ಬಿಬಿಎಂಪಿ ಚುನಾವಣೆ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ

ಬೆಂಗಳೂರು, ಆಗಸ್ಟ್ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಾಗಿ ಭರ್ಜರಿ ತಯಾರಿ ಆರಂಭವಾಗಿದೆ. ಒಂದೆಡೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮೇಳ ನಡೆಸುತ್ತಿದೆ, ಇನ್ನೊಂದೆಡೆ ಚುನಾವಣಾ ಆಯೋಗ ಕೂಡಾ ಮತದಾನಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಆಗಸ್ಟ್ 22 ರಂದು ಮತದಾನ ನಡೆಯಲಿದ್ದು, ಆಗಸ್ಟ್ 25ರಂದು ಫಲಿತಾಂಶ ಹೊರಬೀಳಲಿದೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]

ಈ ನಡುವೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲವೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಬಿಬಿಎಂಪಿ ವೆಬ್ ತಾಣದಲ್ಲಿ ಲಿಂಕ್ ಗಳನ್ನು ನೀಡಲಾಗಿದೆ. [ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಹೇಗೆ?]

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಸಾರ್ವಜನಿಕರು ಹತ್ತಿರದ ಪಾಲಿಕೆ ಕಚೇರಿ ಅಥವ ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು ಸೇರಿಸುವ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. [ಪಾಲಿಕೆ ವೆಬ್ ಸೈಟ್ ವಿಳಾಸ]

ಸಾರ್ವಜನಿಕರ ಸಹಾಯಕ್ಕಾಗಿ ಮೂರು ಕಂಟ್ರೋಲ್ ರೂಂಗಳನ್ನು ತರೆಯಲಾಗಿದೆ. ಚುನಾವಣೆ ಬಗ್ಗೆ ಮಾಹಿತಿ ಪಡೆಯಲು 080-22374740 (ಚುನಾವಣಾ ಆಯೋಗದ ಸಹಾಯವಾಣಿ) ಅಥವ 080-22224748, 080-22221188 (ಬಿಬಿಎಂಪಿ ಸಹಾಯವಾಣಿ)ಗೆ ಕರೆ ಮಾಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಇಲ್ವಾ? ಎಂಬುದನ್ನು ಪರೀಕ್ಷಿಸುವುದು ಹೇಗೆ ಮುಂದೆ ಓದಿ...[40 ವಾರ್ಡ್ ಗಳ ಪೂರ್ವ ತಯಾರಿ ವರದಿ]

ಗುರುತಿನ ಚೀಟಿ ಸಂಖ್ಯೆಯಿಂದ ನಿಮ್ಮ ಹೆಸರನ್ನು ಹುಡುಕಿ

ಗುರುತಿನ ಚೀಟಿ ಸಂಖ್ಯೆಯಿಂದ ನಿಮ್ಮ ಹೆಸರನ್ನು ಹುಡುಕಿ

ಗುರುತಿನ ಚೀಟಿ ಸಂಖ್ಯೆಯಿಂದ ನಿಮ್ಮ ಹೆಸರನ್ನು ಹುಡುಕಲು ಈ ಲಿಂಕ್ ಕ್ಲಿಕ್ ಮಾಡಿ
ಗುರುತಿನ ಚೀಟಿ ಸಂಖ್ಯೆಯಿಂದ ನಿಮ್ಮ ಹೆಸರನ್ನು ಹುಡುಕಿ
ಉದಾ: 64********62 1 ಸಂಖ್ಯೆಯ EPIC ನಂಬರ್ ಹಾಕಿ ಸರ್ಚ್ ಬಟನ್ ಒತ್ತಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ

ನಿಮ್ಮ ಹೆಸರು ಹಾಗೂ ನಿಮ್ಮ ಸಂಬಂಧಿಯ ಹೆಸರು ಇನಿಶಿಯಲ್ ಇಲ್ಲದೆ ತುಂಬಿ(ಇಂಗ್ಲೀಷ್ ಹಾಗೂ ಕನ್ನಡ ಎರಡರಲ್ಲೂ ದಾಖಲಿಸಬಹುದಾಗಿದೆ) ನಂತರ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್ ನಮೂದಿಸಿ ಸರ್ಚ್ ಬಟನ್ ಒತ್ತಿ

