ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಕೆಂಪೇಗೌಡರಿಗೆ ಅಪಮಾನ
ಬೆಂಗಳೂರು, ಮಾರ್ಚ್ 03: ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಬೆಂಗಳೂರಿನ ಆಡಳಿತ ಸಂಸ್ಥೆ ಬಿಬಿಎಂಪಿಯೇ ಅಪಮಾನ ಎಸಗಿರುವ ಘಟನೆ ನಡೆದಿದೆ.
ಮೊನ್ನೆ ಮಂಡಿಸಿದ ಬಿಬಿಎಂಪಿ ಬಜೆಟ್ ವೇಳೆ ಹಂಚಲಾದ ಬಜೆಟ್ ಪುಸ್ತಕದಲ್ಲಿ ಕೆಂಪೇಗೌಡರು ಎರಡಗೈಯಲ್ಲಿ ಕತ್ತಿ ಬಲಗೈಯಲ್ಲಿ ಗುರಾಣಿ ಹಿಡಿದಿರುವ ಚಿತ್ರವನ್ನು ಪ್ರಕಟಿಸಲಾಗಿದೆ. ಮೂಲ ಚಿತ್ರದಲ್ಲಿ ಕೆಂಪೇಗೌಡರು ಬಲಗೈಯಲ್ಲಿ ಕತ್ತಿ ಮತ್ತು ಎಡಗೈಯಲ್ಲಿ ಗುರಾಣಿ ಹಿಡಿದಿದ್ದಾರೆ.

ಈ ರೀತಿಯ ದೊಡ್ಡ ಅಪ್ರಭ್ರಂಶವೊಂದು ನಡೆದಿದ್ದರೂ ಕೂಡ ಯಾವೊಬ್ಬ ಬಿಬಿಎಂಪಿ ಅಧಿಕಾರಿಗಳೂ ಕಾರ್ಪೊರೇಟರ್‌ಗಳಿಗೂ ತಿಳಿಯದೇ ಇರುವುದು ಆಶ್ಚರ್ಯ. ಬಜೆಟ್‌ನಲ್ಲಿ ಘೋಷಿಸಿದ ಕಾರ್ಪೊರೇಟರ್‌ಗಳಿಗೆ ಟ್ಯಾಬ್ ಅನ್ನು ಎರಡೇ ದಿನದಲ್ಲಿ ವಿತರಿಸಿದ ಬಿಬಿಎಂಪಿ ಈ ರೀತಿಯ ದೊಡ್ಡ ಅಚಾತುರ್ಯವನ್ನು ನಿಲರ್ಕ್ಷಿಸಿರುವುದು ಎಲ್ಲರ ಹುಬ್ಬೇರಿಸಿದೆ.












Click it and Unblock the Notifications