BBMP Budget 2024: ಬಜೆಟ್ ವ್ಯಾಪ್ತಿಗೆ ಯಾವೆಲ್ಲ ಕಾರ್ಯಕ್ರಮ ಬರಲಿವೆ? ತಿಳಿಯಿರಿ

ಬೆಂಗಳೂರು, ಫೆಬ್ರವರಿ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದೇ ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಆಗುತ್ತಿದೆ. ಮುಂದಿನ ಮಾರ್ಚ್ ಮೊದಲ ವಾರ ಬಿಬಿಎಂಪಿ ಬಜೆಟ್ (BBMP Budget 2024) ಮಂಡಿಸಲು ಅಧಿಕಾರಿಗಳು ತಯಾರಾಗಿದ್ದು, ವಿವಿಧ ಕಾರ್ಯಕ್ರಮ ಬಜೆಟ್ ವ್ಯಾಪ್ತಿಗೆ ಬರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವಾರ್ಷಿಕ ಬಜೆಟ್ ಮಂಡನೆಗೆ ಸಜ್ಜಾಗಿದ್ದು, ಬಜೆಟ್‌ನಲ್ಲಿ ಬೆಂಗಳೂರಿನ ಹಸರೀಕರಣಕ್ಕೆ ಒತ್ತು ಸಿಗಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಎಲ್ಲಾ 20ಲಕ್ಷ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಹಾಗೂ ಮ್ಯಾನುವಲ್ ಖಾತಾ ಇ-ಪ್ರಮಾಣಪತ್ರಗಳ ಜತೆ ಬದಲಾವಣೆ ಮಾಡಲು ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಡಿಎಚ್ ವರದಿ ಮಾಡಿದೆ.

BBMP Budget 2024: BBMP Focuses on Which Program? Expected Grant Allocated Details

ಸರ್ಕಾರದ ಮಹತ್ವಾಕಾಂಕ್ಷೆಯ 'ಬ್ರ್ಯಾಂಡ್ ಬೆಂಗಳೂರು' ಕಾರ್ಯಕ್ರಮದಡಿ ನಗರ ಮೂಲಸೌಕರ್ಯಗಳಿಗೆ, ಹಸರೀಕರಣ, ಮಳೆನೀರು ಕೊಯ್ಲಿಗೆ ಉತ್ತೇಜನದಂತಹ ಕೆಲವು ಕಾರ್ಯಕ್ರಮಗಳು ಬಜೆಟ್ ವ್ಯಾಪ್ತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಜೆಟ್‌ ನಲ್ಲಿ 'ಬ್ರಾಂಡ್ ಬೆಂಗಳೂರು' ಸಲಹೆಗಳು

'ಬ್ರಾಂಡ್ ಬೆಂಗಳೂರು' ಉಪಕ್ರಮ ಭಾಗವಾಗಿ ಸುಮಾರು 70,000 ಸಲಹೆಗಳನ್ನು ನಾವು ಸಾರ್ವಜನಿಕರಿಂದ ಸ್ವೀಕರಿಸಿದ್ದೇವೆ. ಅವುಗಳಲ್ಲಿ ಸಾಧ್ಯವಾದವುಗಳು ಬಜೆಟ್‌ನಲ್ಲಿರಲಿವೆ. ಈ ಕುರಿತ ವರದಿಯನ್ನು ಸಮಿತಿಗೆ ಸಲ್ಲಿಸಲಾಗುವುದು. ರಸ್ತೆಗಳು, ಸ್ಕೈಡೆಕ್‌ ನಿರ್ಮಾಣ, ಪ್ರವಾಸೋದ್ಯಮವನ್ನು ಉತ್ತೇಜನ ರಾಜ ಕಾಲುವೆಗಳ ಬಫರ್ ಝೋನ್‌ಗಳಲ್ಲಿ ಹೊಸ ರಸ್ತೆಗಳು ಮತ್ತು ಸ್ಕೈಡೆಕ್‌ಗಳಿಗೆ ರಾಜ್ಯ ಸರ್ಕಾರವು ಹಿಂದಿನ ಬಜೆಟ್ ಅನುದಾನ ನೀಡಿರಲಿಲ್ಲ. ಅದನ್ನು ಈ ಬಾರಿ ಪಡೆಯುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

BBMP Budget 2024: BBMP Focuses on Which Program? Expected Grant Allocated Details

ವೈಟ್‌ ಟಾಪಿಂಗ್: 400 ಕೋಟಿ ರೂ.ಹಂಚಿಕೆ?