ಮತದಾರರ ಪೂರ್ಣ ವಿವರ ಲಭ್ಯ

ಮತದಾರರ ಪೂರ್ಣ ವಿವರ ಲಭ್ಯ

ಈ ಹಿಂದಿನ ಕ್ರಮ ಅನುಸರಿಸಿ ಬಂದ ಫಲಿತಾಂಶ ಪುಟದಲ್ಲಿ ಮತದಾರರ ಪೂರ್ಣ ವಿವರ ಸಿಗುತ್ತದೆ. ಬಲತುದಿಯಲ್ಲಿರುವ ಚಿನ್ಹೆ ಕ್ಲಿಕ್ ಮಾಡಿದರೆ ಮತ್ತೊಂದು ವಿಂಡೋದಲ್ಲಿ ಇನ್ನಷ್ಟು ವಿವರಗಳು ಲಭ್ಯವಾಗಲಿದೆ.

ಬಿಬಿಎಂಪಿ ಡಾಟಾ ಬೇಸ್ ಇನ್ನೂ ಅಪ್ಡೇಟ್ ಆಗಿಲ್ಲ

ಬಿಬಿಎಂಪಿ ಡಾಟಾ ಬೇಸ್ ಇನ್ನೂ ಅಪ್ಡೇಟ್ ಆಗಿಲ್ಲ

ನಿಮ್ಮ ವಾರ್ಡ್ ಸಂಖ್ಯೆ ಪಾರ್ಟ್ ನಂಬರ್ ,ಸೀರಿಯಲ್ ನಂಬರ್ ಸಹಿತ ವಿವರಗಳು ಬರುತ್ತದೆ. ಬಹುತೇಕ ಎಲ್ಲರ ವಯಸ್ಸು ಹತ್ತಿಪ್ಪಿತ್ತು ವರ್ಷ ಕಡಿಮೆ ಕಂಡರೂ ಕಾಣಬಹುದು. ಕಾರಣ, ಬಿಬಿಎಂಪಿ ಡಾಟಾ ಬೇಸ್ ಇನ್ನೂ ಅಪ್ಡೇಟ್ ಆಗಿಲ್ಲ.

ಇದಲ್ಲದೆ ಬೆಂಗಳೂರಿನ ನಾಲ್ಕುವಿಭಾಗಗಳಲ್ಲಿರುವ ವಿಧಾನಸಭಾ ಕ್ಷೇತ್ರಗಳಿಗೆ ಅನುಗುಣವಾಗಿ ವಾರ್ಡ್ ವಾರು ಅಭ್ಯರ್ಥಿಗಳ ವಿವರಗಳನ್ನು ಕೂಡಾ ಅಪ್ಡೇಟ್ ಮಾಡಲಾಗುತ್ತಿದೆ.

ಅಭ್ಯರ್ಥಿಗಳ ಆಸ್ತಿ ವಿವರ

ಅಭ್ಯರ್ಥಿಗಳ ಆಸ್ತಿ ವಿವರ

ಬೆಂಗಳೂರಿನ ನಾಲ್ಕುವಿಭಾಗಗಳಾದ ಬಿಬಿಎಂಪಿ ಸೆಂಟ್ರಲ್, ಉತ್ತರ, ದಕ್ಷಿಣ ಹಾಗೂ ನಗರ ಜಿಲ್ಲೆಗಳಲ್ಲಿನ ಪಾರ್ಟ್ ನಂಬರ್ ಸಹಿತ ವಿವರ ಸಿಗಲಿದೆ. ಇದರಿಂದ ಮತದಾನದ ದಿನ ಎಲ್ಲಿ ಮತದಾನ ಮಾಡಬೇಕು ಎಂಬ ಗೊಂದಲ ನಿವಾರಣೆಯಾಗಲಿದೆ. ಜೊತೆಗೆ ಉಮೇದುವಾರಿಗೆ ಸಲ್ಲಿಸಿರುವ ಅಭ್ಯರ್ಥಿಗಳ ಆಸ್ತಿ ವಿವರಗಳನ್ನು ವಿವರವಾಗಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+