳನ್ನು ಗುರುತಿಸಿದೆ.

ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗದಲ್ಲಿ ಆಕಾಶ ಗೋಪುರ ನಿರ್ಮಿಸಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಆರಂಭದಲ್ಲಿ ನಗರದಲ್ಲಿ ಕೆಲ ಸ್ಥಳಗಳನ್ನು ಬಿಬಿಎಂಪಿ ಸಿದ್ಧಪಡಿಸಿತ್ತು. ಆ ಪೈಕಿ ನಗರದ ಎನ್.ಜಿ.ಇ.ಎಫ್, ಬೆನ್ನಿಗಾನಹಳ್ಳಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಯಶವಂತಪುರ, ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಝೆಶನ್-ವೈಟ್ ಫೀಲ್ಡ್, ಜಿಕಿವಿಕೆ, ಜಕ್ಕೂರು, ರೇಸ್‌ಕೋರ್ಸ್, ಮೆಜೆಸ್ಟಿಕ್, ಅರಮನೆ ಆವರಣ ಜಾಗಗಳನ್ನು ಬಿಬಿಎಂಪಿ ಆಕಾಶ ಗೋಪುರ ನಿರ್ಮಿಸಲು ಗುರುತಿಸಿದೆ.
ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ ವಿಮಾನ ನಿಲ್ದಾಣ ಮತ್ತು ಹೆಚ್.ಎ.ಎಲ್ ವಿಮಾನ ನಿಲ್ದಾಗಳ ಅಗತ್ಯತೆ ಹಾಗೂ ವಿಮಾನಗಳ ಸುರಕ್ಷತೆ ದೃಷ್ಟಿಯಿಂದ colour coded zoning map(cczm) ಅನುಸಾರ ಎಲ್ಲಾ ಸ್ಥಳಗಳಲ್ಲಿ 250.00 ಮೀ. ಎತ್ತರಕ್ಕೆ ಗೋಪುರ ನಿರ್ಮಿಸಲು ನಿರ್ಬಂಧನೆ ಇದೆ. ಜಕ್ಕೂರು ವಿಮಾನ ಶಾಲೆಯಿಂದಲೂ ಸಹ ಇದೇ ತರಹದ ನಿರ್ಬಂಧನೆ ಇದೆ.
250.00 ಮೀ. ಎತ್ತರಕ್ಕೆ ಗೋಪುರ ನಿರ್ಮಿಸಲು ಅಗತ್ಯವಿರುವ ಸ್ಥಳ
ಹೆಚ್.ಎ.ಎಲ್ ವಿಮಾನ ನಿಲ್ದಾಣ ಆಗಿರುವುದರಿಂದ ಕೆಲ ನಿರ್ಬಂಧಗಳು ಇದೆ. ಹೀಗಾಗಿ ಬೆಂಗಳೂರು ಪಶ್ಚಿಮ ಹಾಗೂ ನೈರಯತ್ಯ ಭಾಗದಲ್ಲಿ ಮಾತ್ರ ಆಕಾಶ ಗೋಪುರ ನಿರ್ಮಿಸಲು ಸಾಧ್ಯವಿದೆ. ಆಕಾಶ ಗೋಪುರ ನಿರ್ಮಿಸಲು ಹೆಚ್.ಎ.ಎಲ್‌ನಿಂದ ನಿರ್ಬಂಧ ಇದ್ದ ಕಾರಣ, ಪರ್ಯಾಯವಾಗಿ ಹೆಮ್ಮಗೆಪುರವನ್ನು ನೈಸ್ ಕ್ಲೋವರ್ ಲೀಫ್ ಹತ್ತಿರ, ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಹಾಗೂ ಕೊಮ್ಮಘಟ್ಟ(ನೈಸ್‌ರಸ್ತೆ ಹತ್ತಿರ) ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ.
ಬೆಂಗಳೂರು ವಿಶ್ವ ವಿದ್ಯಾಲಯ-ಜ್ಞಾನಭಾರತಿ ಆಕಾಶಗೋಪುರ ನಿರ್ಮಿಸಿದ್ದಲ್ಲಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಆಡಚಣೆ ಹಾಗೂ ಸದರಿ ಜಾಗದಲ್ಲಿ ನಿರ್ಮಾಣ ಸಮಯದಲ್ಲಿ ನಗರದ ಸಂಚಾರದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ಕೊಮ್ಮಘಟ್ಟ ಸ್ಥಳವು ವಸತಿ ನಿಬಿಡ ಪ್ರದೇಶವಾಗಿದ್ದು ಸ್ಥಳೀಯವಾಗಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಹೆಮ್ಮಗೆಪುರ ನೈಸ್ ಕ್ಲೋವರ್ ಲೀಫ್ ಹತ್ತಿರ ಆಕಾಶ ಗೋಪು ನಿರ್ಮಾಣ
ಇನ್ನೂ ಹೆಮ್ಮಿಗೆಪುರ(ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗಕ್ಕೆ ತುಮಕೂರು, ಕನಕಪುರ, ಮೈಸೂರು, ಹೊಸೂರು ರಸ್ತೆಗಳಿಂದ ನೃಸ್ ರಸ್ತೆ ಮುಖೇನ ಸುಗಮ ಸಂಪರ್ಕವಿದ್ದು ಜಾಗವು ಹೊರ ವಯಲಯದ ವ್ಯಾಪ್ತಿಯಲ್ಲಿರುವುದರಿಂದ ಪ್ರಸ್ತಾಪಿತ ಆಕಾಶಗೋಪರ ನಿರ್ಮಿಸುವ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಂಭವ ಕಡಿಮೆ ಇದೆ. ಜೊತೆಗೆ ತುರಹಳ್ಳಿ ಕಾಡಿನ ಪ್ರದೇಶ ಹಸಿರು ನೋಟದೊಂದಿಗೆ ಬೆಂಗಳೂರನ್ನು ವೀಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ (ನೈಸ್‌ರಸ್ತೆ ಹತ್ತಿರ) ಜಾಗವನ್ನು ಪ್ರಥಮವಾಗಿ ಪ್ರಸ್ತಾಪಿಸಲಾಗಿದೆ.
ಹೀಗಾಗಿ ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ) ಜಾಗದಲ್ಲಿ ಆಕಾಶ ಗೋಪುರ ನಿರ್ಮಿಸುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವ ಸಲಹೆಗಳು ಇದ್ದಲ್ಲಿ [email protected] ಮುಖೇನ ಲಿಖಿತ ರೂಪದಲ್ಲಿ ಮುಖ್ಯ ಆಯುಕ್ತರಿಗೆ ತಿಳಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.












Click it and Unblock the Notifications