ರಾಜ್ಯ ಸರ್ಕಾರಕ್ಕೆ ರೈತರ ಜೀವಕ್ಕಿಂತ ರಾಜಕೀಯವೇ ಮುಖ್ಯ: ಬೊಮ್ಮಾಯಿ ಕಿಡಿ
ಬೆಂಗಳೂರು, ಜುಲೈ 18: ಮುಂಗಾರು ಮಳೆ ವೈಫಲ್ಯವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟ ವಿರೋಧ ಪಕ್ಷಗಳ ಸಭೆ ನಡೆಸುವುದರಲ್ಲಿ ಎಲ್ಲ ಸಮಯ ತೊಡಗಿಸಿದ್ದಾರೆ. ಅವರಿಗೆ ರೈತರ ಜೀವಕ್ಕಿಂತ ರಾಜಕೀಯವೇ ಮುಖ್ಯವಾಗಿದೆ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಮುಂಗಾರು ವಿಫಲವಾಗಿ ರೈತರು ಬಿತ್ತಿರುವ ಬೆಳೆ ಮೊಳಕೆಯೊಡೆಯದೇ ವಿಫಲವಾಗಿದೆ. ಹಲವಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ವರದಿಗಳು ಬರುತ್ತಿವೆ ಎಂದರು.
ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಹಿಂದೆ 2013-18 ರಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಯಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅದು ಮರುಕಳಿಸುವಂತೆ ಕಾಣಿಸುತ್ತಿದೆ. ನಾನು ಇದನ್ನು ಖಂಡಸುಸತ್ತೇನೆ ಸರ್ಕಾರ ಕೂಡಲೇ ಎಲ್ಲ ಕ್ರಮ ಕೈಗೊಳ್ಳಲು ನಾನು ಆಗ್ರಹಿಸುತ್ತೇನೆ.
— Basavaraj S Bommai (@BSBommai) July 17, 2023
2/3
ಬರಗಾಲ, ರೈತರ ಸಮಸ್ಯೆಗನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಹಾಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದೆಲ್ಲವನ್ನು ನೋಡಿದರೆ ಈ ಹಿಂದೆ 2013-18ರಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಯಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅದು ಮರುಕಳಿಸುವಂತೆ ಕಾಣಿಸುತ್ತಿದೆ ಎಂದು ವಿಷಾಧಿಸಿದರು.

ಕಾಂಗ್ರೆಸ್ ಸರ್ಕಾರದ ನಡೆಯನ್ನು ನಾನು ಖಂಡಿಸುಸತ್ತೇನೆ, ಸರ್ಕಾರ ಕೂಡಲೇ ರೈತರಿಗೆ ಅನುಕೂಲಕರ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಅಸ್ತಿತ್ವಕ್ಕಾಗಿ ಪ್ರತಿಪಕ್ಷಗಳಿಂದ ಶೋ
ಬೇರೆ ಅಸ್ತಿತ್ವ ಕಳೆದುಕೊಂಡಿರುವ ಪ್ರಾದೇಶಿಕ ಪಕ್ಷಗಳೆಲ್ಲವು ಒಂದೆಡೆ ಸೇರಿದರೆ ಏನೂ ಆಗುವುದಿಲ್ಲ. ಅವರೆಲ್ಲರು ಬೆಂಗಳೂರಿನಲ್ಲಿ ಅಸ್ತಿತ್ವಕ್ಕಾಗಿ ಶೋ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ UPA ಅಂಗ ಪಕ್ಷಗಳ ಸಭೆಯಿಂದ ಏನೂ ಪ್ರಯೋಜನವಿಲ್ಲ. ಮೋದಿ ಅವರದ್ದು ಮೇರು ವ್ಯಕ್ತಿತ್ವ, ರಾಷ್ಟ್ರದಲ್ಲಿ 9 ವರ್ಷದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲಾ ರಂಗದಲ್ಲೂ ದೊಡ್ಡ ಬದಲಾವಣೆ ತಂದಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವದ ಎಲ್ಲಾ ರಾಷ್ಟ್ರಗಳು ಕೋವಿಡ್ ನಿರ್ವಹಿಸಲು ವಿಫಲವಾದ ಸಂದರ್ಭಲ್ಲಿ ಪ್ರಧಾನಮಂತ್ರಿಗಳು ಉತ್ತಮ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸದವರು. ಅದಕ್ಕಾಗಿ ಇವತ್ತು ಭಾರತಕ್ಕೆ ಗೌರವ ಇದೆ, ಪ್ರಧಾನಿ ಮೋದಿ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ರಾಷ್ಟ್ರದ ಪ್ರತಿ ಹಳ್ಳಿಗೂ ಮೋದಿ ಕಾರ್ಯಕ್ರಮ ಮುಟ್ಟಿದೆ ಎಂದು ಅವರು ವಿಪಕ್ಷಗಳಿಗೆ ಟಾಂಗ್ ನೀಡಿದರು.
ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಬೆಂಗಳೂರಿಗೆ ಬಂದು ಶೋ ಮಾಡುವ ಪ್ರಯತ್ನವಷ್ಟೇ ಇದಾಗಿದೆ. ಕರ್ನಾಟಕದಲ್ಲಿ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದರು.












Click it and Unblock the Notifications