BBMP Budget 2023: ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಗೆ ಅನುದಾನ ಹಂಚಿಕೆ
ಬಿಬಿಎಂಪಿ ಆಯವ್ಯಯ- 2023 ಬಜೆಟ್ ನಲ್ಲಿ ಮಂಡನೆ ಇದರಲ್ಲಿ ಸಾರ್ವಜನಿಕ ಶಿಕ್ಷಣಕ್ಕೆಂದೆ ನೂರು ಕೊಟಿಗೂ ಅಧಿಕ ಅನುದಾನ ಘೋಷಣೆ ಆಗಿದೆ.
ಬೆಂಗಳೂರು, ಮಾರ್ಚ್ 02: ಬಹುನಿರೀಕ್ಷೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಆಯವ್ಯಯ- 2023 ಬಜೆಟ್ ಮಂಡನೆ ಯಾಗಿದೆ. ಇದರಲ್ಲಿ ಸಾರ್ವಜನಿಕ ಶಿಕ್ಷಣಕ್ಕೆಂದೆ ನೂರು ಕೊಟಿಗೂ ಅಧಿಕ ಅನುದಾನ ಘೋಷಣೆ ಆಗಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಒಟ್ಟು 47 ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕಾಗಿ 152.61 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಈ ಪೈಕಿ ಅದರಲ್ಲಿ 25 ಕೋಟಿ ರೂಪಾಯಿ ಅನುದಾನವನ್ನು ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲು ಒದಗಿಸುವುದಾಗಿ ಬಿಬಿಎಂಪಿ ಘೋಷಿಸಿದೆ.

ಬಿಬಿಎಂಪಿ ಅಧೀನದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೈಕಿ ಒಟ್ಟು 10,000 ಆರ್ಥಿಕವಾಗಿ ಹಿಂದುಳಿದಿರುವ ಬಡ ಮಕ್ಕಳಿಗೆ 5 ಕೋಟಿ ಹಣದಲ್ಲಿ ಲ್ಯಾಪ್ ಟಾಪ್ ವಿತರಿಸಲಾಗುವುದು. ಈ ಸಂಬಂಧ ಬಿಬಿಎಂಪಿ ಯೋಜನೆ ರೂಪಿಸಿಕೊಂಡಿದೆ. ಇದರಿಂದ ಬಡ ಮಕ್ಕಳು ಲ್ಯಾಪ್‌ಟಾಪ್ ಪಡೆದುಕೊಂಡು ಇಂದಿನ ಡಿಜಿಟಲ್ ಶಿಕ್ಷಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ.
ಈ ಕುರಿತು ಮುಂದಿನ ದಿನಗಳಲ್ಲಿ ಬಿಬಿಎಂಪಿ ಮತ್ತೆ ಆದೇಶ ಹೊರಡಿಸಲಿದೆ. ಅದರಲ್ಲಿ ಲ್ಯಾಪ್‌ಟಾಪ್ ಖರೀದಿ, ಟೆಂಡರ್ ಆಹ್ವಾನ, ಲ್ಯಾಪ್‌ಪಾಟ್ ಒಮ್ಮೆಲೆ ಉದ್ದೇಶಿತ ಎಲ್ಲ ಮಕ್ಕಳಿಗೆ ವಿತರಿಸಬೇಕೋ ಅಥವಾ ಹಂತ ಹಂತವಾಗಿ ವಿತರಣೆ ಮಾಡಬೇಕೋ ಎಂಬ ಇತ್ಯಾದಿ ಮಾಹಿತಿಯನ್ನು ಪಾಲಿಕೆ ತಿಳಿಸಿ ಹಣ ಬಿಡುಗಡೆ ಮಾಡಲಿದೆ.

ಇನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆಗೆಂದು ಒದಗಿಸಲಾಗುತ್ತಿರುವ ಒಟ್ಟು (152) ಕೋಟಿ ವೆಚ್ಚದಲ್ಲಿ ಶಾಲೆಗಳ ನವೀಕರಣ,ಸ್ಮಾರ್ಟ್ ತರಗತಿಗಳ ಸ್ಥಾಪನೆ, ಪಠ್ಯ ಪುಸ್ತಕ ಖರೀದಿ, ಸಮವಸ್ತ್ರ ಖರೀದಿ ಮತ್ತು ವಿತರಣೆ, ಶೂ ಹಾಗೂ ಸಾಕ್ಸ್, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಬ್ದುಲ್ ಕಲಾಂ ಹೆಸರಿನಲ್ಲಿ ಕನಸಿನ ಶಾಲೆ.
ಹೊಸ ಯೋಜನೆ - ಓದುವ ಬೆಳಕು ಯೋಜನೆಗಳಿಗೆ ಬಳಕೆಯಾಗಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.












Click it and Unblock the Notifications