ನಗರದಲ್ಲಿ ಇತ್ತೀಚೆಗೆ ವೈಟ್‌ ಟಾಪಿಂಗ್ ರಸ್ತೆಗಾಗಿ 1,200-ಕೋಟಿ ರೂಪಾಯಿಯ ಕ್ರಿಯಾ ಯೋಜನೆಗೆ ಬಿಬಿಎಂಪಿ ತನ್ನ ಬಜೆಟ್‌ನಲ್ಲಿ ರೂ.400 ಕೋಟಿಯನ್ನು ಮೀಸಲಿಡುವ ಸಾಧ್ಯತೆ ಇದೆ. ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್ ಅವರು ವಿಭಾಗದ ವಿಶೇಷ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಬಿಎಂಪಿಯ ಕಂದಾಯ ಇಲಾಖೆ ಕೈಗೊಂಡಿರುವ ಸುಧಾರಣೆಗಳು ಬಜೆಟ್‌ನ ಪ್ರಮುಖ ಅಂಶವಾಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ದಾಖಲಾತಿಗಳನ್ನು ಡಿಜಿಟಲೀಕರಣಗೊಳಿಸುವ ಜತೆಗೆ 6,000 ಕೋಟಿಗೂ ಹೆಚ್ಚು ಆಸ್ತಿ ಸಂಗ್ರಹಿಸಲಾಗುವುದು. ನಗರದ ಒಳಗೆ ಬೇಕಾದಂತೆ ಆಂತರಿಕ ತಂತ್ರಜ್ಞರ ತಂಡ ನಿರ್ಮಿಸುವುದು ಸೇರಿದಂತೆ ಹಲವು ಉಪಕ್ರಮಗಳು ಬಜೆಟ್ ವ್ಯಾಪ್ತಿಗೆ ಬರಲಿವೆ.

ಬಜೆಟ್ ರೂಪಿಸುವ ನೀತಿ ಸರಿಯಿಲ್ಲ?

ಬೆಂಗಳೂರು ನವನಿರ್ಮಾಣ ಪಕ್ಷದ (ಬಿಎನ್‌ಪಿ) ಸಂಸ್ಥಾಪಕ ಶ್ರೀಕಾಂತ್‌ ನರಸಿಂಹನ್‌ ಮಾತನಾಡಿ, ಬಿಬಿಎಂಪಿ ವಾರ್ಷಿಕ ಬಜೆಟ್‌ ರೂಪಿಸುವ ರೀತಿ ತಪ್ಪಾಗಿದೆ. ಏಕೆಂದ್ರೆ ಬೆಂಗಳೂರು 14 ಸಾವಿರ ಕಿ.ಮೀ ಉದ್ದದ ರಸ್ತೆ ವ್ಯವಸ್ಥೆ ಹೊಂದಿದೆ. ಯಾವ ಭಾಗಕ್ಕೆ ಎಷ್ಟು ಹಣ ಮಂಜೂರು ಮಾಡಬೇಕು ಎಂಬುದನ್ನು ಶಾಸಕರು ನಿರ್ಧರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇದರ ಬದಲಾಗಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಪ್ರಯತ್ನಿಸಬೇಕು. ಇದರಿಂದ ಬಿಬಿಎಂಪಿ ಸದಸ್ಯರು, ವಾರ್ಡ್ ಸಮಿತಿ ಹಾಗೂ ಪ್ರದೇಶ ಸಭೆ ಸದಸ್ಯರು ಒಟ್ಟಾಗಿ ಸೇರಬಹುದು. ಅವರು ಬಿಬಿಎಂಪಿ ಬಜೆಟ್‌ಗೆ ಕೊಡುಗೆ ನೀಡಬಹುದು. ಬಿಬಿಎಂಪಿ ಆಡಳಿತಮಂಡಳಿಯವರು ಮಾತ್ರವೇ ನಾಗರಿಕರು ಹಣವನ್ನು ಎಲ್ಲಿ ವಿನಿಯೋಗಿಸಬೇಕು, ಹೇಗೆ ಬಜೆಟ್ ಹಂಚಿಕೆ ಮಾಡಬೇಕೆಂದು ನಿರ್ಧರಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+