ಮಕ್ಕಳ ಶಿಕ್ಷಣಕ್ಕೆ ಪರಿಹಾರ ಹಣ ಬಳಸುವೆ ಎಂದ ಮೃತ ಪೌರಕಾರ್ಮಿಕನ ಪತ್ನಿ

ಬೆಂಗಳೂರು, ಜುಲೈ 30: ಸತತ ಆರು ತಿಂಗಳ ಕಾಲ ಸಂಬಳವಿಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ವಿತರಿಸಿದೆ.

ಸೋಮವಾರ ಮೇಯರ್‌ ಸಂಪತ್‌ರಾಜ್‌ ಅವರು ಮೃತ ಸುಬ್ರಮಣಿ ಪತ್ನಿ ಕವಿತಾ ಅವರಿಗೆ 10 ಲಕ್ಷ ರೂ. ಪರಿಹಾರ ನೀಡಿದರು. ಅಲ್ಲದೆ ಪಕ್ಷೇತರ ಸದಸ್ಯ ಇಮ್ರಾನ್ ಪಾಷಾ 2 ಲಕ್ಷ ರೂ.ಗಳನ್ನು ವಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮೃತ ಪೌರಕಾರ್ಮಿಕ ಪತ್ನಿ ಕವಿತಾ ಪತಿ ಸಾವಿನ ಬಳಿಕ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದೇವೆ ಪಾಲಿಕೆಯ 10 ಲಕ್ಷ ರೂ. ಹಾಗೂ ಇಮ್ರಾನ್‌ ಪಾಷಾ ನೀಡಿರುವ 2 ಲಕ್ಷ ರೂ ಪರಿಹಾರವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡುತ್ತೇನೆ ಎಂದು ಗದ್ಗದಿತರಾಗಿ ಹೇಳಿದ್ದಾರೆ.

BBMP ensures Rs.10 lakhs compensation for PK family

ಪತ್ನಿ ಕವಿತಾ, ಸಹೋದರಿಯರು ಮಕ್ಕಳನ್ನು ಸಲಹುತ್ತಿದ್ದ ಪೌರಕಾಮಿಕ ಸುಬ್ಮಣಿ ಸಂಬಳವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದರು. , ಕಿರಿ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಪತ್ನಿ ಸಹೋದರನನ್ನೇ ಆಶ್ರಯಿಸಿದ್ದ ಇಬ್ಬರು ಸಹೋದರಿಯರು, ಇನ್ನೂ ಶಾಲೆಗೆ ಹೋಗುತ್ತಿರುವ ಹೋಗುತ್ತಿರುವ ಮಕ್ಕಳು.

ಆ ಮನೆಯ ಒಡೆಯ ಅತ್ಮಹತ್ಯೆಗೆ ಶರಣಾಗಿದ್ದಾನೆ ಕಾರಣ, ಬೆಂಗಳೂರು ಮಹಾನಗರ ಪಾಲಿಕೆ ಸತತ ಏಳು ತಿಂಗಳ ಕಾಲ ಸಂಬಳ ಕೊಡದೆ ಸತಾಯಿಸಿರುವುದು, ಪೌರಕಾಮಿಕ ಸುಬ್ರಮಣಿ ಏಳು ತಿಂಗಳ ಕಾಲ ಸಂಬಳವಿಲ್ಲದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು.

ಸುಬ್ರಮಣಿ ಪತ್ನಿ ಕವಿತಾ, ಸಹೋದರಿಯರಾದ ವಿಜಯ ಹಾಗೂ ಲತಾ, ಏಳು ವರ್ಷದ ಮಗ ದರ್ಶನ್‌ ಮತ್ತು ಹತ್ತು ವರ್ಷದ ಮಗಳು ಪವಿತ್ರಾ ಅವರರೊಂದಿಗೆ ಮುನೇಶ್ವರ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+