BBMP Budget 2024: ಬಿಬಿಎಂಪಿ ಬಜೆಟ್ ಮಂಡನೆಗೆ ದಿನಾಂಕ ಫಿಕ್ಸ್: ಯಾವಾಗ, ಬಜೆಟ್ ಗಾತ್ರ ಎಷ್ಟು? ಮಾಹಿತಿ
ಬೆಂಗಳೂರು, ಫೆಬ್ರವರಿ 27: ಮಾರ್ಚ್ ಮೊದಲ ವಾರವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) 2024-25ನೇ ಸಾಲಿನ ಬಜೆಟ್ ಮಂಡನೆ ಆಗಲಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಅದಕ್ಕಿಂತ ಕೆಲವು ದಿನಗಳ ಮೊದಲೇ ಬಜಟ್ ಮಂಡನೆ ಆಗಲಿದೆ. ಈ ಬಗ್ಗೆ ದಿನಾಂಕ ಫಿಕ್ಸ್ ಮಾಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚುನಾಯಿತಿ ಪ್ರತಿನಿಧಿ ಇಲ್ಲದೇ ಬಿಬಿಎಂಪಿ ಅಧಿಕಾರಿಗಳೇ ನಾಲ್ಕನೇ ಭಾರಿಗೆ ಬಿಬಿಎಂಪಿ ಬಜೆಟ್-2024 ಮಂಡಿಸುತ್ತಿದ್ದಾರೆ.

ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ಅವರು ಇದೇ ಗುರುವಾರ ಫೆಬ್ರುವರಿ 29ರಂದು ಬಜೆಟ್ ಮಂಡಿಸುತ್ತಿದ್ದಾರೆ.
13 ಸಾವಿರ ಕೋಟಿ ರೂ.ಬಜೆಟ್?
ಬಿಬಿಎಂಪಿಯ ಈ ಬಾರಿ 12 ರಿಂದ 13 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡನೆ ಆಗುವ ನಿರಿಕ್ಷೆ ಇದೆ. ಲೋಕಸಭೆಯ ಚುನಾವಣಾ ವೇಳಾ ಪಟ್ಟಿ ಮಾರ್ಚ್ ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಇದೆ. ಹೀಗಾಗಿ ಚುನಾವಣಾ ಸಂಹಿತೆ ಜಾರಿಯಾದರೆ ಬೇರೆಲ್ಲ ಸರ್ಕಾರಿ ಕೆಲಸಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಬಜೆಟ್ ಮಂಡನೆಗೆ ಮುಹೂತ್ಸವ ಫಿಕ್ಸ್ ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.
ಕಳೆದ ಸಾಲಿನಲ್ಲಿ 2023-24ನೇ ಸಾಲಿನಲ್ಲಿ 11,158 ಕೋಟಿ ರೂ. ಆದಾಯ ಬರುವ ಅಂದಾಜು ಮಾಡಲಾಗಿತ್ತು. ಅದರಂತೆ 11,157 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸಲಾಗಿತ್ತು. ಇದೀಗ ಪ್ರಸಕ್ತ ವರ್ಷವು (2024-25) ಅತ್ಯಧಿಕ ಆದಾಯ ನಿರೀಕ್ಷೆ ಹಿನ್ನೆಲೆ ಸದ್ಯ ಬಜೆಟ್ ಗಾತ್ರವನ್ನು 12 ಸಾವಿರ ಕೋಟಿಯಿಂದ 13 ಸಾವಿರ ಕೋಟಿ ರೂಪಾಯಿ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.

ಸತತವಾಗಿ ಅಧಿಕಾರಿಗಳಿಂದ ಬಜೆಟ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದಿಲ್ಲ. ಈ ಸ್ಥಾನಗಳಿಗೆ ಆಯ್ಕೆ ಆಗದೇ ಹಾಗೇ ಉಳಿದಿದೆ. ಈ ಕಾರಣದಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದಾಗಿದೆ. ಹೀಗಾಗಿ ಈ ಬಾರಿಯು ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಸೇರಿ ಒಟ್ಟು ನಾಲ್ಕು ಭಾರಿ ಅಧಿಕಾರಿಗಳಿಂದಲೇ ಬಜೆಟ್ ಮಂಡನೆ ಆದಂತಾಗುತ್ತದೆ.
ಬಿಬಿಎಂಪಿ ಬಜೆಟ್ ವ್ಯಾಪ್ತಿಗೆ ವಿವಿಧ ಯೋಜನೆ ತರಲಿದೆ. ಹಸಿರು ಬೆಂಗಳೂರು, ರಸ್ತೆ ಅಭಿವೃದ್ಧಿಯಂತಹ ಕೆಲವು ಯೋಜನೆಗಳಿಗೆ ಅನುದಾನ ಘೋಷಣೆ ಆಗಲಿದೆ. ಮಳೆಗಾಲದಲ್ಲಿ ತೊಂದರೆ ಮಾಡುತ್ತಿರುವ ರಸ್ತೆ ಅಂಡರ್‌ಪಾಸ್ ಗಳ ಸುಧಾರಣೆಗೆ ಹಣ ಹಂಚಿಕೆ ನಿರೀಕ್ಷೆ ಇದೆ. ಅಲ್ಲದೇ ಸರ್ಕಾರದ ಮಹತ್ವಾಕಾಂಕ್ಷೆಯ 'ಬ್ರ್ಯಾಂಡ್ ಬೆಂಗಳೂರು' ಉಪಕ್ರಮದ ಹಲವು ಸಲಹೆಗಳ ಜಾರಿಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications