'ಬಸವನಗುಡಿ' ಉಳಿಸಲು ಸ್ಥಳೀಯರ ಸಹಿ ಸಂಗ್ರಹ
ಬೆಂಗಳೂರು, ಅಕ್ಟೋಬರ್ 23: ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಬಡಾವಣೆಗಳು ತಮ್ಮ ಹೆಸರುಗಳಿಂದ ಸಾಕಷ್ಟು ವೈಶಿಷ್ಟ್ಯವನ್ನು ಹೊಂದಿವೆ. ಈ ಪೈಕಿ 130ಕ್ಕೂ ಅಧಿಕ ವರ್ಷಗಳ ಇತಿಹಾಸ ವಿರುದ್ಧ ಬಸವನಗುಡಿ ಇಲ್ಲಿನ ದೇವಸ್ಥಾನ, ಕಡಲೆಕಾಯಿ ಪರಿಷೆ ಸೇರಿದಂತೆ ಐತಿಹಾಸಿಕವಾಗಿ ಮನೆ ಮಾತಾಗಿದೆ. ಇಂತಹ ಬಡಾವಣೆಗೆ ಇದೀಗ ಸರ್ಕಾರ ಕುತ್ತು ತರುವ ಕೆಲಸ ಮಾಡುತ್ತಿದ್ದು, ಅದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರ ವಾರ್ಡ್‌ಗಳ ಮರು ವಿಂಗಡಣೆ ವೇಳೆ ಕರಡು ಪಟ್ಟಿಯಲ್ಲಿ ರಾಜಧಾನಿಯ 12 ವಾರ್ಡ್‌ಗಳ ಹೆಸರು ಬದಲಾಯಿಸಲಾಗಿದೆ. ಈ ಪೈಕಿ ಇತಿಹಾಸ ಸುಪ್ರಸಿದ್ಧ 'ಬಸವನಗುಡಿ' ವಾರ್ಡ್ ಹೆಸರು ಸಹ ಇದೆ. ಸರ್ಕಾರದ ಹೆಸರು ಬದಲಾವಣೆ ವಿರುದ್ಧ 'ಬಸವನಗುಡಿ' ಸ್ಥಳೀಯರು 10,000ಕ್ಕೂ ಸಹಿ ಸಂಗ್ರಹಿಸಿದ್ದಾರೆ. ಈ ಅಭಿಯಾನ ಮುಂದುವರಿದಿದೆ.

ನಗರದ ಕೆಲವು ವಾರ್ಡ್‌ಗಳಂತೆ ಬಸವನಗುಡಿ ವಾರ್ಡ್ ಹೆಗ್ಗುರುತಿಗೂಕುತ್ತು ಬಂದಿದೆ. ಈ ವಾರ್ಡ್ 'ದೊಡ್ಡಗಣಪತಿ ವಾರ್ಡ್' ಆಗಿ ಬದಲಾಯಿಸಲಾಗಿದೆ. ಇನ್ನು ಬಡಾವಣೆಯ ಗಡಿಯನ್ನು ಮಾರ್ಪಾಡು ಮಾಡಲಾಗಿದೆ. ಹೊಸ ಹೆಸರು ಬೇಡ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಸವನಗುಡಿ ವಾರ್ಡ್ ಹೆಸರು ಬದಲಾವಣೆ ಮಾಡಿದರೆ ಇಲ್ಲಿನ ನಿವಾಸಿಗಳ ಭಾವನೆಗಳಿಗೆ ತೊಂದರೆ ಆಗಲಿದೆ. ಇದು ಪ್ರಸಿದ್ಧ ಬಡಾವಣೆ ಆಗಿದ್ದು, ಪಾರಂಪರಿಕ ತಾಣ, ದೇವಸ್ಥಾನಗಳು ಈ ವಾರ್ಡ್ ವ್ಯಾಪ್ತಿಗೆ ಬರಲಿದೆ. ದೇಶ ವಿದೇಶದಲ್ಲೂ ಈ ಬಡಾವಣೆಗೆ ಹೆಸರುವಾಸಿಯಾಗಿದೆ.
ಬಡಾವಣೆಯಲ್ಲಿ ಬಸವನ ದೇವಸ್ಥಾನ (ಗುಡಿ)ಯಿಂದ ಈ ಪ್ರದೇಶದಕ್ಕೆ ಬಡವನಗುಡಿ ಎಂದು ಹೆಸರು ಬಂದಿದೆ. ಆದ್ದರಿಂದ ಸರ್ಕಾರ ವಾರ್ಡ್ ಹೆಸರು ಬದಲಾಯಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಹಿ ಸಂಗ್ರಹ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಮನವಿ ಮೂಲಕ ಒತ್ತಾಯಿಸಲಿದ್ದಾರೆ ಎಂದು ವಿಜಯವಾಣಿ ವರದಿ ಮಾಡಿದೆ.












Click it and Unblock the Notifications